Thursday, May 2, 2024
Homeರಾಜಕೀಯಬಿಜೆಪಿಗೆ ವಾಪಾಸ್ ಆಗುವಂತೆ ನನ್ನ ಮೇಲೆ ಒತ್ತಡ ಇದೆ : ಜಗದೀಶ್ ಶೆಟ್ಟರ್

ಬಿಜೆಪಿಗೆ ವಾಪಾಸ್ ಆಗುವಂತೆ ನನ್ನ ಮೇಲೆ ಒತ್ತಡ ಇದೆ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ, ಜ.14- ಬಿಜೆಪಿಗೆ ಮರಳಿ ಘರ್ ವಾಪಾಸಿಯಾಗುವಂತೆ ನನ್ನ ಮೇಲೆ ಒತ್ತಡ ಇದೆ. ಆದರೆ ಅಪಮಾನವಾಗಿ ಅಲ್ಲಿಂದ ಹೊರ ಬಂದಿದ್ದೇನೆ. ಮರಳಿ ಬರುವ ಪರಿಸ್ಥಿತಿ ಇಲ್ಲ ಎಂದು ತಿಳಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪಷ್ಟ ಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗರೀಶ್ ಶೆಟ್ಟರ್ ಅವರಿಗೆ ಅನ್ಯಾಯವಾಗಿದೆ. ಅವರು ಪಕ್ಷ ಬಿಟ್ಟ ಮೇಲೆ ಸಮಸ್ಯೆಯಾಗಿದೆ ಎಂಬ ಭಾವನೆ ಆ ಪಕ್ಷದ ಕಾರ್ಯಕರ್ತರು, ಪ್ರಮುಖರು ಮತ್ತು ಮಾಜಿ ಶಾಸಕರಲ್ಲಿ ಇದೆ. ಅದಕ್ಕಾಗಿ ಮರಳಿ ವಾಪಾಸ್ ಬರುವಂತೆ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ಆದರೆ ಪ್ರಭಾವಿ ನಾಯಕರು ಇನ್ನೂ ನನ್ನನ್ನು ಸಂಪರ್ಕ ಮಾಡಿಲ್ಲ. ಆ ಬಗ್ಗೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.

ನಾನು ಬಿಜೆಪಿಯ ಮಾಜಿ ಶಾಸಕ ಶಂಕರ ಪಾಟೀಲ್ ಸೇರಿದಂತೆ ಯಾವ ನಾಯಕರನ್ನು ಬಲವಂತವಾಗಿ ಕಾಂಗ್ರೆಸ್‍ಗೆ ಬರುವಂತೆ ಒತ್ತಡ ಹೇರುತ್ತಿಲ್ಲ. ರಾಮಣ್ಣ ಲಮಾಣಿ ಸೇರಿ ಕೆಲವರು ನೀವು ಎಲ್ಲಿ ಇರುತ್ತೀರೋ ನಾವು ಅಲ್ಲೇ ಇರುತ್ತೇವೆ ಎಂದಿದ್ದಾರೆ. ಅಂತಹವನ್ನು ಕಾಂಗ್ರೆಸ್ ನಾಯಕರ ಬಳಿಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದೇನೆ ಎಂದರು.

ರಾಮಮಂದಿರ ವಿಚಾರ ರಾಜಕೀಯ ವಿಷಯವಾಗಬಾರದು. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಆಗಬಾರದು. ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕು ಎಂಬುದು ಎಲ್ಲರ ಅಪೇಕ್ಷೆ. ಸುಪ್ರೀಂಕೋರ್ಟ್ ತೀರ್ಪಿನ ನಂತರ ರಾಮಮಂದಿರ ಆಗುತ್ತಿದೆ. ಇದು ಎಲ್ಲರಿಗೂ ಖಷಿಯ ವಿಚಾರ ಎಂದರು. ರಾಮಮಂದಿರ ಗರ್ಭಗುಡಿ ಸ್ಥಾಪನೆಗೆ ಆಯ್ದ ಕೆಲವರಿಗೆ ಆಹ್ವಾನ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ. ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಹ್ವಾನ ನೀಡಿಲ್ಲ.

ಈ ರೀತಿ ವ್ಯತ್ಯಾಸ ಏಕೆ. ರಾಮಮಂದಿರಕ್ಕೆ ಯಾರು ಬೇಕಾದರೂ, ಯಾವಾಗ ಬೇಕಾದರೂ ಹೋಗುತ್ತಾರೆ. ಅದರಲ್ಲಿ ರಾಜಕೀಯ ಏಕೆ ಎಂದು ಪ್ರಶ್ನಿಸಿದರು. ಜ.22ರಂದು ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದು ಬಿಜೆಪಿಯವರಲ್ಲ, ಶ್ರೀರಾಮಮಂದಿರದ ಟ್ರಸ್ಟ್‍ನವರು ಆಹ್ವಾನ ಕೊಟ್ಟಿದ್ದಾರೆ. ಯಾರಿಗೆ ಆಹ್ವಾನ ಕೊಡಬೇಕು, ಕೊಡಬಾರದು ಎಂದು ನಿರ್ಧರಿಸುವ ಅಕಾರ ಟ್ರಸ್ಟ್‍ನವರಿಗೆ. ಕಾಂಗ್ರೆಸ್ ನಾಯಕರು ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಅದರೆ ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿಲ್ಲ. ಜೊತೆಗೆ ಕಾಂಗ್ರೆಸ್‍ನ ಯಾರು ಹೋಗಬೇಡಿ ಎಂದು ಹೇಳಿಲ್ಲ. ನನಗೂ ಆಹ್ವಾನ ಪತ್ರ ಬಂದಿದೆ. ಆದರೆ ನಾನು ಹೋಗುತ್ತಿಲ್ಲ ಎಂದರು.

ಆಹ್ವಾನ ಪತ್ರ ಕೊಟ್ಟ ಟ್ರಸ್ಟ್‍ನವರು ಕಾರ್ಯಕ್ರಮಕ್ಕೆ ಬರುವವರು ಬರಲಿ, ಬರದಿದ್ದರವು ಬಿಡಲಿ ಎಂದು ತಮ್ಮ ಪಾಡಿಗೆ ತಾವಿದ್ದಾರೆ. ಆದರೆ ಇಲ್ಲಿ ಟೀಕೆ ಮಾಡುತ್ತಿರುವುದು ಬಿಜೆಪಿಯವರು. ಅದರ ಅರ್ಥವೇನು ? ಮೇಲ್ನೋಟಕ್ಕೆ ಬಿಜೆಪಿಯವರ ಟೀಕೆ ರಾಜಕಾರಣವನ್ನು ಸ್ಪಷ್ಟವಾಗಿ ಗೋಚರಿಸುತ್ತಿಲ್ಲವೇ ?. ರಾಮಮಂದಿರ ಸ್ಥಾಪನೆ ಮೂಲ ಲೋಕಸಭೆ ಚುನಾವಣೆಯೇ ? ಅಥವಾ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಲು ಮಾಡಲು ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ

ಲೋಕಸಭೆ ಚುನಾವಣೆಯ ಸಲುವಾಗಿ ಮತ್ತು ಕಾಂಗ್ರೆಸ್ ಪಕ್ಷವನ್ನು ಹಿಂದು ವಿರೋಧಿ ಎಂದು ಟೀಕೆ ಮಾಡಲು ರಾಮಮಂದಿರ ಕಟ್ಟಲಾಗುತ್ತಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ. ಎಷ್ಟು ದಿನ, ಎಲ್ಲಿಯವರೆಗೂ ಕಾಂಗ್ರೆಸ್ ಪಕ್ಷವನ್ನು ಹಿಂದು ವಿರೋ ಎಂದು ಬಿಂಬಿಸಲು ಸಾಧ್ಯ. ಅಯೋಧ್ಯೆ ವಿವಾದ ಇಂದು ನಿನ್ನೆಯದಲ್ಲ. 1996ರಿಂದಲೂ ಚಾಲ್ತಿಯಲ್ಲಿದೆ. ದತ್ತ ಪೀಠದ ವಿವಾದವೂ ಇತ್ತು . ಇದನ್ನು ಮುಂದಿಟ್ಟುಕೊಂಡು ಚುನಾವನೆ ಹೆದರಿಸಿದ ಬಿಜೆಪಿ ಒಮ್ಮೆ 110 ಮತ್ತೊಮ್ಮೆ 106 ಸ್ಥಾನ ಗೆದ್ದಿತ್ತು. ಆ ಬಳಿಕ ವಿವಾದವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಹಿಂದು ವಿರೋ ಎಂದು ಬಿಂಬಿಸಲಾರಂಭವಾಗಿದೆ. ಹಿಂದುಗಳು ಕಾಂಗ್ರೆಸ್‍ಗೆ ಮತ ಹಾಕುವುದಿಲ್ಲ ಎಂದಾದರೆ ಈಗ ಪೂರ್ಣ ಪ್ರಮಾಣದ ಬಹುಮತ ಬರಲು ಹೇಗೆ ಸಾಧ್ಯ. ಬಿಜೆಪಿಯ ರಾಜಕಾರಣ ಯಶಸ್ಸು ನೀಡಲ್ಲ ಎಂದರು.

ರಾಜಕಾರಣದಲ್ಲಿ ಶಿಸ್ತು, ಸಂಯಮ ಇರಬೇಕು. ಸಂಸದ ಅನಂತ ಕುಮಾರ್ ಹೆಗಡೆ ಲಕ್ಷ್ಮಣ ರೇಖೆ ಮೀರಿ ಮಾತನಾಡಿದರೆ ಜನ ಒಪ್ಪುವುದಿಲ. ಪ್ರಧಾನಿ, ಮುಖ್ಯಮಂತ್ರಿ ಹುದ್ದೆಗಳು ಸಂವಿಧಾನಾತ್ಮಕವಾಗಿವೆ. ನರೇಂದ್ರ ಮೋದಿ, ಸಿದ್ದರಾಮಯ್ಯ ಅವರನ್ನು ಟೀಕೆ ಮಾಡಿದರೆ ಜನ ಒಪ್ಪುವುದಿಲ್ಲ ಎಂದರು.

ನಾಲ್ಕು ವರ್ಷದಿಂದ ಅನಂತ ಕುಮಾರ್ ಹೆಗಡೆ ಎಲ್ಲಿದ್ದರು, ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೆ ಕಾಣಿಸಿಕೊಂಡಿದ್ದಾರೆ. ಹಿಂದು ಮುಸ್ಲಿಂ ಎಂದು ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರಾವರ ಜಿಲ್ಲೆಗೆ ಆಗಮಿಸಿ ಬಹಿರಂಗ ಸಮಾವೇಶ ನಡೆಸಿದ್ದರು. ಅದರಲ್ಲಿ ಅನಂತಕುಮಾರ್ ಹೆಗಡೆ ಭಾಗಿಯಾಗಿರಲಿಲ್ಲ. ಏಕೆ ಎಂದು ಬಿಜೆಪಿಯವರೇ ಉತ್ತರ ನೀಡಬೇಕು ಎಂದರು.

RELATED ARTICLES

Latest News