Homeಅಂತಾರಾಷ್ಟ್ರೀಯಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 30 ಭಾರತೀಯ ಟ್ರಕ್‌ ಚಾಲಕರ ಬಂಧನ

ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 30 ಭಾರತೀಯ ಟ್ರಕ್‌ ಚಾಲಕರ ಬಂಧನ

30 Indians among illegal immigrant truck drivers arrested in US, face deportation

ನ್ಯೂಯಾರ್ಕ್‌, ಜೂ. 2 – ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿ ವಾಣಿಜ್ಯ ಟ್ರಕ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸುಮಾರು 30 ಭಾರತೀಯರನ್ನು ಫೆಡರಲ್‌ ಅಧಿಕಾರಿಗಳು ಬಂಧಿಸಿದ್ದು, ಅವರನ್ನು ಶೀಘ್ರದಲ್ಲೇ ಗಡೀಪಾರು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 11ರಿಂದ 15ರವರೆಗೆ ಅರಿಜೋನಾದ ಯುಮಾ ಸೆಕ್ಟರ್‌ ಗಡಿ ಭದ್ರತಾ ಪಡೆ ನಡೆಸಿದ ಆಪರೇಷನ್‌ ಚೆಕ್‌ಮೇಟ್** ಕಾರ್ಯಾಚರಣೆಯಲ್ಲಿ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 52 ಮಂದಿಯನ್ನು ಬಂಧಿಸಲಾಗಿದೆ.

ಇವರಲ್ಲಿ 36 ಮಂದಿ ಸೆಮಿ-ಟ್ರಕ್‌ಗಳನ್ನು ಚಲಾಯಿಸುತ್ತಿದ್ದ ಚಾಲಕರಾಗಿದ್ದು, ಅವರ ಪೈಕಿ 30 ಮಂದಿ ಭಾರತೀಯರು. ಉಳಿದ ಆರು ಮಂದಿ ಮೆಕ್ಸಿಕೊ, ಎಲ್‌ ಸಾಲ್ವಡಾರ್‌ ಮತ್ತು ರಷ್ಯಾ ಮೂಲದವರಾಗಿದ್ದಾರೆ.

ಬಂಧಿತ ಚಾಲಕರಲ್ಲಿ ಕೆಲವರು ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್‌, ವಾಷಿಂಗ್ಟನ್‌ ಮತ್ತು ವರ್ಜೀನಿಯಾ ರಾಜ್ಯಗಳಿಂದ ಪಡೆದ ವಾಣಿಜ್ಯ ಚಾಲನಾ ಪರವಾನಗಿಗಳನ್ನು ಹೊಂದಿದ್ದರು. ಆದರೆ ಕೆಲವರ ಬಳಿ ಯಾವುದೇ ರೀತಿಯ ಚಾಲನಾ ಪರವಾನಗಿಯೇ ಇರಲಿಲ್ಲ ಎಂದು ತಿಳಿಸಲಾಗಿದೆ.

ಹೆಚ್ಚಿನವರ ಬಳಿ ಉದ್ಯೋಗ ಅನುಮತಿ ದಾಖಲೆಗಳು ಇದ್ದರೂ, ಅವು ಜೋ ಬೈಡನ್‌ ಆಡಳಿತಾವಧಿಯಲ್ಲಿ ಪಡೆದಿದ್ದವು ಮತ್ತು ಈಗ ಮಾನ್ಯತೆಯನ್ನು ಕಳೆದುಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆಡರಲ್‌ ಕಾನೂನುಗಳ ಅನ್ವಯ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಅವರನ್ನು ಗಡೀಪಾರು ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಯುಮಾ ಸೆಕ್ಟರ್‌ನ ಗಡಿ ಭದ್ರತಾ ಪಡೆಯ ಕಾರ್ಯನಿರ್ವಾಹಕ ಮುಖ್ಯಸ್ಥ ಡಸ್ಟಿನ್‌ ಕಾಡಲ್‌, “ಅಕ್ರಮವಾಗಿ ದೇಶದಲ್ಲಿರುವ ಚಾಲಕರು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡಬಹುದು. ಇಂತಹವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವ ಮೂಲಕ ರಸ್ತೆ ಅಪಘಾತಗಳನ್ನು ತಡೆಯಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.

ಇದರ ನಡುವೆ, ಡೊನಾಲ್ಡ್‌ ಟ್ರಂಪ್‌ ಆಡಳಿತದ ಅವಧಿಯಲ್ಲಿ ಅಮೆರಿಕದ ಸಾರಿಗೆ ಇಲಾಖೆ ಅರ್ಹತೆ ಇಲ್ಲದ ವಿದೇಶಿ ಚಾಲಕರು ವಾಣಿಜ್ಯ ಟ್ರಕ್‌ ಮತ್ತು ಬಸ್‌ಗಳ ಚಾಲನಾ ಪರವಾನಗಿ ಪಡೆಯುವುದನ್ನು ತಡೆಯುವ ಆದೇಶವನ್ನೂ ಹೊರಡಿಸಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಭಾರತೀಯ ಮೂಲದ ಕೆಲ ಟ್ರಕ್‌ ಚಾಲಕರು ಅಮೆರಿಕದಲ್ಲಿ ಮಾರಣಾಂತಿಕ ರಸ್ತೆ ಅಪಘಾತಗಳಿಗೆ ಕಾರಣರಾದ ಆರೋಪದ ಮೇಲೆ ಬಂಧಿತರಾಗಿರುವ ಘಟನೆಗಳೂ ವರದಿಯಾಗಿವೆ.

RELATED ARTICLES

Latest News