Tuesday, February 11, 2025
Homeರಾಜಕೀಯ | Politics'ಬ್ರ್ಯಾಂಡ್ ಬೆಂಗಳೂರು' ಎಂದಿದ್ದ ಗಿರಾಕಿ ಸಿಲಿಕಾನ್ ಸಿಟಿಯಲ್ಲಿ ದೋಣಿ ಸಾರಿಗೆ ಮಾಡ್ತಾರಾ..? : ಜೆಡಿಎಸ್‌‍ ಟೀಕೆ

‘ಬ್ರ್ಯಾಂಡ್ ಬೆಂಗಳೂರು’ ಎಂದಿದ್ದ ಗಿರಾಕಿ ಸಿಲಿಕಾನ್ ಸಿಟಿಯಲ್ಲಿ ದೋಣಿ ಸಾರಿಗೆ ಮಾಡ್ತಾರಾ..? : ಜೆಡಿಎಸ್‌‍ ಟೀಕೆ

JDS Attack on DK Shivakumar's Brand Bengaluru

ಬೆಂಗಳೂರು, ಅ.22-ಭಾರತದ ಸಿಲಿಕಾನ್‌ ವ್ಯಾಲಿ, ಉದ್ಯಾನನಗರಿಯಾಗಿದ್ದ ಬೆಂಗಳೂರಿನ ಕೆರೆಗಳನ್ನು ಒಂದಾದ ಮೇಲೆ ಒಂದರಂತೆ ನುಂಗಿದ ಪರಿಣಾಮ ಬೆಂಗಳೂರಿಗೆ ಬೆಂಗಳೂರೇ ಕೆರೆಯಾಗಿ ಬಿಟ್ಟಿದೆ ಎಂದು ಜೆಡಿಎಸ್‌‍ ಟೀಕಿಸಿದೆ.

ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌‍, ಕೆರೆಗಳ್ಳರ ಕೈಗೆ ಅಧಿಕಾರ ಸಿಕ್ಕಿದರೆ ಇನ್ನೇನಾದೀತು? ಮಳೆ ನೀರನ್ನು ಆಕಾಶಕ್ಕೆ ವಾಪಸ್‌‍ ಕಳಿಸುತ್ತೀರಾ? ಅಥವಾ ಬೆಂಗಳೂರು ರಸ್ತೆಗಳ ಮೇಲೆ ದೋಣಿ ಸಾರಿಗೆ ಮಾಡುತ್ತೀರಾ? ಉತ್ತರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಬೆಂಗಳೂರು ನಗರವನ್ನು ಬ್ರ್ಯಾಂಡ್‌ ಬೆಂಗಳೂರು ಮಾಡುವುದಾಗಿ ಹೇಳಿದ್ದರು. ನಮ ಹೆಮೆಯ ನಗರವನ್ನು ಇಟಲಿಯ ವೆನಿಸ್‌‍ ಮಾಡಿ ಕೃತಾರ್ಥರಾಗಿದ್ದಾರೆ ಎಂದು ಆರೋಪಿಸಿದೆ.

ವಿಶ್ವದರ್ಜೆಯ ಮೂಲಸೌಕರ್ಯ ಕಲ್ಪಿಸುವುದಾಗಿ ಸರ್ಕಾರ ಹೇಳಿತ್ತು. ನಿರಂತರ ಮಳೆಗೆ ಬೆಂಗಳೂರು ತೀವ್ರ ಸಂಕಷ್ಟಕ್ಕೆ ಸಿಲುಕಿ ನಲುಗುವಂತಾಗಿದೆ ಎಂದು ಟೀಕಿಸಿದೆ.

RELATED ARTICLES

Latest News