Thursday, September 19, 2024
Homeರಾಷ್ಟ್ರೀಯ | Nationalಅಕ್ರಮ ಹಣ ವರ್ಗಾವಣೆ ಪ್ರಕರಣ : ಮಾಜಿ ಸಿಎಂ ಹೇಮಂತ್‌ ಸೊರೆನ್‌ಗೆ ಜಾಮೀನು ಮಂಜೂರು

ಅಕ್ರಮ ಹಣ ವರ್ಗಾವಣೆ ಪ್ರಕರಣ : ಮಾಜಿ ಸಿಎಂ ಹೇಮಂತ್‌ ಸೊರೆನ್‌ಗೆ ಜಾಮೀನು ಮಂಜೂರು

ರಾಂಚಿ,ಜೂ.28- ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ಗೆ ಜಾರ್ಖಂಡ್‌ ಹೈಕೋರ್ಟ್‌ ಇಂದು ಜಾಮೀನು ಮಂಜೂರು ಮಾಡಿದೆ.

ಸೊರೆನ್‌ ಅವರ ಜಾಮೀನು ಅರ್ಜಿಯ ತೀರ್ಪನ್ನು ಹೈಕೋರ್ಟ್‌ ಜೂನ್‌ 13ರಂದು ಕಾಯ್ದಿರಿಸಿತ್ತು.
ಸೋರೆನ್‌ಗೆ ಜಾಮೀನು ಮಂಜೂರು ಮಾಡಲಾಗಿದೆ. ನ್ಯಾಯಾಲಯವು ಮೇಲ್ನೋಟಕ್ಕೆ ಅವರು ಅಪರಾಧದಲ್ಲಿ ತಪ್ಪಿತಸ್ಥರಲ್ಲ ಮತ್ತು ಜಾಮೀನಿನ ಮೇಲೆ ಅರ್ಜಿದಾರರು ಅಪರಾಧ ಮಾಡುವ ಸಾಧ್ಯತೆಯಿಲ್ಲ ಎಂದು ಸೋರೆನ್‌ ಅವರ ಹಿರಿಯ ವಕೀಲ ಅರುಣಾಭ್‌ ಚೌಧರಿ ಪಿಟಿಐಗೆ ತಿಳಿಸಿದರು.

ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯನಿರ್ವಾಹಕ ಅಧ್ಯಕ್ಷ ಸೋರೆನ್‌ ಅವರನ್ನು ಜನವರಿ 31 ರಂದು ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಬಂಧಿಸಿತ್ತು.

48 ವರ್ಷದ ರಾಜಕಾರಣಿ ಪ್ರಸ್ತುತ ಬಿಸಾರ್‌ ಮುಂಡಾ ಜೈಲಿನಲ್ಲಿದ್ದಾರೆ. ವಿಚಾರಣೆ ವೇಳೆ ಇಡಿ ಪರ ವಕೀಲ ಎಸ್‌‍.ವಿ.ರಾಜು ವಾದ ಮಂಡಿಸಿ, ಸೊರೇನ್‌ ಜಾಮೀನಿನ ಮೇಲೆ ಬಿಡುಗಡೆಯಾದರೆ ಇದೇ ರೀತಿಯ ಅಪರಾಧ ಮಾಡುತ್ತಾರೆ ಎಂದು ವಾದಿಸಿದ್ದರು. ಆದರೆ ನ್ಯಾಯಾಲಯ ಇದನ್ನು ಮಾನ್ಯ ಮಾಡಿಲ್ಲ.

RELATED ARTICLES

Latest News