ಬೆಂಗಳೂರು,ಜ.13- ಕಳೆದ ವಿಧಾನಭೆ ಚುನಾವಣೆ ಯಲ್ಲಿ ಟಿಕೆಟ್ ಸಿಗದೆ ಕಾಂಗ್ರೆಸ್ ಸೇರಿ ಬಿಜೆಪಿಗೆ ಭಾರೀ ಹಾನಿ ಮಾಡುವಲ್ಲಿ ಯಶಸ್ವಿಯಾಗಿದ್ದ ಮಾಜಿ ಮುಖ್ಯಮಂತ್ರಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಮತ್ತೆ ಮಾತೃ ಪಕ್ಷದತ್ತ ಮುಖ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆತರಲು ಪಕ್ಷದೊಳಗಿನ ಒಂದು ಬಣ ಭಾರೀ ಪ್ರಯತ್ನ ನಡೆಸಿದೆ. ಈಗಾಗಲೇ ರಾಷ್ಟ್ರೀಯ ಮುಖಂಡರೊಬ್ಬರ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಇದು ಫಲಪ್ರದಕಾರಿಯಾಗಿದೆ ಎಂದು ತಿಳಿದುಬಂದಿದೆ.
ಭಾರೀ ನಿರೀಕ್ಷೆ ಇಟ್ಟುಕೊಂಡು ಕಾಂಗ್ರೆಸ್ ಸೇರಿದ್ದ ಶೆಟ್ಟರ್‍ಗೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿಯೆ ಬಿಜೆಪಿಯ ಪ್ರಮುಖ ನಾಯಕರೊಬ್ಬರ ಜೊತೆ ಮಾತುಕತೆ ನಡೆಸಿದ್ದು, ಎಲ್ಲವೂ ನಿರೀಕ್ಷೆಯಂತೆ ನಡೆದರೆ ಪುನಃ ಮಾತೃ ಪಕ್ಷಕ್ಕೆ ಬರುವುದು ನಿಶ್ಚಿತ ಎನ್ನಲಾಗುತ್ತಿದೆ.
ಶೆಟ್ಟರ್ ಅವರನ್ನು ಬಿಜೆಪಿಗೆ ಸೆಳೆಯಲು ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕೂಡ ವಿಶೇಷ ಆಸಕ್ತಿ ವಹಿಸಿದ್ದಾರೆ. ಎರಡು ದಿನಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಶೆಟ್ಟರ್ ಅವರನ್ನು ಕರೆತರುವ ಬಗ್ಗೆ ಚರ್ಚೆ ಮುಗಿದಿದೆ. ಇದಕ್ಕೆ ಬಹುತೇಕರು ಒಪ್ಪಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ರಾಮಮಂದಿರ ಉದ್ಘಾಟನೆ ಬಹಿಷ್ಕರಿಸಿರುವುದು ಧರ್ಮಕ್ಕೆ ಧಕ್ಕೆ ತರುವ ಉದ್ದೇಶದಿಂದಲ್ಲ : ಖರ್ಗೆ
ಬೆಳಗಾವಿಯ ಅಭ್ಯರ್ಥಿ?:
ಮೂಲಗಳ ಪ್ರಕಾರ ಬಿಜೆಪಿಗೆ ಶೆಟ್ಟರ್ ಬಂದರೆ ಅವರನ್ನು ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿಸಲು ಪಕ್ಷದೊಳಗೆ ಗಂಭೀರ ಚಿಂತನೆ ನಡೆದಿದೆ. ಹಾಲಿ ಅಭ್ಯರ್ಥಿ ಮಂಗಳ ಅಂಗಡಿ ಪುನಃ ಸ್ರ್ಪಧಿಸಲು ಹಿಂದೇಟು ಹಾಕುತ್ತಿದ್ದು, ಪ್ರಬಲ ಅಭ್ಯರ್ಥಿ ಹುಡುಕಾಟದಲ್ಲಿರುವ ಬಿಜೆಪಿಗೆ ಶೆಟ್ಟರ್ ಆಗಮಿಸಿದರೆ ಹೆಚ್ಚಿನ ಬಲ ಸಿಗಲಿದೆ ಎಂಬ ಲೆಕ್ಕಾಚಾರ ಪಕ್ಷದಲ್ಲಿದೆ.
ಈ ಹಿಂದೆ ಬೆಳಗಾವಿ ಕ್ಷೇತ್ರದಿಂದ ಸುರೇಶ್ ಅಂಗಡಿ ಮೂರು ಬಾರಿ ಸ್ರ್ಪಸಿ ವಿಜೇತರಾಗಿದ್ದರು. ಕೋವಿಡ್ ಹಿನ್ನಲೆಯಲ್ಲಿ ಅಕಾಲಿಕ ಮರಣಕ್ಕೆ ತುತ್ತಾದ ಅವರಿಂದ ತೆರವಾದ ಸ್ಥಾನಕ್ಕೆ ಮಂಗಳ ಅಂಗಡಿ ಸ್ಪರ್ಧೆ ಮಾಡಿ ಕೆಲವೇ ಮತಗಳ ಅಂತರದಿಂದ ವಿಜೇತರಾಗಿದ್ದರು. ಸಂಸದರಾದ ಮೇಲೆ ಕ್ಷೇತ್ರದಲ್ಲಿ ಅವರು ಹೆಚ್ಚು ಸಕ್ರಿಯರಾಗಿಲ್ಲ ಎಂಬ ಆರೋಪವಿದೆ. ಜಿಲ್ಲೆಯಲ್ಲಿ ಅವರಿಗೆ ಟಿಕೆಟ್ ನೀಡಲು ಸಾಕಷ್ಟು ವಿರೋಧವಿದೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ಶೆಟ್ಟರ್ ಸೂಕ್ತ ಎಂಬ ವ್ಯಾಖ್ಯಾನಗಳು ಪಕ್ಷದಲ್ಲಿ ಕೇಳಿಬಂದಿದೆ.
ಶೀಘ್ರದಲ್ಲೇ ಇಂಡಿ ಮೈತ್ರಿಕೂಟ ಪತನವಾಗಲಿದೆ : ದಿಲೀಪ್ ಘೋಷ್
ಶೆಟ್ಟರ್ ಮತ್ತು ಮಂಗಳಾ ಅಂಗಡಿ ಸಂಬಂಕರಾಗಿದ್ದಾರೆ. ಒಂದು ವೇಳೆ ಅವರೇ ಅಭ್ಯರ್ಥಿಯಾದರೆ ವಿರೋಧ ವ್ಯಕ್ತವಾಗುವುದಿಲ್ಲ. ಈ ಎಲ್ಲವನ್ನು ಅಳೆದು ತೂಗಿ ಪಕ್ಷ ಬಿಟ್ಟು ಹೋಗಿದ್ದ ಶೆಟ್ಟರ್‍ಗೆ ಬಿಜೆಪಿ ಗಾಳ ಹಾಕಿದೆ.