Friday, June 21, 2024
Homeರಾಜಕೀಯಬಿಜೆಪಿ-ಜೆಡಿಎಸ್ ಮೈತ್ರಿ ಕಾರ್ಯಕರ್ತರಿಗೆ ಮಾಡಿದ ನಂಬಿಕೆ ದ್ರೋಹ : ಜನತಾಶಕೀಲ್

ಬಿಜೆಪಿ-ಜೆಡಿಎಸ್ ಮೈತ್ರಿ ಕಾರ್ಯಕರ್ತರಿಗೆ ಮಾಡಿದ ನಂಬಿಕೆ ದ್ರೋಹ : ಜನತಾಶಕೀಲ್

ಚನ್ನಪಟಣ,ಸೆ.24-ದೇಶದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‍ನ ಸರ್ವೋಚ್ಚ ನಾಯಕ ಎಚ್.ಡಿ.ದೇವೇಗೌಡರವರು ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕರಾದ ಎಚ್.ಡಿ.ಕುಮಾರಸ್ವಾಮಿರವರು ತಾವೇ ಕೋಮುವಾದಿ ಪಕ್ಷವೆಂದೇ ಕರೆಯುತ್ತಿದ್ದ ಬಿಜೆಪಿಯ ಎನ್‍ಡಿಎ ಜೊತೆ ಮೈತ್ರಿ ಮಾಡಿಕೊಂಡು, ಬಿಜೆಪಿ ನಾಯಕರ ಜೊತೆ ಕೈ ಎತ್ತಿರುವುದು ತಮ್ಮನ್ನೇ ನಂಬಿದ ಕೋಟ್ಯಾಂತರ ಕಾರ್ಯಕರ್ತರ ಮನಸ್ಸಿಗೆ ಅಘಾತವನ್ನು ಉಂಟುಮಾಡಿದ್ದಾರೆಂದು, ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಯುವ ಮುಖಂಡ ಜನತಾ ಶಕೀಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಪಕ್ಷದ ಉದಯದಿನದಿಂದಲೂ ಬಿಜೆಪಿಯ ಬಗ್ಗೆ ತಮ್ಮ ಅಸಮಾದಾನವನ್ನು ಹೊರ ಹಾಕುತ್ತಿದ್ದ ಮಾಜಿ ಪ್ರಧಾನಿಗಳಾದ ದೇವೇಗೌಡರು ತಮ್ಮನ್ನೇ ನಂಬಿದ ಕಾರ್ಯಕರ್ತರು.ಮತದಾರರು ಅದರಲ್ಲೂ ಮುಸ್ಲಿಂ ಸಮುದಾಯದ ನಂಬಿಕೆಗೆ ದ್ರೋಹ ಬಗೆದು, ತಮ್ಮ ಕುಟುಂಬದ ರಾಜಕೀಯ ನೆಲೆಗಾಗಿ,ಕೋಮುವಾದಿಯನ್ನೇ ಮೈಗೂಡಿಸಿಕೊಂಡಿರುವ ಎನ್‍ಡಿಎ ಜೊತೆ ನಂಟು ಬೆಳಸಿರುವುದು, ನಿಮ್ಮ ರಾಜಕೀಯ ಕುತಂತ್ರಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಮದ್ಯಭಾಗ್ಯ ನೀಡಿ ಕರ್ನಾಟಕವನ್ನು ‘ಕುಡುಕರ ತೋಟ’ ಮಾಡುತ್ತಿದೆ ಧನಪಿಶಾಚಿ ಸರ್ಕಾರ : ಹೆಚ್ಡಿಕೆ ಆಕ್ರೋಶ

ಚನ್ನಪಟ್ಟಣ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರ ರಾಜಕೀಯ ಜನ್ಮ ನೀಡಿದ ಕ್ಷೇತ್ರದ ಮುಸ್ಲಿಂ ಮತದಾರರು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ, ಸೋಲಿನ ಹತಾಸೆಯಲ್ಲಿದ್ದ ನಿಮಗೆ ನಗರ ಪ್ರದೇಶವೊಂದರಲ್ಲಿ 15 ಸಾವಿರಕ್ಕೂ ಹೆಚ್ಚು ಮತಗಳನ್ನು ಅಂತರದಿಂದ ಜಯದ ಮಾಲೆಯನ್ನು ಹಾಕಿದ ಮುಸ್ಲಿಂ ಮತದಾರರಿಗೆ ನೀವು ಕೊಟ್ಟಿರುವ ಬಹುದೊಡ್ಡ ಕೊಡಗೆಯೇ ಇದು ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಸರ್ಕಾರವನ್ನು ತಗೆದ ಬಿಜೆಪಿ ಎಂದು ಬೊಬ್ಬೆ ಹೊಡೆಯುತ್ತಿದ್ದ ಕುಮಾರಸ್ವಾಮಿರವರೇ ಈಗ ಸರ್ಕಾರವನ್ನು ತೆಗೆದದ್ದು ಜ್ಞಾಪಕಕ್ಕೆ ಬರುತ್ತಿಲ್ಲವೇ, ತಮ್ಮ ಅಕಾರ ಹಾಗೂ ರಾಜಕೀಯಲಾಭದ ಭವಿಷ್ಯಕ್ಕಾಗಿ ಯಾರನ್ನು, ಯಾವ ಸಮಯದಲ್ಲಿ ಬೇಕಾದರೂ ಕೂಡ ದುರುಪಯೋಗಪಡಿಸಿಕೊಳ್ಳಲು ನಿಪುಣರೆಂದು ಸಾಬಿತು ಮಾಡಿದ್ದೀರಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷ ಪಕ್ಷ ಎಂದು ಸಾಮಾನ್ಯ ಕಾರ್ಯಕರ್ತರು ಹೊಡದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿ ನಂತರ ನ್ಯಾಯಾಲಯದಲ್ಲಿ ಇಂದಿಗೂ ಪ್ರಕರಣದ ವ್ಯಾಜ್ಯ ನಡೆಯುತ್ತಿದೆ ಆದರೆ ಅಂತಹ ನಿಷ್ಟವಂತ ಕಾರ್ಯಕರ್ತರ ಪ್ರಾಮಾಣಿಕತೆ.ನಿಷ್ಟೆಗೆ ದ್ರೋಹ ಬಗೆದಿರುವ ನಿಮಗೆ ಕಾಲವೇ ಉತ್ತರ ನೀಡಲಿದೆ ಎಂದು ತಮ್ಮ ಭವಿಷ್ಯ ನುಡಿದಿದ್ದಾರೆ.

RELATED ARTICLES

Latest News