Saturday, January 18, 2025
Homeಅಂತಾರಾಷ್ಟ್ರೀಯ | Internationalಗಾಜಾ ಕದನ ವಿರಾಮಕ್ಕೆ ಇಸ್ರೇಲ್‌ ಸಮ್ಮತಿ

ಗಾಜಾ ಕದನ ವಿರಾಮಕ್ಕೆ ಇಸ್ರೇಲ್‌ ಸಮ್ಮತಿ

Israel's cabinet approves Gaza ceasefire and hostage release deal

ಜೆರುಸಲೇಂ,ಜ.18- ಇಸ್ರೇಲ್‌ನ ಸಚಿವ ಸಂಪುಟ ಇಂದು ಗಾಜಾ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದವನ್ನು ಅನುಮೋದಿಸಿದೆ.ಈ ವಾರಾಂತ್ಯದಲ್ಲಿ ಕದನ ವಿರಾಮ ಜಾರಿಗೆ ಬರುತ್ತದೆಯೇ ಎಂಬ ಬಗ್ಗೆ ಇದ್ದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಕದನ ವಿರಾಮ ನಾಳೆಯಿಂದ ಪ್ರಾರಂಭವಾಗಲಿದೆ. ಗಾಜಾದ ಅತ್ಯಂತ ಮಾರಕ ಯುದ್ಧ ಮತ್ತು ಬಾಂಬ್‌ ದಾಳಿ ನಿಲ್ಲಲಿದೆ.

ಇಸ್ರೇಲ್‌ ಜೈಲುಗಳಲ್ಲಿರುವ ನೂರಾರು ಪ್ಯಾಲೆಸ್ಟೀನಿಯನ್‌ ಕೈದಿಗಳನ್ನು ಬಿಡುಗಡೆಯಾಗಲಿದ್ದಾರೆ. 2023 ರ ಅ.7 ರಂದು ಹಮಾಸ್‌‍ ಬಂಡುಕೋರರ ಗುಂಪು ಇಸ್ರೇಲ್‌ ಮೇಲೆ ದಾಳಿ ಮಾಡಿ ಪ್ರದೇಶದಲ್ಲಿ ಬಂಧಿಸಲ್ಪಟ್ಟ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸಹ ಅನುವು ಮಾಡಿಕೊಡುತ್ತದೆ.

ಸರ್ಕಾರ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಕ್ಯಾಬಿನೆಟ್‌ ಅನುಮೋದಿಸಿದೆ ಎಂದು ಇಂದು ಬೆಳಿಗ್ಗೆ ನೆತನ್ಯಾಹು ಅವರ ಕಚೇರಿ ತಿಳಿಸಿದೆ. ಸರ್ಕಾರದ ಅನುಮೋದನೆಗೆ ಒಳಪಟ್ಟು ಭಾನುವಾರದಿಂದ ಬಿಡುಗಡೆಯಾಗಲಿರುವ 95 ಪ್ಯಾಲೆಸ್ಟೀನಿಯನ್ನರ ಪಟ್ಟಿಯನ್ನು ನ್ಯಾಯ ಸಚಿವಾಲಯ ಪ್ರಕಟಿಸಿದೆ. ಅವರಲ್ಲಿ 69 ಮಹಿಳೆಯರು, 16 ಪುರುಷರು ಮತ್ತು 10 ಅಪ್ರಾಪ್ತರು ಸೇರಿದ್ದಾರೆ.

RELATED ARTICLES

Latest News