Thursday, December 12, 2024
Homeಕ್ರೀಡಾ ಸುದ್ದಿ | Sportsವಿರಾಟ್‌ ಕೊಹ್ಲಿಯ ಸ್ಟ್ರೈಕ್‌ರೇಟ್‌ ಪ್ರಶ್ನಿಸಬೇಡಿ : ಇರ್ಫಾನ್‌ಪಠಾಣ್‌

ವಿರಾಟ್‌ ಕೊಹ್ಲಿಯ ಸ್ಟ್ರೈಕ್‌ರೇಟ್‌ ಪ್ರಶ್ನಿಸಬೇಡಿ : ಇರ್ಫಾನ್‌ಪಠಾಣ್‌

ಬೆಂಗಳೂರು, ಏ.29- ಟೀಮ್‌ ಇಂಡಿಯಾದ ಕ್ಲಾಸ್‌ ಆಟಗಾರ ವಿರಾಟ್‌ ಕೊಹ್ಲಿ ಅವರು ವಿಶ್ವಕಪ್‌ ಟೂರ್ನಿಯಲ್ಲಿ ಆಡುವಂತಹ ದೊಡ್ಡ ಆಟಗಾರನಾಗಿದ್ದು ಅವರ ಸೆ್ಟ್ರೖಕ್‌ ರೇಟ್‌ ಪ್ರಶ್ನಿಸುವ ಅಗತ್ಯವಿಲ್ಲ ಎಂದು ವಿಶ್ವಕಪ್‌ ವಿಜೇತ ಆಟಗಾರ ಇರ್ಫಾನ್‌ಪಠಾಣ್‌ ಹೇಳಿದ್ದಾರೆ.

2024ರ ಇಂಡಿಯನ್‌ ಪ್ರೀಮಿಯರ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆರಂಭಿಕ ಆಟಗಾರನಾಗಿ ಆಡುತ್ತಿರುವ ವಿರಾಟ್‌ ಕೊಹ್ಲಿ ಅವರು ರನ್‌ಗಳ ಹೊಳೆ ಹರಿಸಿ ಆರೇಂಜ್‌ ಕ್ಯಾಪ್‌ ಅನ್ನು ಮುಡಿಗೇರಿಸಿಕೊಂಡಿದ್ದರೂ ಕೊಹ್ಲಿ ಅವರ ಸ್ಟ್ರೈಕ್‌ ರೇಟ್‌ ಅನ್ನು ಹಲವು ಕ್ರಿಕೆಟ್‌ ಪಂಡಿತರು ಟೀಕಿಸಿದ್ದಾರೆ. ಇದರ ವಿರುದ್ಧ ಮಾಜಿ ಆಲ್‌ ರೌಂಡರ್‌ ಹಾಗೂ ಖ್ಯಾತ ಕ್ರಿಕೆಟ್‌ ವಿಶ್ಲೇಷಕ ಇರ್ಫಾನ್‌ ಪಠಾಣ್‌ ಧ್ವನಿ ಎತ್ತಿದ್ದಾರೆ.

ಸ್ಟಾರ್‌ ಸ್ಪೋರ್ಟ್‌್ಸ ಜೊತೆಗೆ ವಿರಾಟ್‌ ಕೊಹ್ಲಿ ಅವರ ನಿಧಾನಗತಿಯ ಆಟದ ಬಗ್ಗೆ ಪ್ರಸ್ತಾಪಿಸಿರುವ ಇರ್ಫಾನ್‌ ಪಠಾಣ್‌, ` ನೀವು ವಿರಾಟ್‌ ಕೊಹ್ಲಿ ಅವರನ್ನೇ ಗುರಿಯಾಗಿಟ್ಟುಕೊಂಡು ಮಾತನಾಡುವುದಾದರೆ ಅವರು ತಮ ಬ್ಯಾಟ್‌ನಿಂದ ವಿಶ್ವಕ್ಕೆ ಮತ್ತೊಮೆ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಆತ ಯಾವ ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ ಎಂಬುದು ಸಂಗತಿಯೇ ಆಗುವುದಿಲ್ಲ.

ಆತನಿಗೆ ತನ್ನ ವೈಯಕ್ತಿಕ ದಾಖಲೆಗಿಂತ ತಂಡದ ಗೆಲುವು ಅತಿಮುಖ್ಯವಾಗಿರುತ್ತದೆ. ಅದಕ್ಕಾಗಿ ಅವರು ನಿಧಾನಗತಿಯ ಆಟಕ್ಕೆ ಮುಂದಾದಾಗ ಸಹಜವಾಗಿಯೇ ಆವರ ಸ್ಟ್ರೈಕ್‌ರೇಟ್‌ ಕುಸಿದಿರುತ್ತದೆ. ವಿರಾಟ್‌ ಕೊಹ್ಲಿ ಅವರು ನಿಜಕ್ಕೂ ಸಂದರ್ಭಕ್ಕೆ ತಕ್ಕಂತೆ ಆಡುವ ಆಟಗಾರರಾಗಿದ್ದಾರೆ’ ಎಂದು ಇರ್ಫಾನ್‌ ಪಠಾಣ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

`ಇದು ವಿರಾಟ್‌ ಕೊಹ್ಲಿ ಅಲ್ಲದೆ ಆರ್‌ಸಿಬಿ ತಂಡಕ್ಕೂ ಶುಭ ಸುದ್ದಿ ಆಗಿದೆ. ಆದರೆ ಎಲ್ಲದಕ್ಕೂ ಮುಖ್ಯವಾಗಿ ಕೊಹ್ಲಿ ಗುಜರಾತ್‌ ಟೈಟನ್ಸ್ ಪಂದ್ಯದಲ್ಲಿ ಸ್ಟ್ರೆಕ್‌ರೇಟ್‌ ಕಂಡುಕೊಂಡಿರುವುದು ಟೀಮ್‌ ಇಂಡಿಯಾಗೆ ನಿಜಕ್ಕೂ ಉತ್ತಮವಾಗಿದೆ. ನೀವು ಆತನ ಸ್ಟ್ರೈಕ್‌ರೇಟ್‌ ಹಾಗೂ ಸರಾಸರಿಯನ್ನು ಸ್ವಲ್ಪ ಗಮನಿಸಿ, ಆತ ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ 500 ರನ್‌ ಗಳಿಸುವ ಮೂಲಕ ಉತ್ತಮ ಫಾರ್ಮ್‌ನಲ್ಲಿದ್ದಾರೆ’ ಎಂದು ಪಠಾಣ್‌ ಹೇಳಿದ್ದಾರೆ.

`ವಿರಾಟ್‌ ಕೊಹ್ಲಿ ವಿಚಾರದಲ್ಲಿ ಸ್ಟ್ರೈಕ್‌ರೇಟ್‌ ಏಕೆ ಮುಂಚೂಣಿಗೆ ಬರುತ್ತದೆ ಎಂಬುದು ನನಗೆ ತಿಳಿದಿಲ್ಲ. ಇದು ನಿಜಕ್ಕೂ ನನಗೆ ಬೇಸರ ತರಿಸುತ್ತದೆ. ಪಂದ್ಯವನ್ನು ಗೆದ್ದುಕೊಡುವ ಸಾಮರ್ಥ್ಯ ಹೊಂದಿರುವ ವಿರಾಟ್‌ ಕೊಹ್ಲಿ ಬಳಿ ಸ್ಟ್ರೈಕ್‌ರೇಟ್‌ ಪ್ರಶ್ನಿಸಬೇಡಿ, ಇಂದಿನ ಪಂದ್ಯದಲ್ಲಿ ಅವರು ಯಾವ ರೀತಿಯ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ಗಮನಿಸಿ. ಪಂದ್ಯದಲ್ಲಿ ನಿಧಾನಗತಿಯ ಪ್ರದರ್ಶನ ತೋರಿದರೂ, ಸ್ವೀಪ್‌ ಶಾಟ್ಸ್ ಗಳನ್ನು ತುಂಬಾ ಚೆನ್ನಾಗಿ ಆಡಿದ್ದಾರೆ. ಇದೇ ಅವರ ಯಶಸ್ಸಿನ ಗುಟ್ಟಾಗಿದೆ’ ಎಂದು ಇರ್ಫಾನ್‌ ಪಠಾಣ್‌ ತಿಳಿಸಿದ್ದಾರೆ.

RELATED ARTICLES

Latest News