Homeಅಂತಾರಾಷ್ಟ್ರೀಯಭಾರತದ ಆರ್ಥಿಕತೆ ಮತ್ತು ಮೋದಿ ಸಾಧನೆ ಶ್ಲಾಘಿಸಿದ ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್‌‍

ಭಾರತದ ಆರ್ಥಿಕತೆ ಮತ್ತು ಮೋದಿ ಸಾಧನೆ ಶ್ಲಾಘಿಸಿದ ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್‌‍

'Global economic powerhouse': Australian PM Albanese praises India, PM Modi in parliament

ಕ್ಯಾನ್‌ಬೆರಾ, ಮೇ 28 (ಪಿಟಿಐ)- ಭಾರತದ ಆರ್ಥಿಕ ಪ್ರಗತಿಯನ್ನು ಇಂಡೋ-ಪೆಸಿಫಿಕ್‌ ಪ್ರದೇಶಕ್ಕೆ ಅಸಾಧಾರಣ ಅವಕಾಶ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌‍ ಬಣ್ಣಿಸಿದ್ದಾರೆ. ಭರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೀಘ್ರದಲ್ಲೇ ಮತ್ತೆ ಆತಿಥ್ಯ ವಹಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಕ್ಯಾನ್‌ಬೆರಾದ ಸಂಸತ್ತಿನಲ್ಲಿ ಮಾತನಾಡಿದ ಅಲ್ಬನೀಸ್‌‍, ಈಗಾಗಲೇ ವಿಶ್ವದ ಅತಿದೊಡ್ಡ ಜನಸಂಖ್ಯೆ ಹೊಂದಿರುವ ಭಾರತ ಈ ದಶಕದಲ್ಲೇ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಿದರು.

ಇದು ನಮ ಪ್ರದೇಶಕ್ಕೆ ಅಸಾಧಾರಣ ಅವಕಾಶವಾಗಿದೆ. ನಾವು ಪೆಸಿಫಿಕ್‌ ರಾಷ್ಟ್ರವಾಗಿದ್ದರೂ, ಭಾರತೀಯ ಮಹಾಸಾಗರ ರಾಷ್ಟ್ರವೂ ಆಗಿದ್ದೇವೆ ಎಂದು ಅವರು ಹೇಳಿದರು.2022ರಲ್ಲಿ ಸಹಿ ಮಾಡಲಾದ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ ಭಾರತ-ಆಸ್ಟ್ರೇಲಿಯಾ ನಡುವಿನ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಬಲಪಡಿಸಿದೆ ಎಂದ ಅವರು, ಸಂಸ್ಕೃತಿ, ಶಿಕ್ಷಣ ಮತ್ತು ಕ್ರಿಕೆಟ್‌ ಮೂಲಕವೂ ಎರಡೂ ರಾಷ್ಟ್ರಗಳು ಇನ್ನಷ್ಟು ಹತ್ತಿರವಾಗಿವೆ ಎಂದು ಹೇಳಿದರು.

1991ರಲ್ಲಿ ಬ್ಯಾಕ್‌ಪ್ಯಾರ್ಕ ಆಗಿ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ್ದ ನೆನಪನ್ನು ಅಲ್ಬನೀಸ್‌‍ ಹಂಚಿಕೊಂಡರು. ನಂತರ ಪ್ರಧಾನಿಯಾಗಿದ್ದ ವೇಳೆ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾಗಿ ತಿಳಿಸಿದರು.

ಭಾರತವನ್ನು ಅರ್ಥಮಾಡಿಕೊಳ್ಳಲು ಅತ್ಯುತ್ತಮ ಮಾರ್ಗವೆಂದರೆ ಬಸ್‌‍ ಅಥವಾ ರೈಲಿನಲ್ಲಿ ಪ್ರಯಾಣಿಸುವುದು. ಅಲ್ಲಿನ ಜನರ ಆತೀಯತೆಯನ್ನು ನೇರವಾಗಿ ಅನುಭವಿಸುವುದು ಅದ್ಭುತ ಅನುಭವ ಎಂದು ಅವರು ಹೇಳಿದರು.ಇದೇ ರೀತಿ, ಪ್ರಧಾನಿ ಮೋದಿ ಅವರನ್ನು ಶೀಘ್ರದಲ್ಲೇ ಇಲ್ಲಿ ಆತಿಥ್ಯ ವಹಿಸುವ ಗೌರವ ನನಗೆ ಮತ್ತೆ ಸಿಗಲಿದೆ. ಎರಡನೇ ಬಾರಿ ಅದನ್ನು ಪುನರಾವರ್ತಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಅಲ್ಬನೀಸ್‌‍ ಹೇಳಿದರು.

ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಸುಮಾರು 10 ಲಕ್ಷ ಭಾರತೀಯ ಮೂಲದ ಸಮುದಾಯ ಈ ಭೇಟಿಯನ್ನು ಇನ್ನಷ್ಟು ವಿಶೇಷಗೊಳಿಸಲಿದೆ ಎಂದು ಅವರು ಹೇಳಿದರು. ಈ ಸಮುದಾಯವೇ ಆಸ್ಟ್ರೇಲಿಯಾದಲ್ಲಿ ವೇಗವಾಗಿ ಬೆಳೆಯುತ್ತಿರುವ ವಲಸಿಗ ಸಮುದಾಯವಾಗಿದೆ ಎಂದು ಉಲ್ಲೇಖಿಸಿದರು.

ಪ್ರಧಾನಿ ಮೋದಿ ಕೊನೆಯದಾಗಿ 2023ರ ಮೇ ತಿಂಗಳಲ್ಲಿ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದರು.
ಆಸ್ಟ್ರೇಲಿಯಾದ ಭಾರತೀಯ ಸಮುದಾಯ ದೇಶದ ಆರ್ಥಿಕತೆಯನ್ನು ಬಲಪಡಿಸಿದ್ದು, ಅನೇಕ ಸಣ್ಣ ಉದ್ಯಮಗಳಿಗೆ ಸಹಾಯವಾಗಿದೆ ಎಂದು ಅಲ್ಬನೀಸ್‌‍ ಹೇಳಿದರು.

ನಿಮ ಕಾರಣದಿಂದಲೇ ನಮ ದೇಶ ಇನ್ನಷ್ಟು ಉತ್ತಮವಾಗಿದೆ. ನನ್ನ ಸರ್ಕಾರ ಸದಾ ನಿಮ ಮತ್ತು ನಿಮ ಹಿತಾಸಕ್ತಿಗಳ ಪರ ನಿಲ್ಲುತ್ತದೆ. ಸಮಾಜವನ್ನು ವಿಭಜಿಸುವ ಯಾವುದೇ ಪ್ರಯತ್ನವನ್ನು ನಾವು ತಿರಸ್ಕರಿಸುತ್ತೇವೆ ಎಂದು ಅವರು ಹೇಳಿದರು.

ಸಂಸತ್ತಿನಲ್ಲಿ ಅಲ್ಬನೀಸ್‌‍ ಮಾತನಾಡಿದ ವಿಡಿಯೊವನ್ನು ಭಾರತದಲ್ಲಿನ ಆಸ್ಟ್ರೇಲಿಯಾ ಹೈಕಮಿಷನರ್‌ ಫಿಲಿಪ್‌ ಗ್ರೀನ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರತದೊಂದಿಗೆ ತಮ ಪ್ರಧಾನಿಯ ಆತೀಯ ಸಂಬಂಧವು ತನ್ನ ಕೆಲಸವನ್ನು ಅನಂತವಾಗಿ ಅರ್ಥಪೂರ್ಣ ಮಾಡಿದೆ ಎಂದು ಹೇಳಿದ್ದಾರೆ.

RELATED ARTICLES

Latest News