Thursday, September 19, 2024
Homeರಾಷ್ಟ್ರೀಯ | Nationalಸಂವಿಧಾನ ಪೀಠಿಕೆ ಕೈಬಿಟ್ಟ ಆರೋಪ : ಧಮೇಂದ್ರ ಪ್ರಧಾನ್‌ ವಿರುದ್ಧ ಹಕ್ಕುಚ್ಯುತಿಗೆ ಮನವಿ

ಸಂವಿಧಾನ ಪೀಠಿಕೆ ಕೈಬಿಟ್ಟ ಆರೋಪ : ಧಮೇಂದ್ರ ಪ್ರಧಾನ್‌ ವಿರುದ್ಧ ಹಕ್ಕುಚ್ಯುತಿಗೆ ಮನವಿ

ನವದೆಹಲಿ, ಆ.9 (ಪಿಟಿಐ) ಸಂವಿಧಾನದ ಪೀಠಿಕೆಯನ್ನು ಕೈಬಿಟ್ಟಿರುವ ಆರೋಪದ ಮೇಲೆ ಸದನವನ್ನು ತಪ್ಪುದಾರಿಗೆ ಎಳೆಯುತ್ತಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ವಿರುದ್ಧ ರಾಜ್ಯಸಭೆಯಲ್ಲಿ ಹಕ್ಕು ಚ್ಯುತಿ ಪ್ರಕ್ರಿಯೆ ಆರಂಭಿಸುವಂತೆ ಹಿರಿಯ ಕಾಂಗ್ರೆಸ್‌‍ ನಾಯಕ ಜೈರಾಮ್‌ ರಮೇಶ್‌ ನೋಟಿಸ್‌‍ ನೀಡಿದ್ದಾರೆ.

ಸಭಾಪತಿ ಜಗದೀಪ್‌ ಧನಖರ್‌ ಅವರಿಗೆ ಬರೆದ ಪತ್ರದಲ್ಲಿ ರಮೇಶ್‌ ಅವರು, ಆಗಸ್ಟ್‌ 7 ರಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 3 ಮತ್ತು 6 ನೇ ತರಗತಿಯ ಮಕ್ಕಳಿಗೆ ಎನ್‌ಸಿಇಆರ್‌ಟಿಯಿಂದ ಪಠ್ಯಪುಸ್ತಕಗಳಲ್ಲಿ ಭಾರತದ ಸಂವಿಧಾನದ ಮುನ್ನುಡಿಯನ್ನು ಕೈಬಿಟ್ಟಿರುವ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಅವರು, ತರುವಾಯ (ಮಧ್ಯಾಹ್ನ 12 ಗಂಟೆಗೆ) ಅಭಿ ಭಿ ಕಕ್ಷಾ 6 ಕಿ ಜೋ ಪಥ್ಯಾಪುಸ್ತಕ್‌ ಆಯಿ ಹೈ, ಉಸೇ ಭಿ ಪೀಠಿಕೆ ಹೈ ಎಂದು ಹೇಳಿದರು (6ನೇ ತರಗತಿಯ ಪಠ್ಯಪುಸ್ತಕವು ಪೀಠಿಕೆಯನ್ನು ಸಹ ಹೊಂದಿದೆ ಎಂದು ಹೇಳಿದ್ದರು.

ಪ್ರಧಾನ್‌ ಅವರ ಈ ಸಮರ್ಥನೆಯು ವಾಸ್ತವಿಕವಾಗಿ ತಪ್ಪು ಮತ್ತು ತಪ್ಪುದಾರಿಗೆಳೆಯುವ ಪ್ರಯತ್ನ ಎಂದು ರಮೇಶ್‌ ಅವರು ನಿನ್ನೆ ಧನಖರ್‌ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ನನ್ನ ವಾದವನ್ನು ಬೆಂಬಲಿಸಲು, ನಾನು 3 ನೇ ತರಗತಿಯ ಪಠ್ಯಪುಸ್ತಕದ ಪ್ರತಿಗಳನ್ನು ಲಗತ್ತಿಸಿದ್ದೇನೆ ಹೀಗಾಗಿ ಪ್ರಧಾನ್‌ ಅವರ ವಿರುದ್ಧ ಹಕ್ಕುಚ್ಯುತಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News