Monday, May 6, 2024
Homeಬೆಂಗಳೂರುನಾಗರೀಕರ ಸುರಕ್ಷತೆಗಾಗಿ ಬೆಂಗಳೂರಲ್ಲಿ ಹೆಚ್ಚುವರಿ 2500 ಸಿಸಿ ಕ್ಯಾಮೆರಾ ಅಳವಡಿಕೆ

ನಾಗರೀಕರ ಸುರಕ್ಷತೆಗಾಗಿ ಬೆಂಗಳೂರಲ್ಲಿ ಹೆಚ್ಚುವರಿ 2500 ಸಿಸಿ ಕ್ಯಾಮೆರಾ ಅಳವಡಿಕೆ

ಬೆಳಗಾವಿ, ಡಿ.14-ರಾಜಧಾನಿ ಬೆಂಗಳೂರಿನಲ್ಲಿ ನಾಗರೀಕರ ಸುರಕ್ಷತೆಗೆ ಹೆಚ್ಚುವರಿ 2500 ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಬೆಂಗಳೂರು ವ್ಯಾಪ್ತಿಯಲ್ಲಿ 7500 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಜತೆಗೆ ಕಮಾಂಡರ್ ಸೆಂಟನರ್‍ನಲ್ಲಿ ಇದರ ಕಾರ್ಯಾಚರಣೆಯನ್ನು ವೀಕ್ಷಣೆ ಮಾಡಲಾಗುತ್ತಿದೆ. ಇನ್ನೂ ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಡಿಯಲ್ಲಿ ಹೆಚ್ಚುವರಿಯಾಗಿ 2500 ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುವುದು ಎಂದರು.

ಬೆಂಗಳೂರನ್ನು ವರ್ಲ್ಡ್ ಕ್ಲಾಸ್ ವಾಸಯೋಗ್ಯ ನಗರ ಮಾಡ್ತೀವಿ : ಡಿಕೆಶಿ

ಕ್ಯಾಮೆರಾಗಳು ಹೆಚ್ಚು ಗುಣಮಟ್ಟದ್ದು ಆಗಿದ್ದು, ವ್ಯಕ್ತಿಗಳ ಕೈಯಲ್ಲಿರುವ ಗಡಿಯಾರದ ಸಮಯವನ್ನು ನೋಡಬಹುದಾಗಿದೆ. ಇನ್ನೂ, ಹೆಚ್ಚಿನ ಕ್ಯಾಮೆರಾಗಳನ್ನು ವಾಣಿಜ್ಯ ಕಟ್ಟಡ, ಪ್ರದೇಶ, ಶಾಲಾ ಕಾಲೇಜು, ಸರ್ಕಾರಿ ಕಟ್ಟಡ, ಬಸ್ ನಿಲ್ದಾಣಗಳಲ್ಲಿ ಅಳವಡಿಸಿ ವಿಶೇಷ ನಿಗಾ ಇರಿಸಲಾಗಿದೆ ಎಂದು ಅವರು ಹೇಳಿದರು.

RELATED ARTICLES

Latest News