Friday, December 12, 2025
Homeಅಂತಾರಾಷ್ಟ್ರೀಯಈಶಾನ್ಯದಲ್ಲಿ 6.7 ತೀವ್ರತೆಯ ಭೂಕಂಪ, ಸುನಾಮಿ ಭೀತಿ

ಈಶಾನ್ಯದಲ್ಲಿ 6.7 ತೀವ್ರತೆಯ ಭೂಕಂಪ, ಸುನಾಮಿ ಭೀತಿ

Magnitude 6.7 earthquake hits Japan’s northeast, tsunami warning issued

ಟೋಕಿಯೊ, ಡಿ. 12 (ಎಪಿ) ಜಪಾನ್‌ನಲ್ಲಿ ಮತ್ತೆ ಸುನಾಮಿ ಭೀತಿ ಶುರುವಾಗಿದೆ. ಜಪಾನ್‌ನ ಈಶಾನ್ಯದಲ್ಲಿ 6.7 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಜಪಾನ್‌ ಹವಾಮಾನ ಸಂಸ್ಥೆ ತಿಳಿಸಿದೆ.

ಹಾನಿ ಮತ್ತು ಗಾಯಗಳ ಬಗ್ಗೆ ತಕ್ಷಣಕ್ಕೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.ಈ ವಾರದ ಆರಂಭದಲ್ಲಿ ಉತ್ತರದಲ್ಲಿ ಸಂಭವಿಸಿದ 7.5 ತೀವ್ರತೆಯ ಭೂಕಂಪದ ನಂತರ ಶುಕ್ರವಾರದ ಭೂಕಂಪ ಸಂಭವಿಸಿದ್ದು, ಇದು ಪೆಸಿಫಿಕ್‌ ಕರಾವಳಿ ಸಮುದಾಯಗಳಲ್ಲಿ ಗಾಯಗಳು, ಲಘು ಹಾನಿ ಮತ್ತು ಸುನಾಮಿಯನ್ನು ಉಂಟುಮಾಡಿದೆ.

ಜಪಾನ್‌ನ ಪ್ರಮುಖ ಹೊನ್ಶು ದ್ವೀಪದ ಉತ್ತರದ ತುದಿಯಲ್ಲಿರುವ ಅಮೋರಿ ಕರಾವಳಿಯಲ್ಲಿ ಸೋಮವಾರ ಸಂಭವಿಸಿದ ಆ ಹಿಂದಿನ ಭೂಕಂಪದಲ್ಲಿ ಕನಿಷ್ಠ 34 ಜನರು ಗಾಯಗೊಂಡಿದ್ದಾರೆ. ಈ ಭೂಕಂಪನದ ಬೆನ್ನಲ್ಲೆ ಸುನಾಮಿ ಎದುರಾಗುವ ಸಾಧ್ಯತೆ ಇರುವುದರಿಂದ ಜನ ಎಚ್ಚರಿಕೆಯಿಂದ ಇರಬೇಕು ಎಂದು ಜಪಾನ್‌ ಸರ್ಕಾರ ಜನರಿಗೆ ಮನವಿ ಮಾಡಿಕೊಂಡಿದೆ.

RELATED ARTICLES

Latest News