Friday, February 14, 2025
Homeರಾಜಕೀಯ | Politicsಜನ ಕಲ್ಯಾಣ ಸಮಾವೇಶ ಅಲ್ಲ, ಸ್ವಾರ್ಥ ಸಮಾವೇಶ : ಜೆಡಿಎಸ್‌‍ ವ್ಯಂಗ್ಯ

ಜನ ಕಲ್ಯಾಣ ಸಮಾವೇಶ ಅಲ್ಲ, ಸ್ವಾರ್ಥ ಸಮಾವೇಶ : ಜೆಡಿಎಸ್‌‍ ವ್ಯಂಗ್ಯ

JDS on Congress's Jana Kalyana Samavesha

ಹಾಸನ,ನ.8- ನಗರದಲ್ಲಿ ಕಾಂಗ್ರೆಸ್‌‍ ಪಕ್ಷ ಹಮ್ಮಿಕೊಂಡಿದ್ದು ಜನ ಕಲ್ಯಾಣ ಸಮಾವೇಶ ಅಲ್ಲ, ಸ್ವಾರ್ಥ ಸಮಾವೇಶ. ದೇವೇಗೌಡರ ಕುಟುಂಬವನ್ನು ಗುರಿಯಾಗಿಸಿಕೊಂಡು ಆಯೋಜಿಸಿದ್ದ ಕಾರ್ಯಕ್ರಮ ಎಂದು ಜೆಡಿಎಸ್‌‍ನ ಮಾಜಿ ಶಾಸಕ ಹೆಚ್‌.ಕೆ.ಕುಮಾರಸ್ವಾಮಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌‍ ಜನ ಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್‌‍ನ ನಾಯಕರನ್ನು ನಿಂಧಿಸುವ ಕೆಲಸ ಸಮಾವೇಶದ ಭಾಗವಾಗಿತ್ತು . ನಮ ಕಾರ್ಯಕರ್ತರನ್ನು ಆಮಿಷ ತೋರಿಸಿ ಸೆಳೆಯುವ ಕೆಲಸ ನಡೆಯುತ್ತಿದೆ. ಇದು ಜನಪ್ರತಿನಿಧಿ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ ನಾಯಕರನ್ನು ನಿಂದಿಸುವುದನ್ನು ಕಾಂಗ್ರೆಸ್‌‍ ನಾಯಕರು ನಿಲ್ಲಿಸದಿದ್ದರೆ ಜನರ ಸಹನೆಗೂ ಒಂದು ಮಿತಿ ಇರುತ್ತದೆ ಇನ್ನು ಮುಂದೆ ನಾವು ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜನಕಲ್ಯಾಣ ಸಮಾವೇಶ ಕಾಂಗ್ರೆಸ್‌‍ ಪಕ್ಷದ ಕಾರ್ಯಕ್ರಮವಾಗಿದೆ. ಇಂತಹ ಸಂದರ್ಭದಲ್ಲಿ ಡಿಸಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಸಮಾವೇಶದ ವೇದಿಕೆ ನಿರ್ಮಾಣ ಸಂದರ್ಭದಲ್ಲಿ ಸಚಿವರೊಂದಿಗೆ ಕಾಣಿಸಿಕೊಂಡಿರುವುದು ಕಾನೂನುಬಾಹಿರ ಎಂದು ಹೇಳಿದರು.

ಇಡೀ ರಾಜ್ಯದಲ್ಲಿ ಮೂರು ಉಪಚುನಾವಣೆ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಲ್ಲ ಸರ್ಕಾರದ ಪರ ಒಲವು ತೋರುವುದು ಎಲ್ಲಾ ಉಪಚುನಾವ ಣೆಗಳಲ್ಲಿಯೂ ಸಾಬೀತಾಗಿದೆ. ಈ ಮೂರು ಚುನಾವಣೆಗಳಲ್ಲಿ ಗೆದ್ದ ಮಾತ್ರಕ್ಕೆ ಕಾಂಗ್ರೆಸ್‌‍ ನವರು ಬೀಗುವುದು ಬೇಡ ಎಂದರು.

ಜನವರಿಯಲ್ಲಿ ಹಾಸನದಲ್ಲಿ ಸಮಾವೇಶ:
ಕೇಂದ್ರ ಸಚಿವರಾದ ಎಚ್‌ ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಬೃಹತ್‌ ಕಾರ್ಯಕ್ರಮ ಹಮಿಕೊಂಡಿದ್ದು. ಜನವರಿ ತಿಂಗಳಿನಲ್ಲಿ ಹಾಸನದಲ್ಲಿಯೂ ಬೃಹತ್‌ ಸಮಾವೇಶ ಆಯೋಜನೆ ಕುರಿತು ಚಿಂತಿಸಲಾಗಿದೆ . ಸಮಾವೇಶವನ್ನು ಜೆಡಿಎಸ್‌‍ ವತಿಯಿಂದಲೂ ಅಥವಾ ಎನ್‌.ಡಿ.ಎ ಮೈತ್ರಿ ಯೊಂದಿಗೆ ಆಯೋಜನೆ ಕುರಿತು ಎರಡು ಪಕ್ಷದ ನಾಯಕರು ಚರ್ಚಿಸಿ ಅಂತಿಮಗೊಳಿಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಶಾಸಕ ಸಿ.ಎನ್‌ ಬಾಲಕೃಷ್ಣ ಅವರು ಮಾತನಾಡಿ, ಅಂಬೇಡ್ಕರ್‌ ನಿಗಮ ಎಸ್‌‍ ಸಿಪಿ,ಟಿಎಸ್ಪಿ ಸೇರಿದಂತೆ ನಾನಾ ಯೋಜನೆಗಳ ಹಣವನ್ನು ಸಮರ್ಪಕವಾಗಿ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಕೇವಲ ಹೆಚ್‌ ಡಿ ದೇವೇಗೌಡ ಕುಟುಂಬದ ವಿರುದ್ಧ ಮಾತನಾಡಲು ಸಮಾವೇಶವನ್ನು ಬಳಸಿಕೊಳ್ಳಲಾಗಿದೆ ಎಂದು ದೂರಿದರು.

ದೇವೇಗೌಡರು ತಮ ರಾಜಕೀಯ ಜೀವನದಲ್ಲಿ ಯಾವುದೇ ನಾಯಕರನ್ನು ಹಿಮೆಟ್ಟಿಸುವ ಕೆಲಸ ಮಾಡಿಲ್ಲ ಜಾತ್ಯತೀತ ನಿಲುವಿನೊಂದಿಗೆ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಅವರ ವಿರುದ್ಧ ಮಾತನಾಡುವುದು ಕಾಂಗ್ರೆಸ್‌‍ ನಾಯಕರಿಗೆ ಶೋಭೆ ತರುವುದಿಲ್ಲ ಎಂದರು.

ಕುಮಾರಸ್ವಾಮಿ ಅವರು ಬಿಜೆಪಿ ಮೈತ್ರಿಯೊಂದಿಗೆ ಸಂಸದರಾಗಿ, ಉತ್ತಮ ಕೆಲಸ ಮಾಡುತ್ತಿದ್ದಾರೆ.ರಾಜ್ಯದಲ್ಲಿನ ರೋಗಗ್ರಸ್ತ ಕಾರ್ಖಾನೆಗಳಿಗೆ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಚ್‌ಎಂಟಿ ಸೇರಿದಂತೆ ಆಂಧ್ರ ರಾಜ್ಯದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಉದ್ಯೋಗ ಸೃಷ್ಟಿಗೆ ನಾನಾ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದರು .

ಜೆಡಿಎಸ್‌‍ ಜಿಲ್ಲಾ ಘಟಕದ ಅಧ್ಯಕ್ಷ ಕೆ ಎಸ್‌‍ ಲಿಂಗೇಶ್‌ ಮಾತನಾಡಿ, ಕಾಂಗ್ರೆಸ್‌‍ ಪಕ್ಷ ಹಿಂದುಳಿದವರ ಬಲಪಡಿಸುತ್ತಿರುವುದಾಗಿ ಜನ ಕಲ್ಯಾಣ ಸಮಾವೇಶದಲ್ಲಿ ಹೇಳುತ್ತಾರೆ ಆದರೆ ಯಾವುದೇ ಹಿಂದುಳಿದ ವರ್ಗದವರಿಗೆ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ. 1.05 ಲಕ್ಷ ಕೋಟಿ ಸಾಲ ಮಾಡುವುದರೊಂದಿಗೆ ಜನರ ಮೇಲೆ ಸಾಲದ ಹೊರೆಯನ್ನು ಹೊರಿಸಿದ್ದಾರೆ ಎಂದು ದೂರಿದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸ್ವರೂಪ್‌ ಪ್ರಕಾಶ್‌, ಜೆಡಿಎಸ್‌‍ ತಾಲೂಕು ಘಟಕದ ಅಧ್ಯಕ್ಷ ಎಸ್‌‍. ದ್ಯಾವೇಗೌಡ, ಪಕ್ಷದ ವಕ್ತಾರ ಹೊಂಗೆರೆ ರಘು ಇದ್ದರು.

RELATED ARTICLES

Latest News