ಟೋಕಿಯೋ, ಜ 2 – ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದ ಜಪಾನ್ ಏರ್ ಲೈನ್ಸ್ ಜೆಟ್‍ವೊಂದು ಟೋಕಿಯೊದ ಹನೆಡಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಬೆಂಕಿ ಹೊತ್ತಿಕೊಂಡಿದ್ದು, ಅಚ್ಚರಿಯ ರೀತಿಯಲ್ಲಿ ಎಲ್ಲಾ 379 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಬೆಂಕಿಯನ್ನು ನಿಯಂತ್ರಿಸಲು ರಕ್ಷಣಾ ಸಿಬ್ಬಂದಿಗಳ ಪ್ರಯತ್ನಗಳ ಹೊರತಾಗಿಯೂ ವಿಮಾನವು ಕೆಳಗೆ ಜಾರಿದ ಕಾರಣ ಜ್ವಾಲೆಯಲ್ಲಿ ಸ್ಪೋಟಗೊಂಡಿದೆ. ಕೋಸ್ಟ್ ಗಾರ್ಡ್ ವಿಮಾನವೊಂದು ಪ್ರಯಾಣಿಕ ಜೆಟ್‍ಗೆ ಡಿಕ್ಕಿ ಹೊಡೆದಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದರು.
ವರದಿಯ ಪ್ರಕಾರ ಕೋಸ್ಟ್ ಗಾರ್ಡ್ ವಿಮಾನದ ಆರು ಸಿಬ್ಬಂದಿಗಳಲ್ಲಿ ಐವರು ಪತ್ತೆಯಾಗಿಲ್ಲ, ಒಬ್ಬರು ತಪ್ಪಿಸಿಕೊಂಡಿದ್ದಾರೆ. ಜಪಾನ್ ಏರ್‍ಲೈನ್ಸ್‍ನ ವಕ್ತಾರರು ವಿಮಾನವು ಉತ್ತರ ದ್ವೀಪವಾದ ಹೊಕ್ಕೈಡೊದಲ್ಲಿರುವ ಶಿನ್-ಚಿಟೋಸ್ ವಿಮಾನ ನಿಲ್ದಾಣದಿಂದ ಬಂದಿತ್ತು ಎಂದು ಹೇಳಿದರು.ಘಟನೆಯ ನಂತರ ಹನೇಡಾ ಎಲ್ಲಾ ರನ್‍ವೇಗಳನ್ನು ಮುಚ್ಚಿದ್ದಾರೆ ತಿಳಿಸಿದ್ದಾರೆ.