Thursday, December 12, 2024
Homeರಾಷ್ಟ್ರೀಯ | Nationalಹೇಮಂತ್‌ ಸೊರೆನ್‌ ಆಪ್ತ ಬಿಜೆಪಿಗೆ

ಹೇಮಂತ್‌ ಸೊರೆನ್‌ ಆಪ್ತ ಬಿಜೆಪಿಗೆ

ನವದೆಹಲಿ,ನ.4-ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ಗೆ ಬಿಜೆಪಿ ಮುಟ್ಟಿ ನೋಡಿಕೊಳ್ಳುವಂತಹ ಶಾಕ್‌ ನೀಡಿದೆ.
ಹೇಮಂತ್‌ ಸೊರೆನ್‌ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ನಾಲ್ವರು ಪ್ರತಿಪಾದಕರಲ್ಲಿ ಒಬ್ಬರಾಗಿದ್ದ ಬುಡಕಟ್ಟು ಜನಾಂಗದ ಮುಖಂಡ ಮಂಡಲ್‌ ಮುರ್ಮುಗೆ ಬಿಜೆಪಿ ಗಾಳ ಹಾಕಿದೆ.

ಬುಡಕಟ್ಟು ಜನಾಂಗದ ಐಕಾನ್‌ಗಳಾದ ಸಿಧೋ ಮತ್ತು ಕನ್ಹು ಅವರ ನೇರ ವಂಶಸ್ಥರಾದ ಮಂಡಲ್‌ ಮುರ್ಮು ಅವರು ತಡರಾತ್ರಿ ಲೋಕಸಭಾ ಸದಸ್ಯ ನಿಶಿಕಾಂತ್‌ ದುಬೆ ಅವರ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯ ಜಾರ್ಖಂಡ್‌ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಶಿವರಾಜ್‌ ಚೌಹಾಣ್‌‍, ಸಹ ಉಸ್ತುವಾರಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂತಾಲ್‌ ಪರಗಣದಲ್ಲಿ ಆಪಾದಿತ ಜನಸಂಖ್ಯಾ ಬದಲಾವಣೆಗೆ ಪರಿಹಾರವನ್ನು ಕಂಡುಹಿಡಿಯಲು ಬಿಜೆಪಿಯೊಂದಿಗೆ ಕೆಲಸ ಮಾಡುವುದಾಗಿ ಮುರ್ಮು ಹೇಳಿದರು, ಸಿಧೋ, ಕನ್ಹು, ಚಾಂದ್‌, ಭೈರವ್‌, ಫುಲೋ ಮತ್ತು ಜಾನೋ ಎಂಬ ಆರು ಹುತಾತರನ್ನು ನೀಡಿದ ಕುಟುಂಬಕ್ಕೆ ನಾನು ಸೇರಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಬ್ರಿಟಿಷರ ವಿರುದ್ಧ 1855 ರ ಸಂತಾಲ್‌ ದಂಗೆಯನ್ನು ಸಿಧೋ ಮತ್ತು ಕನ್ಹು ನೇತತ್ವ ವಹಿಸಿದ್ದರು. ದಂಗೆಯ ಸಮಯದಲ್ಲಿ ಅವರ ಸಹೋದರರಾದ ಚಾಂದ್‌ ಮತ್ತು ಭೈರವ್‌ ಮತ್ತು ಸಹೋದರಿಯರಾದ ಫುಲೋ ಮತ್ತು ಜಾನೋ ಕೊಲ್ಲಲ್ಪಟ್ಟರು. ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ನಂತರ ಅವರು ಅತ್ಯಂತ ಗೌರವಾನ್ವಿತ ಬುಡಕಟ್ಟು ಐಕಾನ್‌ಗಳಲ್ಲಿ ಸೇರಿದ್ದಾರೆ. ಕುಟುಂಬವು ಬರ್ಹೈತ್‌ ಅಸೆಂಬ್ಲಿ ಸ್ಥಾನದಲ್ಲಿರುವ ಭೋಗ್ನಾಡಿಹ್‌ ಗ್ರಾಮಕ್ಕೆ ಸೇರಿದೆ. ಸೊರೆನ್‌ ಅಸೆಂಬ್ಲಿಯಲ್ಲಿ ಬರ್ಹೈತ್‌ (ಸಂತಾಲ್‌ ಪರಗಣ ವಿಭಾಗ) ಪ್ರತಿನಿಧಿಸುತ್ತಾರೆ.

RELATED ARTICLES

Latest News