Thursday, December 12, 2024
Homeರಾಷ್ಟ್ರೀಯ | Nationalಜೆಇಇ ವಿದ್ಯಾರ್ಥಿ ನಿಗೂಢ ಸಾವು

ಜೆಇಇ ವಿದ್ಯಾರ್ಥಿ ನಿಗೂಢ ಸಾವು

ಜೈಪುರ,ನ.4- ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬಿಹಾರ ಮೂಲದ ವಿದ್ಯಾರ್ಥಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ.
ಕಳೆದ ಒಂದು ವರ್ಷದಿಂದ ತನ್ನ ತಾಯಿಯೊಂದಿಗೆ ರಾಜಸ್ಥಾನದ ಕೋಟಾದ ತಲವಂಡಿ ಪ್ರದೇಶದಲ್ಲಿ ಬಾಡಿಗೆಗೆ ವಾಸವಾಗಿದ್ದನು.ಪದವಿಪೂರ್ವ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಐಐಟಿ-ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ತಯಾರಿ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದು ಆತಹತ್ಯೆಯೇ ಅಥವಾ ಸಹಜ ಸಾವೇ ಎಂಬುದು ಇನ್ನೂ ಖಚಿತವಾಗಿಲ್ಲ. ಅವರು ನಿನ್ನೆ ರಾತ್ರಿ ಊಟದ ನಂತರ ತಮ ಕೋಣೆಗೆ ಹೋಗಿದ್ದರು. ಆದಾಗ್ಯೂ, ಸ್ವಲ್ಪ ಸಮಯದ ನಂತರ ಅಸ್ವಸ್ಥಗೊಂಡರು ತಕ್ಷಣ ಆತನ ತಾಯಿ ಅವನನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವನು ಸತ್ತಿದ್ದಾನೆ ಎಂದು ಘೋಷಿಸಲಾಯಿತು ಎಂದು ಕೋಟಾ ಉಪ ಪೊಲೀಸ್‌‍ ವರಿಷ್ಠಾಧಿಕಾರಿ (ಡಿಎಸ್ಪಿ) ಯೋಗೇಶ್‌ ಶರ್ಮಾ ಹೇಳಿದರು.

ಪೊಲೀಸರ ಪ್ರಕಾರ, ವಿದ್ಯಾರ್ಥಿ ಬಿಹಾರ ಮೂಲದವನಾಗಿದ್ದು, ಕಳೆದ ಒಂದು ವರ್ಷದಿಂದ ತನ್ನ ತಾಯಿಯೊಂದಿಗೆ ಕೋಟಾದ ತಲವಂಡಿ ಪ್ರದೇಶದಲ್ಲಿ ಬಾಡಿಗೆಗೆ ವಾಸವಾಗಿದ್ದನು.

RELATED ARTICLES

Latest News