Sunday, July 7, 2024
Homeರಾಜ್ಯಜೆಡಿಎಸ್‌ಗೆ ಮತ್ತೊಂದು ಜಯ; ಮೈಸೂರಿನಲ್ಲಿ ಕಾಂಗ್ರೆಸ್‌ಗೆ ಮುಖಭಂಗ

ಜೆಡಿಎಸ್‌ಗೆ ಮತ್ತೊಂದು ಜಯ; ಮೈಸೂರಿನಲ್ಲಿ ಕಾಂಗ್ರೆಸ್‌ಗೆ ಮುಖಭಂಗ

ಬೆಂಗಳೂರು, ಜೂ.6- ವಿಧಾನ ಪರಿಷತ್ತಿನ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ವಿವೇಕಾನಂದ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ವಿವೇಕಾನಂದ ಅವರು ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.

ಲೋಕಸಭೆ ಚುನಾವಣೆಯ ಗೆಲುವಿನ ಸಂಭ್ರಮದಲ್ಲಿರುವ ಜೆಡಿಎಸ್‍ಗೆ ವಿವೇಕಾನಂದ ಅವರ ಗೆಲುವು ಮತ್ತಷ್ಟು ಖುಷಿ ತಂದರೆ, ಕಾಂಗ್ರೆಸ್‍ನ ಹೀನಾಯ ಸೋಲು ಪಕ್ಷಕ್ಕೆ ಶಾಕ್ ನೀಡಿದೆ. ಮೈಸೂರು-ಕೊಡಗು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರು ಸೋಲುಂಡ ಬೆನ್ನಲ್ಲೇ ಈಗ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಹೀನಾಯವಾಗಿ ಸೋಲನ್ನು ಅನುಭವಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀವ್ರ ಮುಖಭಂಗವಾದಂತಾಗಿದೆ. ಮುಖ್ಯಮಂತ್ರಿ ತವರಿನಲ್ಲಿ ಈ ಎರಡೂ ಚುನಾವಣೆಯಲ್ಲೂ ಪರಾಭವವಾಗಿರುವುದು ಗಮನಾರ್ಹ.

ವಾಲ್ಮೀಕಿ ಹಗರಣವನ್ನು ಗಂಭೀರವಾಗಿ ಪರಿಗಣಿಸಿದ ಇಡಿ

ಮತ ಎಣಿಕೆಯ ಆರಂಭದಿಂದಲ್ಲೂ ವಿವೇಕಾನಂದ ಅವರು ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಗೆಲುವಿನ ಖೋಟಾ ತಲುಪಿದ ಕೂಡಲೇ ಅವರ ಜಯ ಅ„ಕೃತವಾಗಿ ದಾಖಲಾಯಿತು. ಸತತವಾಗಿ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದ್ದ ಮರಿತಿಬ್ಬೇಗೌಡ ಅವರಿಗೆ ಈ ಸೋಲಿನಿಂದ ತೀವ್ರ ಮುಖಭಂಗವಾಗಿದೆ. ಮೊದಲ ಬಾರಿಗೆ ಸ್ಪರ್ಧಿಸಿದ್ದ ವಿವೇಕಾನಂದ ಅವರು ಮೂರುವರೆ ಸಾವಿರಕ್ಕೂ ಹೆಚ್ಚು ಬಹುಮತಗಳಿಂದ ಗೆಲುವು ಸಾಧಿಸಿದ್ದು ವಿಶೇಷವಾಗಿತ್ತು.

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರೇ ಚಲಾಯಿಸಿದ್ದ ಮತಗಳ ಪೈಕಿ ಏಳು ನೂರಕ್ಕೂ ಹೆಚ್ಚು ಮತಗಳು ಅಸಿಂಧುವಾಗಿರುವುದು ಗಮನಾರ್ಹವಾಗಿದೆ.

RELATED ARTICLES

Latest News