ನಾಗ್ ಪುರ, ಅ. 22 (ಪಿಟಿಐ) ಮಹರಾಷ್ಟದ ಹಿಂದಿನ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಬೀಳಿಸಲು ಪ್ರೇರಿಪಿಸಿದವರು ಯಾರು ಎನ್ನುವ ಮಾಹಿತಿ ಶೀಘ್ರದಲ್ಲೇ ಹೊರ ಬರಲಿವೆ. ಮಹಾರಾಷ್ಟದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರು ಈ ಕುರಿತು ಪುಸ್ತಕ ಬರೆಯುತ್ತಿದ್ದು ಅವರ ಪುಸ್ತಕ ಕೆಲ ಕಹಿಘಟನೆಗಳನ್ನು ಬೆಳಕಿಗೆ ತರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಪಿತೂರಿ ನಡೆಸಿದವರು ಯಾರು ಹಾಗೂ ಅಘಾಡಿ ಸರ್ಕಾರವನ್ನು ಬೀಳಿಸಲು ಕಾರಣಕರ್ತರು ಯಾರು ಎನ್ನುವುದನ್ನು ನನ್ನ ಪುಸ್ತಕ ಬಹಿರಂಗಪಡಿಸಲಿದೆ ಎಂದು ಅವರು ತಿಳಿಸಿದ್ದಾರೆ. ಎನ್‌ಸಿಪಿ (ಎಸ್‌ಪಿ) ನಾಯಕ ದೇಶಮುಖ್ ಅವರು ತಮ್ಮ 14 ತಿಂಗಳ ಸೆರೆವಾಸದಲ್ಲಿ ಡೈರಿ ಆಫ್ ಹೋಮ್ ಮಿನಿಸ್ಟರ್ ಎಂಬ ಪುಸ್ತಕವನ್ನು ಬರೆಯಲು ಪ್ರಾರಂಭಿಸಿದ್ದರು.
ಸುದೀರ್ಘ ನ್ಯಾಯಾಲಯದ ಹೋರಾಟದ ನಂತರ ಅವರು ಜೈಲಿನಿಂದ ಹೇಗೆ ಹೊರಬಂದರು ಎಂಬುದರ ಕುರಿತು ಬೆಳಕು ಚೆಲ್ಲುವ ಪುಸ್ತಕವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮತ್ತು ಮರಾಠಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಾಗಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಜಿ ಗೃಹ ಸಚಿವರು ಭ್ರಷ್ಟಾಚಾರದ ಆರೋಪದಲ್ಲಿ ಸಿಬಿಐ ಪ್ರಕರಣವನ್ನು ಎದುರಿಸುತ್ತಿದ್ದಾರೆ ಮತ್ತು ಅಕ್ರಮ ಹಣ ವರ್ಗಾವಣೆಗಾಗಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಮತ್ತೊಂದು ಪ್ರಕರಣವನ್ನು ಎದುರಿಸುತ್ತಿದ್ದಾರೆ. ದೇಶಮುಖ್ ಅವರು ಏಪ್ರಿಲ್ 2021 ರಲ್ಲಿ ರಾಜ್ಯ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ನವೆಂಬರ್ 2021 ರಲ್ಲಿ ಅವರನ್ನು ಬಂಧಿಸಲಾಯಿತು. ಡಿಸೆಂಬರ್ 2022 ರಲ್ಲಿ ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದರು.
ನನ್ನ ವಿರುದ್ಧದ ಸಂಪೂರ್ಣ ಪಿತೂರಿ, ನನ್ನ ಮೂಲಕ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಹೇಗೆ ಉರುಳಿಸಲು ಪ್ರಯತ್ನಿಸಲಾಯಿತು ಮತ್ತು ನಾನು ನಿರಾಕರಿಸಿದ್ದರಿಂದ ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ 14 ತಿಂಗಳ ಕಾಲ ಜೈಲಿಗೆ ಹಾಕಲಾಯಿತು ಎಂಬುದರ ಕುರಿತು ಪುಸ್ತಕವು ಹೇಳುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅವರು ಮಹಾರಾಷ್ಟçದ ಗೃಹ ಸಚಿವರಾಗಿದ್ದಾಗ ತಮ್ಮ ವಿರುದ್ಧ ಯಾರು ಪಿತೂರಿ ಮಾಡಿದರು ಮತ್ತು ಹೇಗೆ ಮತ್ತು ಆಗಿನ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವನ್ನು ಉರುಳಿಸಲು ಹೇಗೆ ಮತ್ತು ಯಾರು ಕೆಲಸ ಮಾಡಿದರು ಎಂಬುದನ್ನು ಪುಸ್ತಕವು ಹೇಳುತ್ತದೆ ಎಂದು ತಿಳಿಸಿದ್ದಾರೆ.