ಬೊಕಾರೊ, ಜು. 16 (ಪಿಟಿಐ) ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಾವೋವಾದಿಗಳು ಮತ್ತು ಒಬ್ಬ ಸಿಆರ್‌ಪಿಎಫ್ ಜವಾನ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಮಿಯಾ ಪೊಲೀಸ್ ಠಾಣೆ ಪ್ರದೇಶದ ಬಿರ್ಹೋರ್ಡೆರಾ ಅರಣ್ಯದಲ್ಲಿ ಬೆಳಿಗ್ಗೆ 5.30 ರ ಸುಮಾರಿಗೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಅವರು ಹೇಳಿದರು.
ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಇಬ್ಬರು ಮಾವೋವಾದಿಗಳನ್ನು ಹೊಡೆದುರುಳಿಸಿದವು. ಸಿಪಿಆರ್‌ಎಫ್‌ನ ಕೋಬ್ರಾ ಬೆಟಾಲಿಯನ್‌ನ ಒಬ್ಬ ಜವಾನ್ ಕೂಡ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಐಜಿ (ಬೊಕಾರೊ ವಲಯ) ಕ್ರಾಂತಿ ಕುಮಾರ್ ಗಡಿದೇಸಿ ಪಿಟಿಐಗೆ ತಿಳಿಸಿದ್ದಾರೆ.
ಎನ್‌ಕೌಂಟರ್ ನಂತರ ಆ ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಬೊಕಾರೊದ ಎಸ್‌ಪಿ ಹರ್ವಿಂದರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
- ಮತಪತ್ರ ಬಳಕೆ ಸ್ವಾಗತಾರ್ಹ : ಖರ್ಗೆ
- ಅಮೆರಿಕ ರೈಲಿನಲ್ಲಿ ಉಕ್ರೇನ್ ಮಹಿಳೆ ಹತ್ಯೆ
- ಬ್ಯಾಲೆಟ್ ಪೇಪರ್ ವಿರುದ್ಧ ಕಾನೂನು ಸಮರ : ವಿಜಯೇಂದ್ರ
- ತಲೆ ಬುರುಡೆ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾದ ಎಸ್ಐಟಿ ಅಧಿಕಾರಿಗಳು
- ರಾಹುಲ್ ಗಾಂಧಿ ಬಾಂಬ್ ಠುಸ್