Sunday, May 19, 2024
Homeರಾಜಕೀಯವಿಶ್ವಕ್ಕೆ ಮಾದರಿ ವೈವಿಧ್ಯ, ವೈಶಿಷ್ಯಗಳ ಭಾರತದ ಚುನಾವಣೆ : ನ್ಯೂಯಾರ್ಕ್‌ ಟೈಮ್ಸ್ ಪ್ರಶಂಸೆ

ವಿಶ್ವಕ್ಕೆ ಮಾದರಿ ವೈವಿಧ್ಯ, ವೈಶಿಷ್ಯಗಳ ಭಾರತದ ಚುನಾವಣೆ : ನ್ಯೂಯಾರ್ಕ್‌ ಟೈಮ್ಸ್ ಪ್ರಶಂಸೆ

ನಮ್ಮದೇ ಆದ ಹಲವಾರು ಪತ್ರಿಕೆಗಳು ಮತ್ತು ಟಿವಿ ವಾಹಿನಿಗಳು ಭಾರತವನ್ನು ಹೀಗಳೆಯುತ್ತಿರುವ ಸನ್ನಿವೇಶದಲ್ಲಿ ಭಾರತದ ಚುನಾವಣೆಗಳ ಕುರಿತು ನ್ಯೂಯಾರ್ಕ್‌ ಟೈಮ್ಸೌ ಪತ್ರಿಕೆಯ ಪ್ರಶಂಸೆಯ ವರದಿಯ ನೋಟ ಇಲ್ಲಿದೆ. ಭಾರತೀಯ ಚುನಾವಣೆ ನಿಜಕ್ಕೂ ಭೂಮಿಯ ಮೇಲಿನ ಅತ್ಯುನ್ನತ ಪ್ರದರ್ಶನವಾಗಿದೆ. ವೈವಿಧ್ಯ ಮತ್ತು ಪ್ರಜಾಪ್ರಭುತ್ವ ನೀತಿಗೆ ಮಾದರಿಯಾಗಿದೆ. ಅಲ್ಲಿ 970 ದಶಲಕ್ಷಕ್ಕೂ ಅಧಿಕ ಮಂದಿ ಮತಚಲಾಯಿಸುತ್ತಾರೆ. ಅವರ ಪ್ರಾಚೀನ ನಾಗರಿಕತೆಯನ್ನು ಭವಿಷ್ಯದೆಡೆಗೆ ಕೊಂಡೊಯ್ಯುವ ಸಣ್ಣ ಭಾಗ ಇದಾಗಿದೆ,

ಹಿಂಸಾತಕ ನೆರೆರಾಷ್ಟ್ರಗಳಾದ ಪಾಕಿಸ್ತಾನ, ಚೀನಾ ಮತ್ತು ಮ್ಯಾನಾರ್‌ಗಳ ಅಸ್ಥಿರಗೊಳಿಸುವ ಪ್ರಯತ್ನಗಳ ನಡುವೆ ಭಾರತದ ಚುನಾವಣೆ ನಡೆದಾಗ ಅದರ ಪ್ರಭಾವ ಕಡಿಮೆಯದ್ದಲ್ಲ.ಭಾರತದ ಮುಂದೆ ಸವಾಲುಗಳು ಅಧಿಕವಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ಭಯೋತ್ಪಾದನೆಯನ್ನು ಹಿಮೆಟ್ಟಿಸುವುದು ಮತ್ತು ಅಭಿವೃದ್ಧಿ ಬೃಹತ್‌ ಸವಾಲಾಗಿದೆ. ಆದರೆ ಸವಾಲುಗಳನ್ನು ಮತ್ತು ನೆರೆ ರಾಷ್ಟ್ರಗಳನ್ನು ಪರಿಗಣಿಸಿದರೆ ನೂರಾರು ಭಾಷೆಗಳು ಮತ್ತು ಹಲವಾರು ಧರ್ಮಗಳನ್ನು ಒಳಗೊಂಡಿರುವ ಭೂಮಿಯ ಮೇಲಿನ ಅತ್ಯಂತ ವೈವಿಧ್ಯಮಯ ರಾಷ್ಟ್ರ ಇದಾಗಿದೆ. ವಿಸ್ಮಯವೆಂದರೆ ಇದರ ಸಂಸ್ಕೃತಿಗಳು ಪ್ರಾಚೀನ ಕಾಲದಿಂದ ಉಳಿದುಕೊಂಡು ಬಂದಿರುವುದಷ್ಟೇ ಅಲ್ಲ. ಬೆಳವಣಿಗೆ ಹೊಂದುತ್ತಲ್ಲೂ ಇವೆ.

ರಾಷ್ಟ್ರ:
ಭಾರತವು ಹಿಂದೂ ಧರ್ಮ, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳೂ ಹುಟ್ಟಿದ ದೇಶವಾಗಿದೆ. ಭೂಮಿಯ ಮೇಲಿನ ಎರಡನೇ ಅತಿ ದೊಡ್ಡ ಮುಸ್ಲಿಂ ಬಾಹುಳ್ಯದ ದೇಶವಾಗಿದೆ.

ಅಲ್ಲಿ ಕ್ರೈಸ್ತ ಧರ್ಮವು 2000 ವರ್ಷಗಳಿಂದ ಅಸ್ತಿತ್ವದಲ್ಲಿದೆ. ರೋಮನ್ನರು ತಮ ಎರಡನೇ ದೇಗುಲವನ್ನು ದಹಿಸಿದಾಗಿನಿಂದ ಪ್ರಾಚೀನ ಯಹೂದಿ ಸಿನಗಾಗ್‌ಗಳು ನೆಲೆಗೊಂಡಿವೆ. ಯಹೂದಿ ಸಮುದಾಯಗಳು ವಾಸಿಸುತ್ತಿವೆ. ಅದು ದಲೈಲಾಮ ಮತ್ತು ದೇಶ ಭ್ರಷ್ಟ ಟಿಬೇಟಿಯನ್ನರಿಗೆ ಆಶ್ರಯ ನೀಡಿದೆ.

ಪ್ರಾಚೀನ ತಾಯ್ನಾಡಾದ ಪರ್ಷಿಯನ್‌ನಿಂದ ಹೊರಹಾಕಿದ ಝೋ ರಾಷ್ಟ್ರಿಯನ್ನರು ಇಲ್ಲಿ ಪ್ರವಧರ್ಮಾನಕ್ಕೆ ಬಂದಿದ್ದಾರೆ. ಅಲ್ಲಿ ಆರ್ಮೇನಿಯನ್ನರು, ಸಿರಿಯನ್ನರು ಮತ್ತು ಪ್ಯಾರಿಸ್‌‍ ಮೂಲದ ಒಸಿಇಡಿ ಸೇರಿದಂತೆ ಹಲವಾರು ದೇಶಗಳ ಮೂಲನಿವಾಸಿಗಳು ನೆಲೆಕಂಡುಕೊಂಡಿದ್ದಾರೆ. ಕಳೆದ 2000 ಸಾವಿರ ವರ್ಷಗಳಲ್ಲಿ 1500 ವರ್ಷ ಕಾಲ ಇದು ಭೂಮಿಯ ಮೇಲಿನ ಅತಿದೊಡ್ಡ ಆರ್ಥಿಕತೆ ಎನಿಸಿದೆ.

ಕೇವಲ 200 ವರ್ಷಗಳ ಹಿಂದೆ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಅಲ್ಲಿ ಮೂವರು ಮುಸ್ಲಿಂ ರಾಷ್ಟ್ರಪತಿಗಳು ಆಯ್ಕೆಯಾಗಿದ್ದಾರೆ. ಓರ್ವ ಸಿಖ್‌್ಖ ಪ್ರಧಾನ ಮಂತ್ರಿ ಮತ್ತು ಕ್ಯಾಥೋಲಿಕ್‌ ಇಟಾಲಿಯನ್‌ ಮಹಿಳೆ ಆಡಳಿತ ಪಕ್ಷದ ಮುಖ್ಯಸ್ಥರಾಗಿದ್ದರು. ಅಲ್ಲಿ ಓರ್ವ ಮಹಿಳೆ ಕೂಡ ರಾಷ್ಟ್ರಾಧ್ಯಕ್ಷರಾಗಿದ್ದು, ರಾಕೆಟ್‌ ವಿಜ್ಞಾನಿಯಾಗಿ ರಾಷ್ಟ್ರದಲ್ಲಿ ಹೀರೋ ಆಗಿದ್ದ ಓರ್ವ ಮುಸ್ಲಿಂ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು.

ಅಲ್ಲಿನ ಪ್ರವರ್ಧಮಾನ ಆರ್ಥಿಕತೆ ಪ್ರತೀವರ್ಷ 40 ದಶಲಕ್ಷ ಜನರನ್ನು ಬಡತನದಿಂದ ಮೇಲೆತ್ತುತ್ತಿದೆ. 2025ರ ವೇಳೆಗೆ ಅಮೆರಿಕಾದ ಇಡೀ ಜನಸಂಖ್ಯೆಯಷ್ಟು ಜನರನ್ನು ಮಧ್ಯಮ ವರ್ಗದ ಮಟ್ಟಕ್ಕೆ ತರುವ ನಿರೀಕ್ಷೆಯಿದೆ. ಎಲ್ಲಾ ಅಸಾಧ್ಯ ಸವಾಲುಗಳು ಮತ್ತು ಸಂಕಷ್ಟದ ನಡುವೆಯೂ ಚಲನಚಿತ್ರ ಮತ್ತು ಕಲೆಗಳಲ್ಲಿ ಅದರ ಸಂಸ್ಕೃತಿ ವೈವಿಧ್ಯ ಅನಾವರಣಗೊಂಡಿದೆ. ಆರ್ಥಿಕ ಬೆಳವಣಿಗೆ ಆಶಾದಾಯಕವಾಗಿದೆ.

ಮತದಾನದಲ್ಲಿ ಉತ್ಸಾಹ ಕಂಡುಬರುತ್ತಿದೆ. ಅಲ್ಲಿ ಎಲ್ಲ ಮಹತ್ತರ ಶಕ್ತಿಗಳು ಪ್ರಭಾವಕ್ಕಾಗಿ ಸ್ಪರ್ಧಿಸುತ್ತಿವೆ. ಏಕೆಂದರೆ ಜಗತ್ತಿನಲ್ಲಿ ಭಾರತ ತನ್ನ ಸ್ಥಾನ ಗುರುತಿಸಿಕೊಳ್ಳುತ್ತಿದೆ. ಇದೆಲ್ಲಾ ನಡೆಯುತ್ತಿರುವುದು ಭಾರತದಲ್ಲಿ ಮತ್ತು ಜಗತ್ತಿನ ಜನಸಂಖ್ಯೆಯ 10 ನೇ 1 ಭಾಗದಷ್ಟು ಜನರು ಮತದಾನಕ್ಕೆ ಸಿದ್ಧರಾಗುತ್ತಿರುವುದು ಇಡೀ ವಿಶ್ವಕ್ಕೆ ಸ್ಫೂರ್ತಿದಾಯಕವಾಗಿದೆ.

RELATED ARTICLES

Latest News