ವಾಷಿಂಗ್ಟನ್, ಮಾ.1- ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ ಖಮೇನಿಯ ಉಸಿರು ನಿಂತಿದೆ. ಇದು ಇರಾನ್‌ನ ಜನತೆಗೆ ಸಂದ ನ್ಯಾಯವಷ್ಟೇ ಅಲ್ಲ, ಎಲ್ಲ ಮಹಾನ್ ಅಮೇರಿಕನ್ನರು, ಖಮೇನಿ ಮತ್ತು ಅವರ ರಕ್ತಪಿಪಾಸು ಗ್ಯಾಂಗ್‌ನಿಂದ ಹತರಾದ ಅಥವಾ ಸಂಕಷ್ಟಕ್ಕೀಡಾದ ಅನೇಕ ದೇಶಗಳ ಜನತೆಗೆ ದೊರೆತ ನ್ಯಾಯವಾಗಿದೆ ಎಂದು ಅಮೇರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಟ್ರೂಥ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಮ ಬೇಹುಗಾರಿಕಾ ಸಾಮರ್ಥ್ಯ ಮತ್ತು ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯನ್ನು ಖಮೇನಿ ಮತ್ತು ಅವನೊಂದಿಗೆ ಹತರಾದ ಇತ್ತ ಅನೇಕ ನಾಯಕರು ತಡೆಯಲು ಸಾಧ್ಯವಾಗಲಿಲ್ಲ. ಇದು ಇರಾನ್‌ನ ಜನತೆಗೆ ತಮ ದೇಶವವನ್ನು ಮರಳಿ ಪಡೆಯುವುದಕ್ಕೆ ಏಕೈಕ ಮಹತ್ತರ ಅವಕಾಶವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಅವರ ಐಆರ್‌ಜಿಸಿ , ಮಿಲಿಟರಿ, ಇತರ ಭದ್ರತಾ ಮತ್ತು ಪೊಲೀಸ್ ಪಡೆಗಳು ಯುದ್ಧ ಮುಂದುವರೆಸಲು ಬಯಸುತ್ತಿಲ್ಲ ಎಂದು ಕೇಳಿದ್ದೇನೆ. ಕಳೆದ ರಾತ್ರಿ ನಾನು ಹೇಳಿದಂತೆ ಅವರು ಪ್ರತಿರೋಧ ಒಡ್ಡದರೆ ಬಳಿಕ ಮರಣವೇ ಗತಿ! ಐಆರ್‌ಜಿಸಿ ಮತ್ತು ಪೊಲೀಸ್ ಪಡಗಳು ಇರಾನಿಯನ್ ದೇಶ ಪ್ರೇಮಿಗಳ ಜೊತೆ ವಿಲೀನವಾಗಿ ದೇಶಕ್ಕೆ ಅದು ಬಯಸುತ್ತಿರುವ ಮಹಾನತೆಯನ್ನು ಮರಳಿ ತರುವ ಘಟಕವಾಗುತ್ತದೆ ಎಂದು ಆಶಿಸುತ್ತೇವೆ.
ಆ ಪ್ರಕ್ರಿಯೆ ಖಮೇನಿಯ ಸಾವಿನೊಂದಿಗೆ ಶೀಘ್ರವೇ ಪ್ರಾರಂಭವಾಗಬೇಕು. ಅಷ್ಟೇ ಅಲ್ಲ, ಕೇವಲ ಒಂದೇ ದಿನದಲ್ಲಿ ಧ್ವಂಸವಾಗಿರುವ ದೇಶವು ಇದನ್ನು ಆರಂಭಿಸಬೇಕು ಎಂದು ಟ್ರಂಪ್ ತಾಕೀತು ಮಾಡಿದ್ದಾರೆ.ಹೀಗಿದ್ದರೂ ನಾವು ನಮ ಧ್ಯೇಯೋದ್ದೇಶ ಮತ್ತು ಗುರಿಯನ್ನು ತಲುಪುವ ತನಕ ವಾರವಿಡೀ ಭಾರಿ ಬಾಂಬ್‌ದಾಳಿ ಅನಿರ್ದಿಷ್ಟಾವಧಿಗೆ ಮುಂದುವರೆಯುತ್ತದೆ ಎಂದು ಟ್ರಂಪ್ ಗುಡುಗಿದ್ದಾರೆ.
