ನವದೆಹಲಿ,ಆ.21- ದಶಕದ ಬಳಿಕ ಜಮ್ಮು ಮತ್ತು ಕಶ್ಮೀರ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ರಾಜಕೀಯ ಪಕ್ಷಗಳು ಪ್ರಚಾರ ಶುರು ಮಾಡಿವೆ. ಕಣಿವೆಯಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಈ ಮಧ್ಯೆ ಹೆಚ್ಚಿದ್ದು, ಮತದಾನದ ವೇಳೆ ದೊಡ್ಡ ಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಕಾಶೀರ ಕಣಿವೆಯಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ ಸುಮಾರು 300 ಅರೆಸೇನಾ ಪಡೆಗಳನ್ನು ನಿಯೋಜಿಸಿದೆ. ಅವುಗಳನ್ನು ಶ್ರೀನಗರ, ಹಂದ್ವಾರ, ಗಂದರ್ಬಾಲ್, ಬುದ್ಗಾಮ್, ಕುಪ್ವಾರಾ, ಬಾರಾಮುಲ್ಲಾ, ಬಂಡಿಪೋರಾ, ಅನಂತನಾಗ್, ಶೋಪಿಯಾನ್, ಪುಲ್ವಾಮಾ, ಅವಂತಿಪೋರಾ ಮತ್ತು ಕುಲ್ಗಾಮ್‌ನಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ ಯಾವುದೇ ಅಡೆತಡೆ ಇಲ್ಲದೇ, ಸುಗಮವಾಗಿ ನಡೆಯಲು ಕೇಂದ್ರೆಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಸಹಸ ಸೀಮಾ ಬಾಲ್ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಭದ್ರತಾ ಸಿಬ್ಬಂದಿಯನ್ನು ಈ ತುಕಡಿಗಳು ಹೊಂದಿವೆ.
ಎಲ್ಲೆಲ್ಲಿ ಎಷ್ಟು ತುಕಡಿಗಳ ನಿಯೋಜನೆ? :
ಉಗ್ರ ದಾಳಿಗೆ ಕುಖ್ಯಾತಿಯಾಗಿರುವ ಶ್ರೀನಗರದಲ್ಲಿ ಗರಿಷ್ಠ ಸಂಖ್ಯೆಯ 55 ತಂಡಗಳನ್ನು ನಿಯೋಜಿಸಲಾಗಿದೆ. ಅನಂತನಾಗ್ ಜಿಲ್ಲೆಯಲ್ಲಿ 50, ಕುಲ್ಗಾಮ್‌ನಲ್ಲಿ 31, ಬುದ್ಗಾಮ್, ಪುಲ್ವಾಮಾ ಮತ್ತು ಅವಂತಿಪೋರಾ ಜಿಲ್ಲೆಗಳಲ್ಲಿ ತಲಾ 24, ಶೋಪಿಯಾನ್‌ನಲ್ಲಿ 22, ಕುಪ್ವಾರ 20, ಬಾರಾಮುಲ್ಲಾ 17, ಹಂದ್ವಾರ 15, ಬಂಡಿಪೋರಾ 13, ಮತ್ತು ಗಂದರ್ಬಲ್ (3) ತುಕಡಿಗಳನ್ನು ಭದ್ರತೆಗೆ ಇಡಲಾಗಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಮೂರು ಹಂತದಲ್ಲಿ ಮತದಾನ ನಡೆಯಲಿದೆ. ಸೆಪ್ಟೆಂಬರ್ 18ರಂದು ಮೊದಲ, 25ರಂದು ಎರಡನೇ ಹಂತ, ಅಕ್ಟೋಬರ್ 1ರಂದು ಮೂರನೇ ಮತ್ತು ಅಂತಿಮ ಹಂತದ ಮತದಾನ ನಡೆಯಲಿದೆ. ಅಕ್ಟೋಬರ್ 4ರಂದು ಲಿತಾಂಶ ಪ್ರಕಟವಾಗಲಿದೆ.
ಹರಿಯಾಣದಲ್ಲಿ 200 ತಂಡಗಳ ನಿಯೋಜನೆ:
ಜಮು ಕಾಶೀರದ ಜೊತೆಗೆ ಹರಿಯಾಣ ವಿಧಾನಸಭೆಗೂ ಚುನಾವಣೆ ನಡೆಯಲಿದ್ದು, ಮುಕ್ತ, ನ್ಯಾಯಸಮತ ಮತ್ತು ಶಾಂತಿಯುತ ಮತದಾನಕ್ಕಾಗಿ ಕೇಂದ್ರೀಯ ಪಡೆಗಳ 200ಕ್ಕೂ ಹೆಚ್ಚು ತಂಡಗಳನ್ನು ರಾಜ್ಯ ಚುನಾವಣಾ ಆಯೋಗ ಕೋರಿದೆ. ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಪಂಕಜ್ ಅಗರ್ವಾಲ್, 225 ಕೇಂದ್ರೆಯ ಪಡೆಗಳಿಗೆ ಬೇಡಿಕೆ ಇಡಲಾಗಿದೆ.
ಅದರಲ್ಲಿ 70 ತಂಡಗಳನ್ನು ಈಗಾಗಲೇ ರವಾನಿಸಲಾಗಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್1ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 4ರಂದು ಲಿತಾಂಶ ಪ್ರಕಟವಾಗಲಿದೆ ಎಂದರು.