Wednesday, December 4, 2024
Homeಬೆಂಗಳೂರುಮೇ.18ರಂದು ಐಪಿಎಲ್‌ ಪಂದ್ಯ, ನಮ್ಮ ಮೆಟ್ರೋ ಸೇವೆ ಅವಧಿ ವಿಸ್ತರಣೆ

ಮೇ.18ರಂದು ಐಪಿಎಲ್‌ ಪಂದ್ಯ, ನಮ್ಮ ಮೆಟ್ರೋ ಸೇವೆ ಅವಧಿ ವಿಸ್ತರಣೆ

ಬೆಂಗಳೂರು,ಮೇ14- ಐಪಿಎಲ್‌ ಟಿ-20 ಕ್ರಿಕೆಟ್‌ ಪಂದ್ಯಾವಳಿ ಹಿನ್ನೆಲೆ ನಮ್ಮ ಮೆಟ್ರೋ ಸೇವೆಯ ಅವಧಿ ವಿಸ್ತರಣೆ ಮಾಡಲಾಗಿದೆ. 18ರಂದು ಪಂದ್ಯಾವಳಿ ನಡೆಯಲಿವೆ. ಅದಕ್ಕೆ ಮೆಟ್ರೋ ವಿಸ್ತರಣೆ ಮಾಡಲಾಗಿದೆ. ಐಪಿಎಲ್‌ ಪಂದ್ಯಗಳು ನಡೆಯುವ ದಿನ ರಾತ್ರಿ 11.30 ರವರೆಗೆ ಮೆಟ್ರೋ ಸೇವೆ ಲಭ್ಯವಾಗಿರಲಿದೆ ಎಂದು ಮೆಟ್ರೋ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ನಾಲ್ಕು ಟರ್ಮಿನಲ್‌ ನಿಲ್ದಾಣದಿಂದ ಸೇವೆ ವಿಸ್ತರಿಸಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಮೆಟ್ರೋ ಸೇವೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.ಬೆಂಗಳೂರಿನಲ್ಲಿ ನಿಗದಿತ ದಿನಾಂಕದಲ್ಲಿ ನಡೆಯುವ ಪಂದ್ಯಗಳಿಗೆ ಬರುವ ರಿಟರ್ನ್‌ ಜರ್ನಿ ಪೇಪರ್‌ ಟಿಕೆಟ್‌‍ಗಳು 50 ರೂ. ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯ ಇರುತ್ತವೆ.

ಈ ಟಿಕೆಟ್‌‍ಗಳು ಮಧ್ಯಾಹ್ನ 2 ಗಂಟೆಯಿಂದ ಮಾರಾಟಕ್ಕೆ ಲಭ್ಯವಿರುತ್ತದೆ. ರಾತ್ರಿ 8ರ ನಂತರ ದಿನದ ಸೇವೆ ಕೊನೆಗೊಳ್ಳುವವರಿಗೆ ಮಾತ್ರ ರಿಟರ್ನ್‌ ಟಿಕೆಟ್‌ ಬಳಸಬಹುದು.ಕ್ಯೂರ್‌ ಕೋಡ್‌ ಟಿಕೆಟ್‌ಗಳು, ಸಾರ್ಟ್‌ಕಾರ್ಡುಗಳು, ಎನ್‌ಸಿಎಂಸಿ ಕಾರ್ಡ್‌ಗಳನ್ನು ಸಹ ಎಂದಿನಿಂತೆ ಬಳಸಬಹುದಾಗಿದೆ.

ವಾಟ್‌್ಸ ಆಪ್‌‍/ನಮ್ಮ ಮೆಟ್ರೋ ಆ್ಯಪ್‌‍/ಪೇ ಟಿಎಂ ಮೂಲಕ ಜಗಳ ಮುಕ್ತ ವಾಪಸಾತಿ ಪ್ರಯಾಣಕ್ಕಾಗಿ ಕ್ರಿಕೆಟ್‌ ಪಂದ್ಯದ ಆರಂಭಕ್ಕೆ ಮುಂಚಿತವಾಗಿ ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.

RELATED ARTICLES

Latest News