ಜಾರ್ಖಂಡ್‍ನಲ್ಲಿ ಯಾವುದೇ ಕ್ಷಣ ಬಾಂಬ್ ಸ್ಪೋಟಿಸಬಹುದು : ರಮೇಶ್ ಬೈಸ್

ರಾಂಚಿ,ಅ.28- ಜಾರ್ಖಾಂಡ್‍ನಲ್ಲಿ ಯಾವ ಸಂದರ್ಭದಲ್ಲಿ ಬೇಕಾದರೂ ಪರಮಾಣು ಬಾಂಬ್ ಸ್ಪೋಟಿಸಬಹುದು ಎಂಬ ರಾಜ್ಯಪಾಲ ರಮೇಶ್ ಬೈಸ್ ಅವರ ಹೇಳಿಕೆ ರಾಜಕೀಯ ಸಂಚಲನ ಸೃಷ್ಟಿಸಿದೆ. ಮುಖ್ಯಮಂತ್ರಿ ಹೇಮಂತ್ ಸೂರೆನ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿರುವ ಈ ಹೇಳಿಕೆ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ರಾಯ್‍ಪುರದಲ್ಲಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಜ್ಯಪಾಲರು, ಸಿಎಂ ಸೂರೆನ್ ಪ್ರಕರಣಕ್ಕೆ ಸಂಬಂಧಿದಂತೆ ಚುನಾವಣಾ ಆಯೋಗದಿಂದ ಎರಡನೇ ಅಭಿಪ್ರಾಯ ಕೇಳಿರುವುದಾಗಿ ತಿಳಿಸಿದ್ದಾರೆ. ಆಯೋಗದ ಅಭಿಪ್ರಾಯ ಬಂದ ನಂತರ ಸಂವಿಧಾನಬದ್ಧ ಹಕ್ಕುಗಳ ಪ್ರಕಾರ ಯಾವ ನಿರ್ಧಾರ […]
ಅನರ್ಹತೆಯ ವದಂತಿ ನಡುವೆ ಶಾಸಕರ ಜೊತೆ ಸರಣಿ ಸಭೆ ನಡೆಸಿದ ಜಾರ್ಖಂಡ್ ಸಿಎಂ
ರಾಂಚಿ,ಆ.27- ಅನರ್ಹತೆಯ ವದಂತಿಗಳ ನಡುವೆ ಜಾರ್ಖಂಡ್‍ನ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಮ್ಮ ಪಕ್ಷದ ಶಾಸಕರ ಜೊತೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಕಲ್ಲಿದ್ದಲ ಗಣಿ ಹಗರಣಕ್ಕೆ ಸಂಬಂಧಪಟ್ಟಂತೆ 2021ರ ಫೆಬ್ರವರಿಯಲ್ಲಿ ಬಿಜೆಪಿ ಹೇಮಂತ್ ಸೊರೇನ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿತ್ತು. ಗಣಿ ಭೋಗ್ಯ ನೀಡುವಲ್ಲಿ ಅಕ್ರಮಗಳು ನಡೆದಿವೆ. ಗಣಿ ಖಾತೆ ಹೊಂದಿರುವ ಹೇಮಂತ್ ಸೊರೇನ್ ಅವರನ್ನು ಜನ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 9 ಎಯಡಿ ಅನರ್ಹಗೊಳಿಸಬೇಕೆಂದು ಮನವಿ ಮಾಡಲಾಗಿತ್ತು. ಬಿಜೆಪಿ ದೂರನ್ನು ರಾಜ್ಯಪಾಲರು ಚುನಾವಣಾ ಆಯೋಗಕ್ಕೆ ರವಾನಿಸಿದ್ದರು. ಆಯೋಗ […]