Wednesday, September 11, 2024
Homeಕ್ರೀಡಾ ಸುದ್ದಿ | Sportsಐಪಿಎಲ್‌ಗೆ ಜಾಹೀರ್‌ಖಾನ್‌ ರೀಎಂಟ್ರಿ

ಐಪಿಎಲ್‌ಗೆ ಜಾಹೀರ್‌ಖಾನ್‌ ರೀಎಂಟ್ರಿ

IPL: Zaheer Khan replaces Gautam Gambhir as LSG mentor

ಬೆಂಗಳೂರು, ಆ. 28- ವಿಶ್ವದ ಐಷಾರಾಮಿ ಕ್ರಿಕೆಟ್‌ ಲೀಗ್‌ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ವಿಶ್ವಕಪ್‌ ವಿಜೇತ ಬೌಲರ್‌ ಜಾಹೀರ್‌ಖಾನ್‌ ಅವರು ಮರು ಎಂಟ್ರಿಯಾಗಿದ್ದಾರೆ.

2018 ರಿಂದ 2022ರವರೆಗೂ ಐದು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ರೋಹಿತ್‌ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್‌್ಸನ ತಂಡದ ಪ್ರತಿಭಾನ್ವೇಷಕರಾಗಿದ್ದ ಜಾಹೀರ್‌ಖಾನ್‌, ಕಳೆದೆರಡು ವರ್ಷಗಳಿಂದ ಐಪಿಎಲ್‌ ಟೂರ್ನಿಯಿಂದ ಹೊರಗುಳಿದಿದ್ದರು.

ಆದರೆ 2025ರ ಐಪಿಎಲ್‌ ನಿಮಿತ್ತ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಯಲಿದ್ದು ಲಕ್ನೋ ಸೂಪರ್‌ ಜಯಂಟ್ಸ್ ತಂಡದ ಮೆಂಟರ್‌ ಆಗಿ ಜಾಹೀರ್‌ಖಾನ್‌ ಅವರು ಮತ್ತೆ ಐಪಿಎಲ್‌ ಟೂರ್ನಿಗೆ ಮರಳಲಿದ್ದಾರೆ ಎಂದು ಎಲ್‌ಎಸ್‌‍ಜಿ ಕಚೇರಿ ಸ್ಪಷ್ಟಪಡಿಸಿದೆ.

`ಜಾಹೀರ್‌ಖಾನ್‌ ಅವರು 2025ರ ಐಪಿಎಲ್‌ ಟೂರ್ನಿ ನಿಮಿತ್ತ ನಮ ತಂಡದ ಮೆಂಟರ್‌ ಆಗಿ ಇಂದು ಆಯ್ಕೆ ಮಾಡಿಕೊಂಡಿದ್ದೇವೆ’ ಎಂದು ಎಲ್‌ಎಸ್‌‍ಜಿ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ಜಾಹೀರ್‌ಖಾನ್‌ ಅವರು ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್‌್ಸ , ಡೆಲ್ಲಿ ಡೇರ್‌ಡೆವಿಲ್‌್ಸ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಿದ್ದು 100 ಪಂದ್ಯಗಳಿಂದ 7.58 ಸರಾಸರಿಯಲ್ಲಿ 102 ವಿಕೆಟ್‌ ಪಡೆದಿದ್ದಾರೆ.

RELATED ARTICLES

Latest News