Sunday, May 12, 2024
Homeಅಂತಾರಾಷ್ಟ್ರೀಯಇಸ್ರೇಲ್ ವೈಮಾನಿಕ ದಾಳಿಯಲ್ಲಿ 30 ಮಂದಿ ಪ್ಯಾಲೆಸ್ತೇನಿಯರ ಸಾವು

ಇಸ್ರೇಲ್ ವೈಮಾನಿಕ ದಾಳಿಯಲ್ಲಿ 30 ಮಂದಿ ಪ್ಯಾಲೆಸ್ತೇನಿಯರ ಸಾವು

ಟೆಲ್ ಅವಿವ್,ಅ.23- ಗಾಜಾ ಪಟ್ಟಣದ ಮೇಲೆ ತನ್ನ ದಾಳಿಯನ್ನು ಮುಂದುವರೆಸಿರುವ ಇಸ್ರೇಲ್ ಇಂದು ಮುಂಜಾನೆ ಮತ್ತೆ ವೈಮಾನಿಕ ದಾಳಿ ನಡೆಸಿದ ಪರಿಣಾಮ 30 ಮಂದಿ ಘಟನೆಯಲ್ಲಿ ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದಾರೆ.

ವಸತಿ ಪ್ರದೇಶ ಹಾಗೂ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಗಾಜಾ ಪಟ್ಟಣದ ಅಲ್‍ಸುಹಾದ ಪ್ರದೇಶ ಮತ್ತು ಜಬಾಲಿಯಾ ನಿರಾಶ್ರಿತರ ತಾಣದಲ್ಲಿ ನಡೆದ ದಾಳಿಯಲ್ಲಿ 30 ಮಂದಿ ಪ್ಯಾಲೆಸ್ತೇನಿಯರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಮುಂಜಾನೆ ಗಾಜಾ ಪಟ್ಟಿಯಲ್ಲಿರುವ ಮೂರು ಆಸ್ಪತ್ರೆಗಳ ಸಮೀಪದಲ್ಲಿ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ ಎಂದು ಪ್ಯಾಲೇಸ್ತೀನಿಯನ್ ಮಾಧ್ಯಮ ವರದಿ ಮಾಡಿದೆ. ಆದರೆ ಬಾಂಬ್ ದಾಳಿಯಿಂದ ಆಸ್ಪತ್ರೆ ಹಾನಿಗೊಳಗಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇಸ್ರೇಲ್ ಗಾಜಾ ನಗರದ ಶಿಫಾ ಮತ್ತು ಅಲ-ಕುದ್ಸ್ ಆಸ್ಪತ್ರೆಗಳ ಬಳಿ ಮತ್ತು ಉತ್ತರದಲ್ಲಿರುವ ಇಂಡೋನೇಷಿಯನ್ ಆಸ್ಪತ್ರೆಯ ಬಳಿ ದಾಳಿ ಮಾಡಿದೆ ಎಂದು ವರದಿ ಹೇಳಿದೆ.

ಪ್ಯಾರಾ ಏಷ್ಯನ್ ಗೇಮ್ಸ್​​ನಲ್ಲಿ ಭಾರತೀಯರ ಪದಕ ಭೇಟೆ ಶುರು

ಇದಕ್ಕೂ ಮೊದಲು, ಅಲ-ಕುಡ್ಸ್ ಆಸ್ಪತ್ರೆಯನ್ನು ಸ್ಥಳಾಂತರಿಸಲು ಇಸ್ರೇಲ್ ಆದೇಶಿಸಿದೆ ಎಂದು ಪ್ಯಾಲೆಸ್ತೀನಿಯನ್ ರೆಡ್ ಕ್ರೆಸೆಂಟ್ ಸೊಸೈಟಿ ಹೇಳಿದೆ. ಗಾಜಾದಲ್ಲಿನ ವಸತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ ನಡೆಸಿದ ಪರಿಣಾಮ ಕನಿಷ್ಠ 30 ಪ್ಯಾಲೆಸ್ತೀನಿಯಾದವರು ಸಾವನ್ನಪ್ಪಿದ್ದಾರೆ. ಜಬಾಲಿಯಾ ನಿರಾಶ್ರಿತರ ಶಿಬಿರದ ಅಲ-ಶುಹಾದಾ ಪ್ರದೇಶದಲ್ಲಿ ಈ ಕಟ್ಟಡವಿತ್ತು.

ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ವೈಮಾನಿಕ ದಾಳಿಯಿಂದ 117 ಮಕ್ಕಳು ಸೇರಿದಂತೆ 266 ಪ್ಯಾಲೆಸ್ತೀನಿಯಾದವರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಹಮಾಸ್‍ನ ರಾಜಕೀಯ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಮತ್ತು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಅವರು ಗಾಜಾದ ಮೇಲೆ ಇಸ್ರೇಲಿ ದಾಳಿಯನ್ನು ಹೇಗೆ ನಿಲ್ಲಿಸಬೇಕು ಎಂಬುದರ ಕುರಿತು ಚರ್ಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಕ್ಟೋಬರ್ 7 ರಂದು ಪ್ಯಾಲೇಸ್ತೀನಿಯನ್ ಗುಂಪು ಹಮಾಸ್ ಇಸ್ರೇಲ್ ಮೇಲೆ ಹಠಾತ್ ದಾಳಿಯನ್ನು ಪ್ರಾರಂಭಿಸಿ 1,400 ಜನರನ್ನು ಕೊಂದ ನಂತರ ಇಸ್ರೇಲ್ ತನ್ನ ದಾಳಿಯನ್ನು ಪ್ರಾರಂಭಿಸಿದೆ. ಎರಡು ವಾರಗಳ ಬಾಂಬ್ ದಾಳಿಯಲ್ಲಿ ಕನಿಷ್ಠ 4,600 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News