Monday, September 16, 2024
Homeರಾಜಕೀಯ | Politicsರಾಜ್ಯದ ಮುಖ್ಯಮಂತ್ರಿಗಳ ಸಾಮಾಜಿಕ ಜಾಲತಾಣ ಕಾಂಗ್ರೆಸ್ ಪಕ್ಷದ ಮುಖವಾಣಿಯೇ..? : ಸಿ.ಟಿ.ರವಿ ಪ್ರಶ್ನೆ

ರಾಜ್ಯದ ಮುಖ್ಯಮಂತ್ರಿಗಳ ಸಾಮಾಜಿಕ ಜಾಲತಾಣ ಕಾಂಗ್ರೆಸ್ ಪಕ್ಷದ ಮುಖವಾಣಿಯೇ..? : ಸಿ.ಟಿ.ರವಿ ಪ್ರಶ್ನೆ

ಬೆಂಗಳೂರು,ಆ.18- ಸಿಎಂ ಕರ್ನಾಟಕ ಎಂಬ ಸಾಮಾಜಿಕ ಜಾಲತಾಣದ ಖಾತೆಯನ್ನು ವಾರ್ತಾ ಇಲಾಖೆಯ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೊ ಅಥವಾ ಕೆಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರೊ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿರುವ ಅವರು, ಪ್ರಧಾನಿ ನರೇಂದ್ರಮೋದಿ ಅವರನ್ನು ನಿಂದಿಸಲು ಹಾಗೂ ಘನತೆವೆತ್ತ ರಾಜ್ಯಪಾಲರನ್ನು ಟೀಕಿಸಲು ಈ ಖಾತೆಯನ್ನು ಬಳಸುತ್ತಿದ್ದಾರೆ. ಸಾಲದ್ದಕ್ಕೆ ಸಿಎಂ ಆಫ್ ಕರ್ನಾಟಕ ಎಂಬ ಖಾತೆಯನ್ನು ಸಿಎಂ ಸಿದ್ದರಾಮಯ್ಯ ಅವರ ವಂಧಿಮಾಗದರು ಕಾಂಗ್ರೆಸ್ ಮುಖವಾಣಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿಎಂ ಕರ್ನಾಟಕ ಎಂಬ ಸಾಮಾಜಿಕ ಜಾಲತಾಣವು ಸಂವಿಧಾನತಕವಾದುದು, ಮುಖ್ಯಮಂತ್ರಿಯಾದವರ ದೈನಂದಿನ ಸರಕಾರದ ಕಾರ್ಯ ಚಟುವಟಿಕೆಗಳು ಜನಸಾಮಾನ್ಯರಿಗೆ ನೇರವಾಗಿ ತಲುಪಬೇಕು ಎಂಬ ನಿಟ್ಟಿನಲ್ಲಿ ವಾರ್ತಾ ಇಲಾಖೆ ಸೃಷ್ಟಿಸಿದ ಖಾತೆ.

ಆದರೆ ಈಗ ಏನಾಗುತ್ತಿದೆ ನೋಡಿ!! ಉತ್ತರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಂದು ಒತ್ತಾಯಿಸಿರುವ ರವಿ, ಸರಕಾರದ ಮುಖ್ಯ ಕಾರ್ಯದರ್ಶಿಗಳು ಇದನ್ನು ಗಮನಿಸಬೇಕು ಎಂದು ಮನವಿ ಮಾಡಿದ್ದಾರೆ.

RELATED ARTICLES

Latest News