ಬೆಂಗಳೂರು: 45 ವರ್ಷ ಮೇಲ್ಪಟ್ಟ ಹಿರಿಯನಾಗರಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ITC ಲಿಮಿಟೆಡ್, “ರೈಟ್ ಶಿಫ್ಟ್” ಶೀರ್ಷಿಕೆಯಡಿ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಈ ಕುರಿತು ಮಾತನಾಡಿದ ITC ಲಿಮಿಟೆಡ್‌ನ ಸಿಇಒ, ಫುಡ್ಸ್ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಹೇಮಂತ್ ಮಲಿಕ್, ವಯಸ್ಸಾದಂತೆ ದೇಹವು ನಿಶ್ಯಕ್ತಿ ಹಾಗೂ ಆಯಾಸಕ್ಕೆ ಒಳಗಾಗುತ್ತದೆ. ನಾವು ವಯಸ್ಕರಾಗಿದ್ದ ವೇಳೆ ಆಹಾರ ಸೇವಿಸುತ್ತಿದ್ದಂತೆ ವಯಸ್ಸಾದ ನಂತರ ಸಾಧ್ಯವಾಗುವುದಿಲ್ಲ. ಜೀರ್ಣಕ್ರಿಯೆ ನಿಧಾನಗತಿಯಾದಾಗ ದೇಹಕ್ಕೆ ಬೇಕಾದ ಹೆಚ್ಚು ಪೌಷ್ಠಿಕಾಂಶವಿರುವ ಆಹಾರವನ್ನು ಸೇವಿಸಬೇಕಾಗುತ್ತದೆ. ಹೀಗಾಗಿ ನಮ್ಮ ಸಂಸ್ಥೆಯು ಹಿರಿಯ ನಾಗರಿಕರಿಗಾಗಿಯೇ ಓಟ್ಸ್, ಉಪ್ಮಾ, ಖೀರ್, ಕುಕೀಸ್, ನಮ್ಕೀನ್, ಬಹುಧಾನ್ಯ ಹಿಟ್ಟುಗಳು, ಮಿಲಟ್ಸ್ ನಟ್ಸ್, ಇತರೆ ನಟ್ಸ್ ಸೇರಿದಂತೆ ಒಟ್ಟು 24 ವಿಭಿನ್ನ ಆಹಾರ ಪದಾರ್ಥಗಳನ್ನು “ರೈಟ್‌ಶಿಫ್ಟ್” ಹೆಸರಿನಲ್ಲಿ ಬಿಡುಗಡೆ ಮಾಡಾಗಿದೆ.
ಈ ಎಲ್ಲಾ ಆಹಾರ ಪದಾರ್ಥಗಳಲ್ಲೂ ಹಿರಿಯನಾಗರಿಕ ಆರೋಗ್ಯಕ್ಕೆ ಅನುಗುಣವಾಗಿರಿಸಲು ಪಿಂಕ್‌ಸಾಲ್ಟ್, ಕಡಿಮೆ ಪ್ರಮಾಣದಲ್ಲಿ ಬೆಲ್ಲವನ್ನು ಬಳಕೆ ಮಾಡಿದ್ದು, ವಯಸ್ಸಾದ ಪ್ರತಿಯೊಬ್ಬರೂ ಸೇವಿಸಲು ಯೋಗ್ಯವಾಗಿದೆ. ಪ್ರಸ್ತುತ ಈ ಎಲ್ಲಾ ಆಹಾರ ಪದಾರ್ಥಗಳು ಸೂಪರ್ ಮಾರ್ಕೆಟ್ ಹಾಗೂ ಇ-ಕಾಮರ್ಸ್‌ಗಳಲ್ಲಿ ಲಭ್ಯವಿದೆ.