Sunday, September 15, 2024
Homeರಾಷ್ಟ್ರೀಯ | Nationalಸೈನಿಕರ ಹತ್ಯೆಯಲ್ಲಿ ಭಾಗಿಯಾದ ಆರೋಪದ ಹಿನ್ನಲೆಯಲ್ಲಿ 9 ಉಗ್ರರ ಸಹಚರರ ಬಂಧನ

ಸೈನಿಕರ ಹತ್ಯೆಯಲ್ಲಿ ಭಾಗಿಯಾದ ಆರೋಪದ ಹಿನ್ನಲೆಯಲ್ಲಿ 9 ಉಗ್ರರ ಸಹಚರರ ಬಂಧನ

ನವದೆಹಲಿ,ಆ.13– ನಾಲ್ವರು ಸೈನಿಕರ ಹತ್ಯೆಯಲ್ಲಿ ಭಾಗಿಯಾದ ಆರೋಪದ ಹಿನ್ನಲೆಯಲ್ಲಿ ಒಂಬತ್ತು ಭಯೋತ್ಪಾದಕ ಸಹಚರರನ್ನು ಪೊಲೀಸರು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.ಕಥುವಾದ ಉಧಮ್‌ಪುರದಿಂದ ಪಾಕಿಸ್ತಾನಕ್ಕೆ ತೆರಳಲು ಈ ಒಂಬತ್ತು ಮಂದಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಕಥುವಾ ಜಿಲ್ಲೆಯ ಅಂಬೆ ನಾಲ್‌ ನಿವಾಸಿ ಮೊಹಮದ್‌ ಲತೀಫ್‌ ಅಲಿಯಾಸ್‌‍ ಹಾಜಿ ಲತೀಫ್‌, ಅಖ್ತರ್‌ ಅಲಿ, ಕಥುವಾ ಜಿಲ್ಲೆಯ ಅಂಬೆ ನಾಲೆ ಸದ್ದಾಂ, ಕುಶಾಲ್‌, ನೂರಾನಿ, ಮಕ್ಬೂಲ್‌, ಕಾಸಿಂ ದಿನ್‌ ಮತ್ತು ಖಾದಿಮ್‌ ಅಲಿಯಾಸ್‌‍ ಖಾಜಿ, ಕತ್ತಲ್‌ ಎಂದು ಗುರುತಿಸಲಾಗಿದೆ.

ಇದರಲ್ಲಿ ಹಾಜಿ ಲತೀಫ್‌ ಪ್ರಮುಖ ಕಿಂಗ್‌ಪಿನ್‌ ಆಗಿದ್ದಾನೆ. ತನ್ನ ಪ್ರದೇಶದ ಮೂಲಕ ಹಾದುಹೋಗುವ ಭಯೋತ್ಪಾದಕರಿಗೆ ಮಾರ್ಗದರ್ಶಿ/ಲಾಜಿಸ್ಟಿಕ್ಸ್ಸ ಇತ್ಯಾದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಆಹಾರ ಪೂರೈಕೆದಾರರಾಗಿ ಇತರರನ್ನು ತೊಡಗಿಸಿಕೊಂಡ ಕಾರಣ ಈತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮೊಹಮದ್‌ ಲತೀಫ್‌ ಪಾಕಿಸ್ತಾನದಿಂದ ನುಸುಳಿದ ನಂತರ ಭಯೋತ್ಪಾದಕರಿಗೆ ಧೋಕ್‌ಗಳಲ್ಲಿ ಆಶ್ರಯ ಪಡೆಯಲು ಸಹಾಯ ಮಾಡುತ್ತಿದ್ದ. ದೋಡಾ ಜಿಲ್ಲೆಯ ಗಂಡೋ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಇಬ್ಬರು ಭಯೋತ್ಪಾದಕರು ಆತನಿಂದ ಆಶ್ರಯ ಪಡೆದಿದ್ದಾರೆ. ಹೀರಾನಗರದಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ನಂತರ ಆತ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗಡಿಯಾಚೆಗಿನ ಭಯೋತ್ಪಾದಕ ಗುಂಪುಗಳ ಜೊತೆ ಸಕ್ರಿಯ ಸಹಯೋಗದಲ್ಲಿ, ಸಾಂಬಾ-ಕಥುವಾ ವಲಯದಲ್ಲಿ ಭಾರತಕ್ಕೆ ಅಕ್ರಮವಾಗಿ ಮತ್ತು ಗುಟ್ಟಾಗಿ ಪ್ರವೇಶಿಸಿದ ನಂತರ ವಿದೇಶಿ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಎನ್ನಲಾಗಿದೆ.

ತಮ ಜಾನುವಾರುಗಳನ್ನು ಮೇಯಿಸಲು ಪರ್ವತಗಳ ಬಳಿ ಧೋಕ್‌ಗಳಲ್ಲಿ (ಬೇಸಿಗೆ ಕಚ್ಚಾ ಗುಡಿಸಲುಗಳು) ವಾಸಿಸುತ್ತಿರುವ ಒಟ್ಟು 50 ಜನರನ್ನು ವಿಚಾರಣೆಗೊಳಪಡಿಸಲಾಯಿತು. ಭಯೋತ್ಪಾದಕರಿಗೆ ಆಶ್ರಯ ನೀಡಿದ್ದಕ್ಕಾಗಿ ತನಿಖೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿದೇಶಿ ಭಯೋತ್ಪಾದಕರಿಗೆ ಆಹಾರ, ವಸತಿ ಅಥವಾ ಸಂವಹನ ಸಹಾಯವನ್ನು ಒದಗಿಸಿದ್ದರು. ಆದರೆ, ಕೆಲವರು ಮಾತ್ರ ಪೊಲೀಸರಿಗೆ ದೂರು ನೀಡಿರಲಿಲ್ಲ. ಅವರಲ್ಲಿ ಕೆಲವರು ಭಯೋತ್ಪಾದಕರಿಂದ ಹಣವನ್ನೂ ಸ್ವೀಕರಿಸಿದ್ದಾರೆ. ಸಕಾಲದಲ್ಲಿ ಪೊಲೀಸರಿಗೆ ದೂರು ನೀಡಿದವರನ್ನು ನಿರಪರಾಧಿಗಳೆಂದು ಪರಿಗಣಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 8 ರಂದು ಕಥುವಾ ಜಿಲ್ಲೆಯ ಬಿಲ್ಲವರ್‌ ಪ್ರದೇಶದ ಮಚೇಡಿ ಬಳಿಯ ಬದ್ನೋಟಾದಲ್ಲಿ ಜೂನಿಯರ್‌ ಕಮಿಷನ್ಸ್ ಡ ಆಫೀಸರ್‌ (ಜೆಸಿಒ) ಸೇರಿದಂತೆ ಸೇನಾ ಸೈನಿಕರು ಹತರಾಗಿದ್ದರು. ಜೂನ್‌ 26ರಂದು ದೋಡಾ ಜಿಲ್ಲೆಯ ಗಂಡೋ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದರು. ಈ ಭಯೋತ್ಪಾದಕರು ಮೇಲ್ಭಾಗದ ಪ್ರದೇಶಗಳನ್ನು ತಲುಪುವವರೆಗೆ ಪತ್ತೆಯಾಗದೆ ಅಡಗಿಕೊಂಡು ಪ್ರಯಾಣಿಸಲು ಇವರೆಲ್ಲರೂ ಸಹಾಯ ಮಾಡಿದ್ದಾರೆ ಎಂಬ ಆರೋಪವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News