Sunday, November 24, 2024
Homeರಾಜ್ಯಪೇಪರ್‌ ಹಾವು ಬಿಟ್ಟು ಮುಖ್ಯಮಂತ್ರಿಗಳನ್ನು ರಕ್ಷಣೆ ಮಾಡಲಾಗುತ್ತದೆ : ಜಗದೀಶ್‌ ಶೆಟ್ಟರ್‌

ಪೇಪರ್‌ ಹಾವು ಬಿಟ್ಟು ಮುಖ್ಯಮಂತ್ರಿಗಳನ್ನು ರಕ್ಷಣೆ ಮಾಡಲಾಗುತ್ತದೆ : ಜಗದೀಶ್‌ ಶೆಟ್ಟರ್‌

ಹುಬ್ಬಳ್ಳಿ,ಜು.8- ಮುಡಾ ಹಗರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಆಗುತ್ತಿಲ್ಲ. ಮುಖ್ಯಮಂತ್ರಿಗಳನ್ನು ರಕ್ಷಣೆ ಮಾಡುವ ಕೆಲಸವಾಗುತ್ತಿದೆ ಎಂದು ಸಂಸದ ಜಗದೀಶ್‌ ಶೆಟ್ಟರ್‌ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮೈಸೂರಿನಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹೇದೇವಪ್ಪ ಅವರು ನಿನ್ನೆ ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡುವ ಮೂಲಕ ಪೇರ್ಪರ್‌ಹಾವು ಬಿಟ್ಟಿದ್ದಾರೆ, ಇದು ಮುಖ್ಯಮಂತ್ರಿಗಳನ್ನು ರಕ್ಷಣೆ ಮಾಡುವ ವ್ಯವಸ್ಥೆ ಆಗಿದೆ ಎಂದು ಹೇಳಿದರು.

ಮುಡಾ ಹಗರಣದಲ್ಲಿ ಬೇರೆ ಪಕ್ಷದಲ್ಲಿ ಬೇರೆ ಪಕ್ಷದವರು ಇದ್ದಾರೆ, ಬೇರೆಯವರು ಹಗರಣದಲ್ಲಿ ಭಾಗಿಯಾಗಿದ್ದಾರೆ, ಎಲ್ಲ ಶಾಸಕರು ಇದ್ದಾರೆ ಎಂದು ಮಹದೇವಪ್ಪ ನೀಡಿರುವ ಹೇಳಿಕೆ, ಇದೊಂದು ಪೇಪರ್‌ ಹಾವು ಅಷ್ಟೇ ಆಗಿದ್ದು, ಅವರ ಹುಳುಕೂ ಸಹ ಹೊರಗೆ ಬರುತ್ತದೆ ಎಂದರು.

ಮುಡಾ ಹಗರಣ ಮುಖ್ಯಮಂತ್ರಿಗಳ ತಲೆಗೆ ಬರತ್ತದೆ ಎಂದು ಅವರನ್ನು ಬಚಾವ್‌ ಮಾಡಲು ಸುದ್ದಿಗೋಷ್ಠಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಬಚಾವ್‌ ಮಾಡುವ ಕೆಲಸ ಆಗಬಾರದು ಎಂದು ಹೇಳಿದರು.

ಮಹದಾಯಿ ಯೋಜನೆ ಆರಂಭದ ಕಣಕುಂಬಿಗೆ ಪ್ರವಾಹ ತಂಡ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರದ ನಿಯೋಗ ಬಂದಿದ್ದು ಪರಿಸರ, ಹುಲಿ ಕಾರಿಡಾರ್‌ ಹಿನ್ನೆಲೆಯಲ್ಲಿ ಬಂದರೆ ಓಕೆ. ಆದರೆ, ಕೇಂದ್ರದ ಇಂತಹ ತಂಡ ಬಂದಾಗ ರಾಜ್ಯ ಸರ್ಕಾರ ಲ್‌ ಅಲರ್ಟ್‌ ಆಗಬೇಕಾಗುತ್ತದೆ.

ರಾಜ್ಯದಿಂದ ಸರಿಯಾದ ರಿಪೋರ್ಟ್‌ ಹೋಗದೇ ಇದ್ದಾಗ ಕಾನೂನು ತೊಡಕುಗಳು ಆರಂಭವಾಗುತ್ತವೆ ಎಂದರು.ರಾಜ್ಯ ಸರ್ಕಾರ ಮಹದಾಯಿ ವಿಚಾರದಲ್ಲಿ ಗಂಭೀರವಾದ ಪ್ರಯತ್ನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮಹದಾಯಿ ಹೋರಾಟಗಾರರು, ರೈತರು ಸಹ ಎಚ್ಚರಿಕೆ ಕೊಟ್ಟಿದ್ದಾರೆ, ತಂಡ ಬಂದಾಗ ಏನೇನು ಪರಿಶೀಲನೆ ಆಯಿತು, ಏನೆಲ್ಲಾ ವಿಚಾರಣೆ ನಡೆಸಲಾಯಿತು, ಈ ಆಧಾರದ ಮೇಲೆ ರಾಜ್ಯ ಸರ್ಕಾರ ವರದಿ ಕೊಡಬೇಕು ಎಂದು ತಿಳಿಸಿದರು.

RELATED ARTICLES

Latest News