Friday, May 17, 2024
Homeಬೆಂಗಳೂರುಅರಮನೆ ಮೈದಾನ ಅಗಲೀಕರಣಕ್ಕೆ ನೀಡಿರುವ ಅಕ್ರಮ ಟಿಡಿಆರ್‌ ರದ್ದಿಗೆ ಎನ್‌ಆರ್‌ಆರ್‌ ಆಗ್ರಹ

ಅರಮನೆ ಮೈದಾನ ಅಗಲೀಕರಣಕ್ಕೆ ನೀಡಿರುವ ಅಕ್ರಮ ಟಿಡಿಆರ್‌ ರದ್ದಿಗೆ ಎನ್‌ಆರ್‌ಆರ್‌ ಆಗ್ರಹ

ಬೆಂಗಳೂರು,ಏ.29- ಅರಮನೆ ಮೈದಾನ ರಸ್ತೆ ಅಗಲಿಕರಣ ವಿಚಾರದಲ್ಲಿ 18,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಟಿಡಿಆರ್‌ ಅನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ಆರೋಪಿಸಿದ್ದಾರೆ.

ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಂತಿರುವ ಬಳ್ಳಾರಿ ರಸ್ತೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಒಟ್ಟು 13,96,742 ಚ. ಅಡಿಗಳಷ್ಟು ಜಾಗಕ್ಕೆ 1,396 ರೂ. ಮೌಲ್ಯದ ಟಿಡಿಆರ್‌ ಅನ್ನು ನೀಡಲಾಗುತ್ತಿದೆ ಎಂಬ ತಪ್ಪು ಮಾಹಿತಿಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಮಾಧ್ಯಮಗಳಿಗೆ ನೀಡಿರುತ್ತದೆ.

ಆದರೆ, ವಾಸ್ತವವಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು 13,96,742 ಚ. ಅಡಿಗಳಷ್ಟು ವಿಸ್ತೀರ್ಣದ ಸ್ವತ್ತಿಗೆ ನೀಡುತ್ತಿರುವ ಟಿಡಿಆರ್‌ನ ಒಟ್ಟು ಮೌಲ್ಯ ಕನಿಷ್ಠ 18,000 ಕೋಟಿ ರೂಪಾಯಿಗಳಿಗೂ ಅಧಿಕವಾಗಿರು ತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಾಸ್ತವವಾಗಿ ಖಾಸಗಿ ಸ್ವತ್ತಿನ ವಿಸ್ತೀರ್ಣವನ್ನು ಲೆಕ್ಕ ಹಾಕಿ ಅದಕ್ಕೆ ಅನುಗುಣವಾಗಿ ಟಿಡಿಆರ್‌ಗಳನ್ನು ನೀಡಬೇಕಿರುತ್ತದೆ. ಆದರೆ, ಈ ಪ್ರಕರಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ವಶಪಡಿಸಿಕೊಳ್ಳ ಲಾಗಿರುವ ಸ್ವತ್ತಿನ ವಿಸ್ತೀರ್ಣಕ್ಕೆ ಬದಲಾಗಿ ಆ ಸ್ವತ್ತಿನಲ್ಲಿ ನಿರ್ಮಿಸಿದ್ದ ಹಳೆಯ ಕಟ್ಟಡಗಳ ಒಟ್ಟು ನಿರ್ಮಿತ ಪ್ರದೇಶವನ್ನೂ ಸೇರಿಸಿ ವಿಸ್ತೀರ್ಣದ ಲೆಕ್ಕ ಹಾಕಿರುವುದು ಕಾನೂನು ಬಾಹಿರ ಕ್ರಮವಾಗಿರುತ್ತದೆ ಎಂದು ಅವರು ಆರೋಪಿಸಿದ್ದಾರೆ.

ವಾಸ್ತವವಾಗಿ ಭೂಸ್ವೕಾನ ಪಡಿಸಿಕೊಂಡಿರುವುದು ಸುಮಾರು 2ಲಕ್ಷ ಅಡಿಗಳಷ್ಟು ಜಾಗ ಮಾತ್ರ. ಆದರೆ, ಪಾಲಿಕೆಯು ಟಿಡಿಆರ್‌ ನೀಡಲು ಹೊರಟಿರುವುದು 13,96,742 ಚ. ಅಡಿಗಳಷ್ಟು ಜಾಗಕ್ಕೆ ಎಂಬುದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಸ್ವೕಾನಪಡಿಸಿಕೊಂಡಿರುವ ಜಾಗದಲ್ಲಿ ನಿರ್ಮಿಸಲಾಗಿದ್ದ ಅತ್ಯಂತ ಹಳೆಯ ಕಟ್ಟಡಗಳ ಒಟ್ಟು ನಿರ್ಮಿತ ಪ್ರದೇಶಗಳನ್ನು ಸೇರಿಸಿ ಟಿಡಿಆರ್‌ ನೀಡಲಾಗುತ್ತಿದೆ.

ಸರ್ಕಾರದಲ್ಲಿರುವ ಅತ್ಯಂತ ಪ್ರಭಾವೀ ರಾಜಕಾರಣಿಗಳು ಹಾಗೂ ಪ್ರಭಾವೀ ಟಿಡಿಆರ್‌ ಮಾಫಿಯಾದ ಒತ್ತಡಗಳಿಗೆ ಮಣಿದು ಬಿಬಿಎಂಪಿ ಇಂತಹ ಜನ ವಿರೋ ಕಾರ್ಯಕ್ಕೆ ಮುಂದಾಗಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು, ಪ್ರಭಾವಿಗಳ ಒತ್ತಡಕ್ಕೆ ಮಣಿಯಬಾರದೆಂದು ಹಾಗೂ ಈಗಾಗಲೇ ಈ ಪ್ರಕರಣವು ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಕಾರಣ ಈ ಬೃಹತ್‌ ಹಗರಣಕ್ಕೆ ಸಂಬಂಧಿಸಿದ ವಾಸ್ತವ ಸ್ಥಿತಿಗತಿಗಳನ್ನು ನುರಿತ ವಕೀಲರ ಮೂಲಕ ನ್ಯಾಯಾಲಯದ ಗಮನಕ್ಕೆ ತರಬೇಕೆಂದು ಮತ್ತು ಆ ಮೂಲಕ ಪ್ರಭಾವಿ ರಾಜಕಾರಣಿಗಳು ಮತ್ತು ಟಿಡಿಆರ್‌ ಮಾಫಿಯಾದವರ ಸಂಚನ್ನು ವಿಫಲಗೊಳಿಸುವ ಸಂಬಂಧ ಕಾನೂನು ರೀತ್ಯಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್‌ ಹಾಗೂ ಮುಖ್ಯ ಆಯುಕ್ತ ತುಷಾರ್‌ಗಿರಿನಾಥ್‌ ಅವರಿಗೆ ಪತ್ರ ಬರೆದಿದ್ದಾರೆ.

RELATED ARTICLES

Latest News