Monday, May 20, 2024
Homeರಾಷ್ಟ್ರೀಯಜೈ ಶ್ರೀರಾಮ್ ಘೋಷಣೆ ಏಕತೆಯ ಸಂಕೇತ : ಜಾವೇದ್ ಅಖ್ತರ್

ಜೈ ಶ್ರೀರಾಮ್ ಘೋಷಣೆ ಏಕತೆಯ ಸಂಕೇತ : ಜಾವೇದ್ ಅಖ್ತರ್

ಮುಂಬೈ,ನ.11- ಧರ್ಮ ಮತ್ತು ರಾಜಕೀಯದ ಬಗ್ಗೆ ಬಹಿರಂಗ ಅಭಿಪ್ರಾಯಗಳಿಗೆ ಹೆಸರಾಗಿರುವ ಬಾಲಿವುಡ್ ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಜೈ ಶ್ರೀರಾಮ್ ಘೋಷಣೆ ಏಕತೆಗೆ ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಆಯೋಜಿಸಿದ್ದ ದೀಪೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಮ ಮತ್ತು ಸೀತೆ ಆದರ್ಶ ಸತಿ-ಪತಿಗಳಾಗಿದ್ದರು ಎಂದು ಬಣ್ಣಿಸಿದ್ದಾರೆ.

ಅನೇಕ ದೇವತೆಗಳಿದ್ದಾರೆ, ಆದರೆ ನಾವು ಆದರ್ಶ ಪತಿ ಮತ್ತು ಆದರ್ಶ ಪತ್ನಿಯ ಬಗ್ಗೆ ಮಾತನಾಡುವಾಗ, ರಾಮ ಮತ್ತು ಸೀತೆ ನೆನಪಿಗೆ ಬರುತ್ತಾರೆ. ಜೈ ಶ್ರೀರಾಮ್ ಘೋಷಣೆ ಪ್ರೀತಿ ಮತ್ತು ಏಕತೆಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅಖ್ತರ್ ಹೇಳಿದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-11-2023)

ಅವರು ಹಿಂದೂ ಧರ್ಮದ ಸಾಂಸ್ಕೃತಿಕ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಕ್ಷೀಣಿಸುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೆಲವರು ಯಾವಾಗಲೂ ಅಸಹಿಷ್ಣುತೆ ಹೊಂದಿರುತ್ತಾರೆ ಆದರೆ, ಹಿಂದೂಗಳು ಹಾಗಲ್ಲ, ಅವರ ವಿಶೇಷತೆ ಎಂದರೆ ಅವರು ಉದಾರ ಮತ್ತು ದೊಡ್ಡ ಹೃದಯ.

ಇದು ಹಿಂದೂ ಸಂಸ್ಕøತಿ, ಇದು ನಾಗರಿಕತೆ. ಇದು ನಮಗೆ ಪ್ರಜಾಸತ್ತಾತ್ಮಕ ಧೋರಣೆಗಳನ್ನು ಕಲಿಸಿದೆ. ಆದ್ದರಿಂದ ಪ್ರಜಾಪ್ರಭುತ್ವವಿದೆ. ಈ ದೇಶದಲ್ಲಿ ನಾವು ಸರಿ ಮತ್ತು ಎಲ್ಲರೂ ತಪ್ಪು ಎಂದು ಯೋಚಿಸುವುದು ಹಿಂದೂಗಳ ಕೆಲಸವಲ್ಲ ಎಂದಿದ್ದಾರೆ ಆಖ್ತರ್. ಭಗವಾನ್ ರಾಮ ಮತ್ತು ಸೀತೆ ಕೇವಲ ಹಿಂದೂ ದೇವರು ಮತ್ತು ದೇವತೆಗಳಲ್ಲ ಅವರು ಭಾರತದ ಸಾಂಸ್ಕೃತಿಕ ಪರಂಪರೆ ಎಂದು ಗೀತರಚನೆಕಾರರು ಸೇರಿಸಿದ್ದಾರೆ.

RELATED ARTICLES

Latest News