ನ್ಯೂಯಾರ್ಕ್, ಜ.5- ರಷ್ಯಾದಿಂದ ಭಾರತ ದೇಶ ತೈಲ ಖರೀದಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಸಂತೋಷವಾಗಿಲ್ಲ ಎಂಬುವುದು ತಿಳಿದಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಭಾರತದ ರಪ್ತಿನ ಮೇಲೆ ಬಹಳ ಬೇಗನೆ ಸಂಕ ಹೆಚ್ಚಿಸಬಹುದು ಎಂದು ಟ್ರಂಪ್ ಇದೇ ವೇಳೆ ಮಾರ್ಮಿಕವಾಗಿ ಹೇಳಿದ್ದಾರೆ.
ಫ್ಲೋರಿಡಾದಿಂದ ವಾಷಿಂಗ್ಟನ್ ಡಿಸಿಗೆ ಹೋಗುವ ಮಾರ್ಗದಲ್ಲಿ ಏರ್ ಫೋರ್ಸ್ ಒನ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೂಲತಃ ನನ್ನನ್ನು ಸಂತೋಷಪಡಿಸಲು ಬಯ ಸಿದ್ದರು. ಮೋದಿ ತುಂಬಾ ಒಳ್ಳೆಯ ವ್ಯಕ್ತಿ ಅವರು ಒಳ್ಳೆಯವರು ಆದರೆ ನಾನು ಸಂತೋಷವಾಗಿಲ್ಲ ಎಂದು ಅವರಿಗೆ ತಿಳಿದಿತ್ತು,
ಮತ್ತು ನನ್ನನ್ನು ಸಂತೋಷಪಡಿಸುವುದು ಮುಖ್ಯವಾಗಿತ್ತು ಎಂದು ಚೇಡಿಸಿದ್ದಾರೆ. ಅವರು ಸಂಪ್ರದಾಯದಂತೆ ಮುಂದುವರೆಯುತ್ತಾರೆ ಮತ್ತು ನಾವು ಅವರ ಮೇಲೆ ಬೇಗನೆ ಸುಂಕವನ್ನು ಹೆಚ್ಚಿಸಬಹುದು.ಅದು ಅವರಿಗೆ ತುಂಬಾ ಕೆಟ್ಟದಾಗಿರುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಭಾರತದ ಮೇಲೆ ವಿಧಿಸಿರುವ ಸುಂಕಗಳು ಈಗ ಗಣನೀಯವಾಗಿ ಕಡಿಮೆ ಅಮೆರಿಕ ಸೆನೆಟರ್ ಲಿಂಡ್ಸೆಗ್ರಹಾಂ ಹೇಳಿದ್ದಾರೆ .ರಷ್ಯಾದಿಂದ ತೈಲ ಖರೀದಿಸುವ ದೇಶಗಳಿಂದ ಶೇ. 500 ರಷ್ಟು ಸುಂಕ ವಿಧಿಸುವ ಮಸೂದೆಯ ಬಗ್ಗೆ ಗ್ರಹಾಂ ಮಾತನಾಡಿದರು.
ರಷ್ಯಾ-ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸಲುರಷ್ಯಾದ ಅಧ್ಯಕ್ಷ ವ್ಯಾಲಾಡಿಮಿರ್ ಪುಟಿನ್ ಮೇಲೆ ಅವರ ಗ್ರಾಹಕರ ಒತ್ತಡ ಹೇರಬೇಕು ಎಂದು ಗ್ರಹಾಂ ಹೇಳಿದರು. ಈ ನಡುವೆ ನಮ ನಿರ್ಬಂಧಗಳು ರಷ್ಯಾವನ್ನು ತೀವ್ರವಾಗಿ ನೋಯಿಸುತ್ತಿವೆ ಎಂದು ಟ್ರಂಪ್ ಹೇಳಿದರು ಮತ್ತು ನಂತರ ಭಾರತದ ಬಗ್ಗೆ ಪ್ರಸ್ತಾಪಿಸಿದರು. ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಅಮೆರಿಕ ಭಾರತದ ಮೇಲೆ ಶೇ. 25 ರಷ್ಟು ಸುಂಕ ವಿಧಿಸಿದೆ ಎಂದು ಗ್ರಹಾಂ ನಂತರ ಹೇಳಿದರು.
