Sunday, May 19, 2024
Homeರಾಜ್ಯ25 ಸಾವಿರ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ : ಸಚಿವ ಎಂ.ಬಿ.ಪಾಟೀಲ್

25 ಸಾವಿರ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ : ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು, ಅ.12- ಅಮೆರಿಕದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಕೈಗೊಂಡಿದ್ದ ಪ್ರವಾಸದಿಂದ ರಾಜ್ಯದಲ್ಲಿ ಸುಮಾರು 25 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 25ರಿಂದ ಅ. 6ರವರೆಗೆ 12 ದಿನಗಳ ಕಾಲ ಅಮೆರಿಕಾದ ವಿವಿಧ ನಗರಗಳಲ್ಲಿ ಪ್ರವಾಸ ಕೈಗೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ವಿಶ್ವದ ಅತ್ಯುತ್ತಮ ಕಂಪೆನಿಗಳ, ಉದ್ಯಮಿಗಳ, ಹೂಡಿಕೆದಾರರ ಜೊತೆ ಸಭೆಗಳನ್ನು ನಡೆಸಿ ಕರ್ನಾಟಕದಲ್ಲಿ ಹೂಡಿಕೆಗಿರುವ ಅವಕಾಶಗಳ ಬಗ್ಗೆ ಚರ್ಚೆ ಮಾಡಿದ್ದೇವೆ.

ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ರಾಜ್ಯ ಸರ್ಕಾರದ ನಿಯೋಗವು ಅಮೆರಿಕಾದ ವಿವಿಧ ಸ್ಥಳಗಳಲ್ಲಿ ವಿವಿಧ ಕಂಪೆನಿಗಳ ಉನ್ನತ ಅಧಿಕಾರಿಗಳ ಜೊತೆ ವಿಸ್ತೃತವಾದ ವಿಚಾರ ವಿನಿಮಯ ನಡೆಸಲಾಯಿತು. ಕರ್ನಾಟಕದಲ್ಲಿರುವ ಹೂಡಿಕೆ ಸ್ನೇಹಿ ನೀತಿ, ಪರಿಸರ ಉತ್ತೇಜನ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟಿದ್ದು, ಅಮೆರಿಕ ಪ್ರವಾಸ ಯಶಸ್ವಿ ಭೇಟಿಯಾದಂತಾಗಿದೆ ಎಂದರು. ವೇಗವಾಗಿ ಬದಲಾಗುತ್ತಿರುವ ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ ಅಮೆರಿಕಾ ಬೇಟಿ ಅಗತ್ಯವಿದ್ದು, ಹೆಚ್ಚಿನ ಸಂಖ್ಯೆಯ ಜಾಗತೀಕ ಹೂಡಿಕೆದಾರರು ಭಾರತದ ಹೂಡಿಕೆಯನ್ನು ಆಕರ್ಷಕ ಹಾಗೂ ಹೂಡಿಕೆಗೆ ಸುರಕ್ಷಿತ ತಾಣ ಎಂದು ಭಾವಿಸಿದ್ದಾರೆ.

ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾದ ಗುತ್ತಿಗೆದಾರರು

ಎಲ್ಲ ಉದ್ಯಮ ಸ್ನೇಹಿ ನೀತಿಗಳು ಲಾಭ ದಾಯಕ ಪ್ರೋತ್ಸಾಹಗಳು, ತಾಂತ್ರಿಕ ಅರ್ಹತೆ, ನುರಿತ ಉದ್ಯೋಗಿಗಳ ಲಭ್ಯತೆಯೊಂದಿಗೆ ವಿದೇಶಿ ಹೂಡಿಕೆಗೆ ಕರ್ನಾಟಕವೂ ಪ್ರಸಕ್ತ ತಾಣವಾಗಿದೆ ಎಂಬುದನ್ನು ಈ ಪ್ರವಾಸದ ಸಂದರ್ಭದಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇವೆ. 12 ದಿನಗಳಲ್ಲಿ ಈ ನಿಯೋಗವು ವಿವಿಧ ವಲಯಗಳ ಕಂಪೆನಿ ಪ್ರತಿನಿಧಿಗಳೊಂದಿಗೆ 27 ಮುಖಾಮುಖಿ ಸಭೆಗಳು 9 ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಅದರಲ್ಲಿ ಮುಖ್ಯವಾಗಿ ಎಲೆಕ್ಟ್ರಾನಿಕ್, ಸೆಮಿ ಕಂಡಕ್ಟರ್, ಏರೋಸ್ಪೇಸ್, ರಕ್ಷಣೆ, ಆಟೋ ಮೊಬೈಲ್, ಇವಿ, ಮತ್ತಿತರ ವಲಯ ಗಳಲ್ಲಿ ಹೂಡಿಕೆಗೆ ಅವಕಾಶಗಳನ್ನು ಶೋಸಲಾಯಿತು. ಇದರಿಂದ ಪೂರೈಕೆದಾರರ ನೆಲೆ ವಿಸ್ತರಣೆ ಈ ಅಸ್ತಿತ್ವದಲ್ಲಿರುವ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆ ಬಲಪಡಿಸುವುದು ರಾಜ್ಯ ಸರ್ಕಾರದ ಸಹಯೋಗ ದೊಂದಿಗೆ ಉತ್ಕøಷ್ಠ ಕೇಂದ್ರಗಳ ಸ್ಥಾಪನೆ ಕುರಿತು ಉದ್ಯಮಿಗಳೊಂದಿಗೆ ಚರ್ಚೆ ನಡೆಸಲಾಯಿತು.

ರಾಜ್ಯದಲ್ಲಿ ಸದೃಡ ಕೈಗಾರಿಕ ಪರಿಸರ, ವಿಶ್ವ ದರ್ಜೆ ಮೂಲಸೌಕರ್ಯ, ಸುಗಮ ವ್ಯಾಪಾರ, ಕಾರ್ಯಾಚರಣೆ, ನುರಿತ ಹಾಗೂ ತರಬೇತಿ ಪಡೆದ ಕಾರ್ಮಿಕ ಶಕ್ತಿಜೊತೆಗೆ ಉದ್ಯಮಶೀಲ ರಾಜ್ಯವಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದೆ. ಪರಿಸರ ಸ್ನೇಹಿ ವಾತಾವರಣವನ್ನು ಕರ್ನಾಟಕದಲ್ಲಿದೆ ಎಂದು ಹೇಳಿದ್ದೇವೆ.

ಹಮಾಸ್ ಸರ್ವನಾಶದ ಶಪಥ ಮಾಡಿದ ಇಸ್ರೇಲ್

ತಯಾರಿಕಾ ವಲಯಕ್ಕೆ ಒತ್ತು:
ಐಟಿ- ಬಿಟಿ ಪ್ರಿಯಾಂಕ ಖರ್ಗೆ ಮಾತನಾಡಿ, ತಯಾರಿಕಾ ವಲಯದಲ್ಲಿ ಹೆಚ್ಚಿನ ಒತ್ತು ನೀಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಬಯೋಟೆಕ್ನಾಲಜಿಯಲ್ಲಿ ಶಾಮ್‍ಫರ್ಡ್ ವಿಶ್ವವಿದ್ಯಾಲಯ ಜೊತೆ ನವೋದ್ಯಮ ಹೆಚ್ಚಿಸಲು ಪಾಲುದಾರಿಕೆಗೆ ಮಾಡಿಕೊಳ್ಳಲು ಚರ್ಚಿಸಲಾಗಿದೆ ಅದಕ್ಕೆ ಅವರು ಒಪ್ಪಿದ್ದಾರೆ.

ಅವಿಷ್ಕಾರದಲ್ಲಿ 18ನೇ ಸ್ಥಾನದಲ್ಲಿದ್ದು, ಅದನ್ನು 10ರೊಳಗೆ ತರಲು ಬೇರೆ ಬೇರೆ ದೇಶಗಳೊಂದಿಗೆ ಒಪ್ಪಂದ ಅನಿವಾರ್ಯವಾಗಲಿದೆ. ರಾಜ್ಯದಲ್ಲಿ ಸುಮಾರು 28 ಸಾವಿರ ನವೋದ್ಯಮಗಳಿವೆ. ಹೊಸ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ಕೊಡುವ ಪ್ರಯತ್ನದ ಬಗ್ಗೆ ಮಾಡಿದ್ದೇವೆ. ವಿದೇಶಿಗಳಷ್ಟೇ ಅಲ್ಲ ಬೇರೆ ಬೇರೆ ರಾಜ್ಯಗಳು ಕೂಡ ನಮಗೆ ಸ್ರ್ಪಧಿಯಾಗಿವೆ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಹೂಡಿಕೆ ಬಗ್ಗೆ ಗಂಭೀರ ಪ್ರಯತ್ನ ಮಾಡುತ್ತಿದೆ.

ಹೂಡಿಕೆದಾರರು ಕೌಶಲ್ಯಾ ಧರಿತ ಮಾನವ ಸಂಪನ್ಮೂಲ ಉದ್ಯಮಶೀಲತೆ ಬಗ್ಗೆ ಅಪೇಕ್ಷಿತರಾಗಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎಲ್. ಸೆಲ್ವ ಕುಮಾರ್ ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಐಟಿ-ಬಿಟಿ ವಿಜ್ಞಾನ- ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್ ಉಪಸ್ಥಿತರಿದ್ದರು.

RELATED ARTICLES

Latest News