Tuesday, April 16, 2024
Homeಮನರಂಜನೆಜೈಪುರ ಟೈಮ್ಸ್ ಫ್ಯಾಷನ್ ವೀಕ್‌ನಲ್ಲಿ ಮಿಂಚಿದ ರಚಿಕಾ ಸುರೇಶ್

ಜೈಪುರ ಟೈಮ್ಸ್ ಫ್ಯಾಷನ್ ವೀಕ್‌ನಲ್ಲಿ ಮಿಂಚಿದ ರಚಿಕಾ ಸುರೇಶ್

ಹೆಸರಾಂತ ಫ್ಯಾಷನ್ ಡಿಸೈನರ್ ಫಾರೆವರ್ ನವೀನ್ ಕುಮಾರ್ (Forever Naveen Kumar) ಇತ್ತೀಚೆಗೆ ಜೈಪುರದಲ್ಲಿ ನಡೆದ ಟೈಮ್ಸ್ ಫ್ಯಾಷನ್ ವೀಕ್ (Times Fashion Week) ನಲ್ಲಿ ಪಾಲ್ಗೊಂಡಿದ್ದರು. ಇವರ ಶೋ ಸ್ಟಾಪರ್ ಆಗಿ ನಟಿ ರೂಪದರ್ಶಿ ರಚಿಕಾಸುರೇಶ್ (Rachika Suresh) ಭಾಗವಹಿಸಿದ್ದರು. ನವೀನ್ ಕುಮಾರ್ ಈಗಾಗಲೇ ದೇಶಾದ್ಯಂತ 140ಕ್ಕೂ ಹೆಚ್ಚು ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದ್ದಾರೆ.

ಇನ್ನು ರೈತ ಕುಟುಂಬದಿಂದ ಬಂದ ರಚಿಕಾ ಸುರೇಶ್ ಈಗ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹೌದು, ರಚಿಕಾ ಆರಂಭದಿಂದಲೂ ಸಿನಿಮಾ, ಮಾಡೆಲಿಂಗ್ ಎರಡರಲ್ಲೂ ಹೆಜ್ಜೆ ಇಟ್ಟವರು. ಈಗಾಗಲೇ ಸಾಕಷ್ಟು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಇವರು ಜೈಪುರ ಟೈಮ್ಸ್ ಫ್ಯಾಷನ್ ವೀಕ್ ನಲ್ಲಿ ಫಾರೆವರ್ ನವೀನ್ ಕುಮಾರ್ ಅವರ ಶೋ ಸ್ಟಾಪರ್ ಆಗಿ ಭಾಗವಹಿಸಿದ್ದರು. ರಚಿಕಾ ಸುರೇಶ್ ಅವರಿಗೆ ಫಾರೆವರ್ ನವೀನ್‌ಕುಮಾರ್ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ.

ಎರಡು ದಿನ ನಡೆದ ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದಾದ್ಯಂತ ಹಲವಾರು ಡಿಸೈನರ್ ಗಳು, ರೂಪದರ್ಶಿಯರು ಭಾಗವಹಿಸಿದ್ದರು, ಅದರಲ್ಲಿ ಕರ್ನಾಟಕದ ಬೆಂಗಳೂರು ಪರವಾಗಿ ಹೆಸರಾಂತ ಫ್ಯಾಷನ್ ಡಿಸೈನರ್ ನವೀನ್‌ಕುಮಾರ್ ಭಾಗವಹಿಸಿದ್ದರು. ಮಾಡೆಲಿಂಗ್ ಜೊತೆಗೆ ಚಿತ್ರರಂಗದಲ್ಲೂ ಮಿಂಚುತ್ತಿರುವ ರಚಿಕಾ ಸುರೇಶ್ ಅವರು ಕನ್ನಡ ಅಲ್ಲದೆ ತಮಿಳು ಚಿತ್ರರಂಗದಲ್ಲೂ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಈಗಾಗಲೇ ಕನ್ನಡ, ತಮಿಳು ಚಿತ್ರಗಳಲ್ಲಿ ನಟಿಸಿರುವ ರಚಿಕಾ ಸುರೇಶ್‌ಗೆ ಈಗಾಗಲೇ ತೆಲುಗು ಚಿತ್ರದಲ್ಲಿ ನಟಿಸಲು ಆಫರ್ ಬಂದಿದೆ. ಫ್ಯಾಷನ್ ಟ್ರೈನರ್ ಫಾರೆವರ್ ನವೀನ್‌ಕುಮಾರ್ ರಚಿಕಾ ಸುರೇಶ್ ಅವರಿಗೆ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ. ಈಗಾಗಲೇ ಜಾಯ್ ಅಲುಕ್ಕಾಸ್‌ಗೆ ಶೋಸ್ಟಾಪರ್ ಆಗಿರುವ ರಚಿಕಾ ಹಲವಾರು ಕಂಪನಿಗಳಿಗೆ ರೂಪದರ್ಶಿಯಾಗಿ, ಜೊತೆಗೆ ಶ್ರೀಲಂಕಾ ಸೇರಿದಂತೆ ಹಲವಾರು ಇಂಟರ್‌ನ್ಯಾಷನಲ್ ಫ್ಯಾಷನ್ ಷೋಗಳಲ್ಲಿ ಬಾಗವಹಿಸಿ ಗುರ್ತಿಸಿಕೊಂಡಿದ್ದಾರೆ.

RELATED ARTICLES

Latest News