ನವದೆಹಲಿ, ಜೂ.22-ಇರಾನ್-ಇಸ್ರೇಲ್‌ನ ಯುದ್ದದಿಂದ ಉಂಟಾದ ತೈಲ ಮಾರುಕಟ್ಟೆ ಏರಿಳಿತದಿಂದಾಗಿ ಭಾರತವು ರಷ್ಯಾದ ತೈಲ ಖರೀದಿಯನ್ನು ಹೆಚ್ಚಿಸಿದೆ.ಸೌದಿ ಅರೇಬಿಯಾ ಮತ್ತು ಇರಾಕ್ ನಂತಹ ಮಧ್ಯಪ್ರಾಚ್ಯ ಪೂರೈಕೆದಾರರಿಂದ ಉಂಟಾಗಿರುವ ಸಮಸ್ಯೆ ನಡುವೆ ಅಲ್ಲಿಂದ ಬರುತ್ತಿದ್ದ ಒಟ್ಟು ಪ್ರಮಾಣಕ್ಕಿಂತ ಹೆಚ್ಚಿನದನ್ನು ರಷ್ಯದಿಂದ ಆಮದು ಮಾಡಿಕೊಳ್ಳುತ್ತಿದೆ. ಭಾರತದ ಸಂಸ್ಕರಣಾಗಾರಗಳು ಜೂನ್‌ನಲ್ಲಿ ದಿನಕ್ಕೆ ಎರಡು ಮಿಲಿಯನ್ ಬ್ಯಾರೆಲ್‌ಗಳ ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ ಇದು ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಿಂದ ಖರೀದಿಸಿದ ಒಟ್ಟು ಪ್ರಮಾಣಕ್ಕಿಂತ ರಷ್ಯಾದಿಂದ ಪಡೆದಿದ್ದು ಹೆಚ್ಚು ಎಂದು ಜಾಗತಿಕ ವ್ಯಾಪಾರ ವಿಶ್ಲೇಷಣಾ ಸಂಸ್ಥೆ ಕೆಫರ್‌ನ ಪ್ರಾಥಮಿಕ ಮಾಹಿತಿ ತೋರಿಸಿದೆ.ಮೇ ತಿಂಗಳಲ್ಲಿ ರಷ್ಯಾದಿಂದ ಭಾರತದ ತೈಲ ಆಮದು ದಿನಕ್ಕೆ 1.96 ಮಿಲಿಯನ್ ಬ್ಯಾರೆಲ್ ಗಳು.ಜೂನ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ನಿಂದ ಆಮದು ಕೂಡ 439,000 ಬಿಪಿಡಿಗೆ ಏರಿದೆ.
ಇದು ಹಿಂದಿನ ತಿಂಗಳಲ್ಲಿ ಖರೀದಿಸಲಾದ 280.000 ಬಿಪಿಡಿಗಿಂತ ದೊಡ್ಡ ಜಿಗಿತವಾಗಿದೆ.ಕೆಪ್ಪರ್ ಪ್ರಕಾರ, ಮಧ್ಯಪ್ರಾಚ್ಯದಿಂದ ಪೂರ್ಣ ತಿಂಗಳ ಆಮದು ಅಂದಾಜುಗಳು ದಿನಕ್ಕೆ ಸುಮಾರು 2 ಮಿಲಿಯನ್ ಬ್ಯಾರೆಲ್‌ಗಳಷ್ಟಿದ್ದು, ಇದು ಹಿಂದಿನ ತಿಂಗಳ ಖರೀದಿಗಿಂತ ಕಡಿಮೆಯಾಗಿದೆ.ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ಮತ್ತು ಬಳಕೆ ರಾಷ್ಟ್ರವಾದ ಭಾರತವು ವಿದೇಶಗಳಿಂದ ಸುಮಾರು 5.1 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ. ಇದನ್ನು ಸಂಸ್ಕರಣಾಗಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನಗಳಾಗಿ ಪರಿವರ್ತಿಸಲಾಗುತ್ತದೆ.
ಸಾಂಪ್ರದಾಯಿಕವಾಗಿ ಮಧ್ಯಪ್ರಾಚ್ಯದಿಂದ ತೈಲವನ್ನು ಪಡೆಯುತ್ತಿರುವ ಭಾರತವು ಫೆಬ್ರವರಿ 2022 ರಲ್ಲಿ ಉಕ್ರೇನ್ ಆಕ್ರಮಣದ ನಂತರ ರಷ್ಯಾದಿಂದ ಹೆಚ್ಚಿನ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು. ಪಾಶ್ಚಿಮಾತ್ಯ ನಿರ್ಬಂಧಗಳಿಂದಾಗಿ ರಷ್ಯಾದ ತೈಲವು ಇತರ ಅಂತರರಾಷ್ಟ್ರೀಯ ಮಾನದಂಡಗಳಿಗೆ ಹೋಲಿಸಿದರೆ ಗಮನಾರ್ಹ ರಿಯಾಯಿತಿಯಲ್ಲಿ ಲಭ್ಯ ವಿತ್ತು ಮತ್ತು ಕೆಲವು ಯುರೋಪಿಯನ್ ದೇಶಗಳು ಖರೀದಿಗಳನ್ನು ತ್ಯಜಿಸಿದ್ದವು.
ಇದರಿಂದಾಗಿ ಭಾರತದ ರಷ್ಯಾದ ತೈಲ ಆಮದು ನಾಟಕೀಯ ಏರಿಕೆ ಕಂಡಿತು, ಅದರ ಒಟ್ಟು ಕಚ್ಚಾತೈಲ ಆಮದಿನ ಶೇಕಡಾ 1 ಕ್ಕಿಂತ ಕಡಿಮೆಯಿಂದ ಅಲ್ಪಾವಧಿಯಲ್ಲಿ ಶೇಕಡಾ 40ರಿಂದ 44 ಕ್ಕೆ ಏರಿತು.ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ಇಲ್ಲಿಯವರೆಗೆ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಿಲ್ಲ.
ಸರಬರಾಜುಗಳು ಇಲ್ಲಿಯವರೆಗೆ ಯಾವುದೇ ಪರಿಣಾಮ ಬೀರದಿದ್ದರೂ, ಮುಂಬರುವ ದಿನಗಳಲ್ಲಿ ಮಧ್ಯಪ್ರಾಚ್ಯದಿಂದ ಕಚ್ಚಾ ತೈಲ ಸಾಗಣೆಯಲ್ಲಿ ಇಳಿಕೆ ಕಂಡುಬರುತ್ತದೆ ಎಂದು ಕೆನ್ಸರ್‌ನ ಸಂಸ್ಕರಣೆ ಮತ್ತು ಮಾಡೆಲಿಂಗ್‌ನ ಪ್ರಮುಖ ಸಂಶೋಧನಾ ವಿಶ್ಲೇಷಕ ಸುಮಿತ್ ರಿಟೋಲಿಯಾ ತಿಳಿಸಿದರು. ಹಡಗು ಮಾಲೀಕರು ಖಾಲಿ ಟ್ಯಾಂಕರ್‌ಗಳನ್ನು (ಬ್ಯಾಲಸ್ಟರ್‌ಗಳು) ಕೊಲ್ಲಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಅಂತಹ ಹಡಗುಗಳ ಸಂಖ್ಯೆ 69 ರಿಂದ ಕೇವಲ 40 ಕ್ಕೆ ಇಳಿದಿದೆ ಮತ್ತು (ಮಧ್ಯಪ್ರಾಚ್ಯ ಮತ್ತು ಕೊಲ್ಲಿ) ಓಮನ್ ಕೊಲ್ಲಿಯಿಂದ – ಬೌಂಡ್ ಸಿಗ್ನಲ್‌ಗಳು ಅರ್ಧದಷ್ಟು ಕಡಿಮೆಯಾಗಿವೆ.
ಇದು ಪ್ರಸ್ತುತ ಸರಬರಾಜುಗಳು ಶೀಘ್ರದಲ್ಲೇ ಬಿಗಿಗೊಳ್ಳುವ ಸಾಧ್ಯತೆಯಿದೆ ಎಂದು ಸೂಚಿಸುತ್ತದೆ, ಇದು ಭಾರತದ ಸೋರ್ಸಿಂಗ್ ಕಾರ್ಯತಂತ್ರದಲ್ಲಿ ಭವಿಷ್ಯದ ಹೊಂದಾಣಿಕೆಗಳನ್ನು ಪ್ರಚೋದಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.