ಬ್ಯಾಂಕಾಕ್,ಜ.14 -ಈಶಾನ್ಯ ಥೈಲ್ಯಾಂಡ್ನಲ್ಲಿ ಇಂದು ಬೆಳಿಗ್ಗೆ ಪ್ರಯಾಣಿಕ ರೈಲಿನ ಮೇಲೆ ಕ್ರೇನ್ ಬಿದ್ದು 22 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲಿವೇಟೆಡ್ ಹೈ-ಸ್ಪೀಡ್ ರೈಲು ನಿರ್ಮಿಸಲು ಬಳಸಲಾಗುತ್ತಿದ್ದ ಕ್ರೇನ್, ಬ್ಯಾಂಕಾಕ್ನಿಂದ ಉಬೊನ್ ರಾಟ್ಚಥಾನಿ ಪ್ರಾಂತ್ಯಕ್ಕೆ ಪ್ರಯಾಣಿಸುತ್ತಿದ್ದ ಚಲಿಸುವ ರೈಲಿನ ಮೇಲೆ ಬಿದ್ದು ರೈಲು ಹಳಿತಪ್ಪಿ ಬೆಂಕಿ ಹೊತ್ತಿಕೊಂಡಿತು ಎಂದು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.
22 ಶವಗಳನ್ನು ಹೊರತೆಗೆಯಲಾಗಿದೆ ಮತ್ತು ಕನಿಷ್ಠ 30 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ರೈಲಿನಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಬೆಂಕಿ ನಿಯಂತ್ರಣದಲ್ಲಿದೆ ಮತ್ತು ರೈಲಿನೊಳಗೆ ಸಿಲುಕಿರುವ ಜನರನ್ನು ರಕ್ಷಣಾ ಸಿಬ್ಬಂಧಿ ಹುಡುಕುತ್ತಿದ್ದಾರೆ ಎಂದು ಇಲಾಖೆ ತಿಳಿಸಿದೆ.
