Sunday, September 8, 2024
Homeರಾಷ್ಟ್ರೀಯ | Nationalಮಹಾರಾಜ್‌ಗಂಜ್‌ ಕ್ಷೇತ್ರದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಇಂಡೋ-ನೇಪಾಳ ಗಡಿಬಂದ್‌

ಮಹಾರಾಜ್‌ಗಂಜ್‌ ಕ್ಷೇತ್ರದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಇಂಡೋ-ನೇಪಾಳ ಗಡಿಬಂದ್‌

ಮಹಾರಾಜ್‌ಗಂಜ್‌ (ಯುಪಿ), ಮೇ 29 (ಪಿಟಿಐ) ಏಳನೇ ಹಂತದಲ್ಲಿ ಮಹಾರಾಜ್‌ಗಂಜ್‌ ಲೋಕಸಭಾ ಕ್ಷೇತ್ರದ ಮತದಾನದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂಡೋ-ನೇಪಾಳ ಗಡಿಯನ್ನು ಇಂದು ಸಂಜೆಯಿಂದ ಶನಿವಾರ ಸಂಜೆಯವರೆಗೆ 72 ಗಂಟೆಗಳ ಕಾಲ ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್‌ 1 ರಂದು ನಡೆಯಲಿರುವ ಮತದಾನದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಜಿಲ್ಲೆಯ ಎರಡು ನಿರ್ಣಾಯಕ ಗಡಿ ಬಿಂದುಗಳಲ್ಲಿ ಭಾರತ ಮತ್ತು ನೇಪಾಳದ ಜಂಟಿ ಪಡೆಗಳನ್ನು ನಿಯೋಜಿಸಲಾಗುವುದು ಮತ್ತು ತಡೆಗೋಡೆಗಳನ್ನು ಹಾಕಲಾಗುವುದು ಎಂದು ಜಿಲ್ಲಾ ವ್ಯಾಜಿಸ್ಟ್ರೇಟ್‌ ಅನ್ಯುಾ ಝಾ ಪಿಟಿಐಗೆ ತಿಳಿಸಿದ್ದಾರೆ.

ನೇಪಾಳದೊಂದಿಗಿನ ಕ್ರಾಸಿಂಗ್‌ ಪಾಯಿಂಟ್‌ಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಮತ್ತು ಈ ಅವಧಿಯಲ್ಲಿ ತುರ್ತು ಸೇವೆಗಳನ್ನು ಮಾತ್ರ ಅನುಮತಿಸಲಾಗುವುದು ಎಂದು ಡಿಎಂ ಹೇಳಿದರು.

ಮಹರಾಜ್‌ಗಂಜ್‌ ಕ್ಷೇತ್ರದಲ್ಲಿ ಮತದಾನಕ್ಕೆ ಮುನ್ನ ಜನರ ಅಕ್ರಮ ಸಾಗಣೆಯನ್ನು ತಡೆಯಲು ನೇಪಾಳದೊಂದಿಗಿನ ಭಾರತದ ಗಡಿಯುದ್ದಕ್ಕೂ ವ್ಯಾಪಾರ ಮತ್ತು ಸಾರಿಗೆ ಕೇಂದ್ರಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News