Tuesday, January 13, 2026
Homeಅಂತಾರಾಷ್ಟ್ರೀಯಇರಾನ್‌ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ.25 ರಷ್ಟು ದಂಡ ; ಟ್ರಂಪ್‌

ಇರಾನ್‌ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ.25 ರಷ್ಟು ದಂಡ ; ಟ್ರಂಪ್‌

US President warns of 25% tariff on countries doing business with Iran

ವಾಷಿಂಗ್ಟನ್‌, ಜ. 13- ಇರಾನ್‌ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಘೋಷಿಸಿದ್ದಾರೆ. ಇರಾನ್‌ ಮೇಲಿನ ದಾಳಿಯಲ್ಲಿ ಇಲ್ಲಿಯವರೆಗೆ 600 ಮಂದಿ ಮೃತಪಟ್ಟಿದ್ದು ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಸಮಯದಲ್ಲೇ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ.

ತಮ್ಮ ಟ್ರೂತ್‌ ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್‌, ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಇರಾನ್‌ನೊಂದಿಗೆ ವಾಣಿಜ್ಯ ಸಂಬಂಧವನ್ನು ಕಾಯ್ದುಕೊಳ್ಳುವ ದೇಶಗಳು ಅಮೆರಿಕದೊಂದಿಗೆ ನಡೆಸುವ ಯಾವುದೇ ವ್ಯಾಪಾರದ ಮೇಲೆ ಈ ಕ್ಷಣದಿಂದಲೇ ಶೇ.25 ರ ಸುಂಕ ಜಾರಿಗೆ ಬರಲಿದೆ ಎಂದಿದ್ದಾರೆ.

ಅಮೆರಿಕ ನಿರ್ಧಾರದಿಂದ ಭಾರತ ಸೇರಿದಂತೆ ಚೀನಾ, ಯುನೈಟೆಡ್‌ ಅರಬ್‌ ಎಮಿರೇಟ್‌್ಸ ಮತ್ತು ಟರ್ಕಿಯ ಮೇಲೂ ಪರಿಣಾಮ ಬೀರಲಿದೆ. ಭಾರತದ ಮೇಲೆ ಪರಿಣಾಮ ಏನು?ಚೀನಾವನ್ನು ಇರಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ ಎಂದು ಪರಿಗಣಿಸಲಾಗಿದ್ದರೂ ಭಾರತ ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳನ್ನು ರಫ್ತು ಮಾಡುತ್ತಿದೆ.

ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಭಾರತವು 2024-25ರ ಆರ್ಥಿಕ ವರ್ಷದಲ್ಲಿ ಇರಾನ್‌ಗೆ 1.24 ಶತಕೋಟಿ ಡಾಲರ್‌ ಮೌಲ್ಯದ ಸರಕುಗಳನ್ನು ರಫ್ತು ಮಾಡಿದರೆ 440 ಮಿಲಿಯನ್‌ ಡಾಲರ್‌ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಒಟ್ಟು ಒಟ್ಟು ವ್ಯಾಪಾರವು 1.68 ಶತಕೋಟಿ ಡಾಲರ್‌ ಅಂದರೆ ಸರಿಸುಮಾರು 14 ರಿಂದ 15 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಇರಾನ್‌ಗೆ ಭಾರತದ ಪ್ರಮುಖ ರಫ್ತುಗಳಲ್ಲಿ ಸಾವಯವ ರಾಸಾಯನಿಕಗಳು, ಬಾಸ್ಮತಿ ಅಕ್ಕಿ, ಚಹಾ, ಸಕ್ಕರೆ, ಔಷಧಗಳು, ಹಣ್ಣುಗಳು, ಬೇಳೆಕಾಳುಗಳು ಮತ್ತು ಮಾಂಸ ಉತ್ಪನ್ನಗಳು ಸೇರಿವೆ. ಪ್ರಮುಖ ಆಮದುಗಳಲ್ಲಿ ಮೆಥನಾಲ್‌‍, ಪೆಟ್ರೋಲಿಯಂ ಬಿಟುಮೆನ್‌, ದ್ರವೀಕೃತ ಪ್ರೋಪೇನ್‌‍, ಸೇಬುಗಳು, ಖರ್ಜೂರ ಮತ್ತು ರಾಸಾಯನಿಕಗಳು ಸೇರಿವೆ.

RELATED ARTICLES

Latest News