Thursday, May 16, 2024
Homeಕ್ರೀಡಾ ಸುದ್ದಿಆರ್‌.ಅಶ್ವಿನ್‌ ಐಪಿಎಲ್‌ ಜೀವನ ಅಂತ್ಯ..?

ಆರ್‌.ಅಶ್ವಿನ್‌ ಐಪಿಎಲ್‌ ಜೀವನ ಅಂತ್ಯ..?

ಬೆಂಗಳೂರು, ಏ. 29- ಹದಿನೇಳನೇ ಆವೃತ್ತಿಯ ಐಷಾರಾಮಿ ಟಿ20 ಲೀಗ್‌ನಲ್ಲಿ ತಮ ನೈಜ ಪ್ರದರ್ಶನವನ್ನು ಪ್ರದಶಿಸುವಲ್ಲಿ ಎಡವಿರುವ ರಾಜಸ್ಥಾನ್‌ ರಾಯಲ್ಸ್ ಅನುಭವಿ ಸ್ಪಿನ್ನರ್‌ ರವಿಚಂದ್ರನ್‌ ಅವರು 2025ರ ಐಪಿಎಲ್‌ ಟೂರ್ನಿಯಲ್ಲಿ ಹರಾಜಾಗದೆ ಉಳಿಯುವ ಸಾಧ್ಯತೆಗಳು ಹೆಚ್ಚಾಗಿದೆ, ಹೀಗಾದರೆ ಅವರ ಐಪಿಎಲ್‌ ವೃತ್ತಿ ಜೀವನವೂ ಬಹುತೇಕ ಅಂತ್ಯವಾಗಲಿದೆ ಎಂದು ಟೀಮ್‌ ಇಂಡಿಯಾದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್‌ ಭವಿಷ್ಯ ನುಡಿದಿದ್ದಾರೆ.

2024ರ ಐಪಿಎಲ್‌ ಟೂರ್ನಿಯಲ್ಲಿ ಆರ್‌. ಅಶ್ವಿನ್‌ ಆಡಿರುವ 8 ಪಂದ್ಯಗಳಿಂದ ಕೇವಲ 2 ವಿಕೆಟ್‌ಗಳು ಪಡೆದಿರುವುದಲ್ಲದೇ ಆನ್‌ಪೇಲ್‌್ಡ ಆಟಗಾರರ ಎದುರು ಕೂಡ ದುಬಾರಿ ಬೌಲಿಂಗ್‌ ಪ್ರದರ್ಶಿಸಿದ್ದಾರೆ. ಆದರೂ ಇವರ ಮೇಲೆ ನಂಬಿಕೆ ಇಟ್ಟು ಪ್ಲೇಯಿಂಗ್‌ 11ನಲ್ಲಿ ಸ್ಥಾನ ನೀಡಿರುವ ಜೈಪುರ ಫ್ರಾಂಚೈಸಿಯ ನಂಬಿಕೆ ಉಳಿಸಿಕೊಳ್ಳುವಲ್ಲಿ ಅಶ್ವಿನ್‌ ಎಡವಿದ್ದಾರೆ. ಈ ಕುರಿತು ನಜಾಫ್‌ಗಢದ ಸಚಿನ್‌ ಖ್ಯಾತಿಯ ವೀರೇಂದ್ರ ಸೆಹ್ವಾಗ್‌ ತಮ ಮನದಾಳದ ಮಾತುಗಳನ್ನಾಡಿದ್ದಾರೆ.

`ಈ ಹಿಂದೆ ಕೆಎಲ್‌ ರಾಹುಲ್‌ ಅವರು ರನ್‌ಗಳನ್ನು ಗಳಿಸುತ್ತಿದ್ದರೆ, ಸೆ್ಟ್ರೖಕ್‌ ರೇಟ್‌ ವಿಚಾರವೇ ಬರುವುದಿಲ್ಲ ಎಂದು ಹೇಳಿದ್ದರು. ಅದೇ ರೀತಿ ರವಿಚಂದ್ರನ್‌ ಅಶ್ವಿನ್‌ ಅವರು ಹೆಚ್ಚು ರನ್‌ ಬಿಟ್ಟುಕೊಟ್ಟು ಅದಕ್ಕೆ ತಕ್ಕಂತೆ ವಿಕೆಟ್‌ ಪಡೆದಿದ್ದರೆ ಈ ವಿಚಾರವೇ ಬರುತ್ತಿರಲಿಲ್ಲ. ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿನ ಅವರ ಅಂಕಿ ಅಂಶಗಳನ್ನು ಗಮನಿಸಿದರೆ ಅವರು ಮುಂದಿನ ವರ್ಷದ ಐಪಿಎಲ್‌ ಹರಾಜಿನಲ್ಲಿ ಆಯ್ಕೆ ಆಗದೆ ಇರಬಹುದು.

ಪಂದ್ಯದಲ್ಲಿ ಒಬ್ಬ ಬೌಲರ್‌ 4 ಓವರ್‌ಗಳಲ್ಲಿ 25- 30 ರನ್‌ಗಳನ್ನು ಮಾತ್ರ ನೀಡಬೇಕೆಂದು ತಂಡದ ಮಾಲೀಕರು ಬಯಸುತ್ತಾರೆ , ಅದೇ ರೀತಿ ಬೌಲರ್‌ ಕೂಡ ಹೆಚ್ಚಿನ ವಿಕೆಟ್‌ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುತ್ತಾನೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಾರೆ? ನೀವು ಎರಡು , ಮೂರು ಪಂದ್ಯಗಳಲ್ಲಿ ಹೇಳಿಕೊಳ್ಳುವತ್ತ ಪ್ರದರ್ಶನ ನೀಡದಿದ್ದಾಗ ನಿಮ್ಮ ಮೇಲಿನ ನಿರೀಕ್ಷೆಗಳು ಕಡಿಮೆ ಆಗುತ್ತವೆ?’ ಎಂದು ಸೆಹ್ವಾಗ್‌ ಹೇಳಿದ್ದಾರೆ.

RELATED ARTICLES

Latest News