Thursday, May 16, 2024
Homeರಾಷ್ಟ್ರೀಯಹೇಮಂತ್‌ ಸೊರೆನ್‌ ಜಾಮೀನು ಅರ್ಜಿ ಕುರಿತು ಇಡಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಹೇಮಂತ್‌ ಸೊರೆನ್‌ ಜಾಮೀನು ಅರ್ಜಿ ಕುರಿತು ಇಡಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ನವದೆಹಲಿ,ಏ.29- ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರ ಮಧ್ಯಂತರ ಜಾಮೀನು ಅರ್ಜಿಯ ಕುರಿತು ಇಂದು ಸುಪ್ರೆಂಕೋರ್ಟ್‌ ಜಾರಿ ನಿರ್ದೇಶನಾಲಯ(ಇಡಿ)ದಿಂದ ಪ್ರತಿಕ್ರಿಯೆ ಕೇಳಿದೆ. ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತಾ ಅವರ ಪೀಠವು ಇಡಿಗೆ ನೋಟಿಸ್‌ ಜಾರಿಗೊಳಿಸಿ ಮೇ 6 ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಪ್ರಕರಣದಲ್ಲಿ ತನ್ನ ಬಂಧನವನ್ನು ಪ್ರಶ್ನಿಸಿ ಸೋರೆನ್‌ ಸಲ್ಲಿಸಿರುವ ಜಾಮೀನು ಅರ್ಜಿಯ ಕುರಿತು ಜಾರ್ಖಂಡ್‌ ಹೈಕೋರ್ಟ್‌ ತನ್ನ ತೀರ್ಪನ್ನು ನೀಡಬಹುದೆಂದು ದ್ವಿಸದಸ್ಯ ಪೀಠ ಹೇಳಿದೆ.ಸೊರೆನ್‌ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಮತ್ತು ಅರುಣಾಭ್‌ ಚೌಧರಿ ಅವರು ಈ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಬಯಸಿದ್ದಾರೆ. ಪ್ರಕರಣದಲ್ಲಿ ತನ್ನ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಉಚ್ಚ ನ್ಯಾಯಾಲಯವು ಪ್ರಕಟಿಸುತ್ತಿಲ್ಲ ಎಂದು ಸೋರೆನ್‌ ಏಪ್ರಿಲ್‌ 24 ರಂದು ಸುಪ್ರೆಂಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ಸೋರೆನ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಜನವರಿ 31ರಂದು ಬಂಸಲಾಯಿತು ಮತ್ತು ರಾಜ್ಯ ಸಾರಿಗೆ ಸಚಿವ ಚಂಪೈ ಸೊರೆನ್‌ ಅವರನ್ನು ಅವರ ಉತ್ತರಾಧಿಕಾರಿ ಎಂದು ಹೆಸರಿಸಲಾಯಿತು.

ಸೋರೆನ್‌ ವಿರುದ್ಧದ ತನಿಖೆಯು ರಾಂಚಿಯ 8.86 ಎಕರೆ ಭೂಮಿಗೆ ಸಂಬಂಸಿದೆ, ಅವರು ಅಕ್ರಮವಾಗಿ ಭೂಮಿಯನ್ನು ಸ್ವೕಾಧಿನಪಡಿಸಿ ಕೊಂಡಿದ್ದಾರೆ ಎಂದು ಇಡಿ ಆರೋಪಿಸಿದೆ.ಮನಿ ಲಾಂಡರಿಂಗ್‌ ತನಿಖೆಯು ಜಾರ್ಖಂಡ್‌ ಪೊಲೀಸರು ರಾಜ್ಯ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಹಲವಾರು ಜನರ ವಿರುದ್ಧ ಭೂ ಹಗರಣ ಪ್ರಕರಣಗಳಲ್ಲಿ ದಾಖಲಿಸಿದ ಬಹು ಎಫ್‌ಐಆರ್‌ಗಳಿಂದ ಹುಟ್ಟಿಕೊಂಡಿದೆ.

ನಕಲಿ ಮಾರಾಟಗಾರರು ಮತ್ತು ಖರೀದಿದಾರರಿಗೆ ನಕಲಿ/ಬೋಗಸ್‌ ದಾಖಲೆಗಳ ನೆಪದಲ್ಲಿ ಕೋಟಿಗಟ್ಟಲೆ ಮೌಲ್ಯದ ಭೂಮಿಯನ್ನು ಸ್ವೕಾನಪಡಿಸಿ ಕೊಳ್ಳಲು ಅಕೃತ ದಾಖಲೆಗಳನ್ನು ಕುಶಲತೆ ಯಿಂದ ಸೃಷ್ಟಿಸಿ ನಡೆಸಿರುವ ಅಕ್ರಮಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ.

RELATED ARTICLES

Latest News