ಟೋಕಿಯೊ,ಅ.1– ಜಪಾನ್ನ ಪ್ರಧಾನಿ -ಫ್ಯೂಮಿಯೊ ಕಿಶಿಡಾ ಅವರು ತಮ್ಮ ಸಂಪುಟದೊಂದಿಗೆ ರಾಜೀನಾಮೆ ನೀಡಿದ್ದಾರೆ. ಇಂದು ಕ್ಯಾಬಿನೆಟ್ ಸಭೆ ನಡೆಸಿದ ಕಿಶಿದಾ ಅವರು ಚರ್ಚೆ ನಡೆಸಿ ನಂತರ ಸಂಪುಟ ಸಚಿವರೊಂದಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಮಾಸಾ ಹಯಾಶಿ ಘೋಷಿಸಿದ್ದಾರೆ.ಉತ್ತರಾಧಿಕಾರಿ ಶಿಗೆರು ಇಶಿಬಾ ಅವರು ಅ„ಕಾರ ವಹಿಸಿಕೊಳ್ಳಲು ದಾರಿ ಮಾಡಿಕೊಟ್ಟದ್ದಾರೆ.
ಈಗಾಗಲೆ ಲಿಬರಲ್ ಡೆಮಾಕ್ರಟಿಕ್ ಪಕ್ಷದ ನಾಯಕಿಯಾಗಿ ಇಶಿಬಾ ಆಯ್ಕೆಯಾಗಿದ್ದು ಸಂಸತ್ತಿನ ಮತದಾನದ ನಂತರ ದೇಸದ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆ ಪಾತ್ರವಾಗಲಿದ್ದಾರೆ.
ತಮ್ಮ ಅಧಿಕಾರಾವಧಿ ಮೂರು ವರ್ಷ ಕೊನೆಗೊಳ್ಳುವ ಮೊದಲೇ ತಮ್ಮ ರಾಜೀನಾಮೆಯನ್ನು ಒಂದು ತಿಂಗಳ ಹಿಂದೆಯೇ ಘೋಷಿಸಿದರು.2021ರಲ್ಲಿ ಕಿಶಿದಾ ಅಧಿಕಾರ ವಹಿಸಿಕೊಂಡಿದ್ದರು ಆದರೆ ಅವರ ಆಡಳಿತದಲ್ಲಿ ಹವವಾರುಹಗರಣಗಳು ಕೇಳಿಬಂದ ಹಿನ್ನಲೆಯಲ್ಲಿ ಅವರನ್ನು ಪ್ರಧಾನಿ ಪಟ್ಟದಿಂದ ಕಿಳಗಿಳಿಸಲು ಲಿಬರಲ್ ಪಕ್ಷವು ನಿರ್ಧರಿಸಿತ್ತು,ಹೊಸ ನಾಯಕಿಯನ್ನು ಪರಿಚಯಿಸಿದೆ.
ಇಶಿಬಾ ಅವರು ಔಪಚಾರಿಕವಾಗಿ ಪ್ರಧಾನಿ ಸ್ಥಾನಕ್ಕೆ ಆಯ್ಕೆಯಾದ ನಂತರ ಅ.27 ರಂದು ಸಂಸತ್ತಿನ ಬಹುಮತ ಸಾಭೀತಿಗೆ ಅ„ವೇಶನ ಕರೆಯಲು ಯೋಜಿಸಿದ್ದಾರೆ ಮತ್ತು ನಂತರ ತಮ್ಮ ಹೊಸ ಕ್ಯಾಬಿನೆಟ್ ಸಚಿವರನ್ನು ಘೋಷಿಸುತ್ತಾರೆ.
ಹೊಸ ಆಡಳಿತವು ಸಾಧ್ಯವಾದಷ್ಟು ಬೇಗ ದೇಶದ ಜನರ ತೀರ್ಪು ಪಡೆಯುವುದು ಮುಖ್ಯ ಎಂದು ನಾನು ನಂಬುತ್ತೇನೆ ಎಂದು ಇಶಿಬಾ ಹೇಳಿದರು.ಕಳೆದ 1986 ರಲ್ಲಿ ಸಂಸತ್ತಿಗೆ ಮೊದಲ ಬಾರಿಗೆ ಚುನಾಯಿತರಾದ ಇಶಿಬಾ ಅವರು ರಕ್ಷಣಾ ಸಚಿವರಾಗಿ, ಕೃಷಿ ಸಚಿವರಾಗಿ ಮತ್ತು ಇತರ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಡಿಯಲ್ಲಿ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ರಾಜಕೀಯದಲ್ಲಿ ಅನುಭವ ಹೊಂದಿದ್ದಾರೆ.