Friday, October 4, 2024
Homeರಾಷ್ಟ್ರೀಯ | Nationalಭಾರತೀಯರಿಗೆ 2.50 ಲಕ್ಷ ವೀಸಾ ನೀಡಲು ಮುಂದಾದ ಅಮೆರಿಕಾ

ಭಾರತೀಯರಿಗೆ 2.50 ಲಕ್ಷ ವೀಸಾ ನೀಡಲು ಮುಂದಾದ ಅಮೆರಿಕಾ

US adds 2.5 lakh new visa slots for Indians

ನವದೆಹಲಿ, ಅ.1- ಭಾರತದಿಂದ ಅಮೇರಿಕಾಗೆ ತೆರಳುವ ಪ್ರವಾಸಿಗರು, ನುರಿತ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಯಾಣಿಕರಿಗೆ ಹೆಚ್ಚುವರಿ 2.50 ಲಕ್ಷ ವೀಸಾ ನೇಮಕಾತಿಗಳನ್ನು ತೆರೆದಿದೆ ಎಂದು ಅಮೆರಿಕ ರಾಯಭಾರಿ ಕಚೇರಿ ಹೇಳಿದೆ.

ಕಳೆದ ವರ್ಷ 1.4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ವೀಸಾಗಳನ್ನು ನೀಡಲಾಗಿತ್ತು. ಕಳೆದ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಾ ಪ್ರವಾಸ ಮುಗಿಸಿ ವಾಪಾಸ್ಸಾಗಿದ್ದರು. ಇದರ ಬೆನ್ನಲ್ಲೇ ಭಾರತದಿಂದ ಅಮೆರಿಕಾಕ್ಕೆ ಪ್ರವಾಸ ಹಾಗೂ ವ್ಯಪಾರ ವಹಿವಾಟು, ಪ್ರವಾಸ ಕೈಗೊಳ್ಳುವವರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.

ಅಮೆರಿಕಾಕ್ಕೆ ಹೋಗ ಬಯಸುವ ಸುಮಾರು 2.50 ಲಕ್ಷ ಭಾರತೀಯರಿಗೆ ವೀಸಾ ನೀಡುವ ಪ್ರಕ್ರಿಯೆಗೆ ಭಾರತದಲ್ಲಿರುವ ಅಮೆರಿಕಾದ ರಾಯಭಾರಿ ಕಚೇರಿಗಳು ಚಾಲನೆ ನೀಡಿದೆ.ಯುಎಸ್‌‍ ಮಿಷನ್‌ ಟು ಇಂಡಿಯಾ ಎನ್ನುವ ಟ್ಯಾಗ್‌ಲೈನ್‌ನಡಿ ವೀಸಾ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಇನ್ನು ಇದರಿಂದ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು-ಸಂಬಂಧ ಬಲಪಡಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಭಾರತದಲ್ಲಿನ ಅಮೆರಿಕಾದ ರಾಯಭಾರಿ ಕಚೇರಿ ತಿಳಿಸಿದೆ.

ಇತ್ತೀಚೆಗೆ ಬಿಡುಗಡೆಯಾದ ಸಂದರ್ಶನದ ಹೊಸ ಸ್ಲಾಟ್‌ಗಳು ಲಕ್ಷಾಂತರ ಭಾರತೀಯ ಅರ್ಜಿದಾರರಿಗೆ ಸಮಯೋಚಿತವಾಗಿ ಸಂದರ್ಶನಗಳಿಗೆ ಹಾಜರಾಗಲು ಸಹಾಯ ಮಾಡುತ್ತವೆ. ಅಮೆರಿಕ – ಭಾರತಗಳ ಸಂಬಂಧಕ್ಕೆ ಆಧಾರವಾಗಿರುವ ಹಾಗೂ ಜನರ ನಡುವಿನ ಸಂಬಂಧಗಳ ಬೆನ್ನೆಲುಬಾಗಿರುವ ಪ್ರಯಾಣವನ್ನು ಈ ಕ್ರಮ ಸುಗಮಗೊಳಿಸಲಿದೆ ಎಂದು ರಾಯಭಾರ ಕಚೇರಿ ಹೇಳಿದೆ.

2024ರಲ್ಲಿ ಇದುವರೆಗೆ 1.2 ಮಿಲಿಯನ್‌ ಭಾರತೀಯರು ಅಮೆರಿಕಾಕ್ಕೆ ಪ್ರಯಾಣಿಸಿದ್ದಾರೆ, 2023ರ ಈ ಸಂದರ್ಭಕ್ಕೆ ಹೋಲಿಸಿದರೆ ಈ ವರ್ಷ ಸುಮಾರು ಶೇ.35ರಷ್ಟು ಹೆಚ್ಚಳವಾಗಿದೆ. ಕನಿಷ್ಠ 6 ಮಿಲಿಯನ್‌ ಭಾರತೀಯರು ಈಗಾಗಲೇ ಅಮೆರಿಕಾಕ್ಕೆ ಭೇಟಿ ನೀಡಲು ವಲಸೆರಹಿತ ವೀಸಾ ಹೊಂದಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಹೊಸ ಸ್ಲಾಟ್‌ಗಳು ಲಕ್ಷಾಂತರ ಭಾರತೀಯ ಅರ್ಜಿದಾರರಿಗೆ ಪೂರಕವಾಗಿ ಸೂಕ್ತ ಸಮಯದಲ್ಲಿ ಭೇಟಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಅಮೇರಿಕಾಕ್ಕೆ ಭೇಟಿ ನೀಡಲು ಭಯವಸುವ ಭಾರತೀಯರಿಗೆ ಇದು ಅನುಕೂಲವಾಗಲಿದೆ.
ನಮ ವಿದ್ಯಾರ್ಥಿಗಳು 2024ರ ಬೇಸಿಗೆಯಲ್ಲಿ ಈಗಾಗಲೇ ದಾಖಲೆ ಸಂಖ್ಯೆ ಅಮೇರಿಕಾಗೆ ತೆರಳಿದ್ದಾರೆ. ಎಲ್ಲಾ ಮೊದಲ ಬಾರಿಗೆ ವಿದ್ಯಾರ್ಥಿ ಅರ್ಜಿದಾರರು ಭಾರತದಾದ್ಯಂತ ನಮ ಐದು ಕಾನ್ಸುಲರ್‌ ವಿಭಾಗಗಳಲ್ಲಿ ಒಂದರಲ್ಲಿ ಅಪಾಯಿಂಟೆಂಟ್‌ ಪಡೆಯಲು ಸಾಧ್ಯವಾಯಿತು ಎಂದು ಅದು ತಿಳಿಸಿದೆ.

ಈ ಬೇಸಿಗೆಯ ನಮ ವಿದ್ಯಾರ್ಥಿ ವೀಸಾ ಋತುವಿನಲ್ಲಿ ದಾಖಲೆ ಸಂಖ್ಯೆಯ ಅರ್ಜಿ ಪ್ರಕ್ರಿಯೆಗೊಳಿಸುವುದನ್ನು ಮುಂದುವರಿಸಿದ್ದೇವೆ ಮತ್ತು ಮೊದಲ ಬಾರಿಯ ಎಲ್ಲಾ ವಿದ್ಯಾರ್ಥಿ ಅರ್ಜಿದಾರರು ಭಾರತದಾದ್ಯಂತದ ನಮ ಐದು ಕಾನ್ಸುಲರ್‌ ವಿಭಾಗಗಳ ಪೈಕಿ ಒಂದರಲ್ಲಿ ಸಂದರ್ಶನಕ್ಕೆ ಹಾಜರಗಾಲು ಸಾಧ್ಯವಾಗಿದೆ.

ನಾವು ಈಗ ಕುಟುಂಬಗಳನ್ನು ಒಟ್ಟುಗೂಡಿಸುವುದು, ವ್ಯವಹಾರಗಳನ್ನು ಸಂಪರ್ಕಿಸುವುದು ಮತ್ತು ಪ್ರವಾಸೋದ್ಯಮವನ್ನು ಸುಗಮಗೊಳಿಸುವತ್ತ 2024ರಲ್ಲಿ ಇಲ್ಲಿಯವರೆಗೆ 1.2 ದಶಲಕ್ಷಕ್ಕೂ ಹೆಚ್ಚು ಭಾರತೀಯರು ಅಮೆರಿಕಕ್ಕೆ ಪ್ರಯಾಣಿಸಿದ್ದಾರೆ. ಇದು 2023 ರ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 35ರಷ್ಟು ಹೆಚ್ಚಾಗಿದೆ.

ಅಮೆರಿಕ ಮಿಷನ್‌ ಪ್ರಕಾರ, ಕನಿಷ್ಠ ಆರು ಮಿಲಿಯನ್‌ ಭಾರತೀಯರು ಈಗಾಗಲೇ ಅಮೆರಿಕಕ್ಕೆ ಭೇಟಿ ನೀಡಲು ವಲಸೆಯೇತರ ವೀಸಾ ಹೊಂದಿದ್ದಾರೆ. ಅಲ್ಲದೇ ಪ್ರತಿದಿನವೂ ಸಾವಿರಾರು ಸಂಖ್ಯೆಯಲ್ಲಿ ಹೊಸ ವೀಸಾಗಳನ್ನು ನೀಡಲಾಗುತ್ತಿದೆ.ಅಮೆರಿಕ ಸೆನೆಟ್‌ ಸೆಪ್ಟೆಂಬರ್‌ 30 ಅನ್ನು ಯುಎಸ್‌‍-ಭಾರತ ಪಾಲುದಾರಿಕೆ ದಿನ ಎಂದು ಘೋಷಿಸಿದೆ.

ಉಭಯ ದೇಶಗಳು ಪರಸ್ಪರ ನೀಡಿದ ಕೊಡುಗೆ ಮತ್ತು ಭಾರತದೊಂದಿಗಿನ ಅಮೆರಿಕದ ಸಹಭಾಗಿತ್ವವು ಇತಿಹಾಸದಲ್ಲಿ ಯಾವುದೇ ಸಮಯಕ್ಕಿಂತ ಬಲವಾಗಿದೆ, ಹತ್ತಿರವಾಗಿದೆ ಮತ್ತು ಹೆಚ್ಚು ಕ್ರಿಯಾತಕವಾಗಿದೆ ಎಂದು ರಾಯಭಾರ ಕಚೇರಿ ಹೇಳಿದೆ.

RELATED ARTICLES

Latest News