Friday, April 11, 2025
Homeರಾಜ್ಯಮಳೆ, ಬೆಳೆ ಜೊತೆ ಕಮಲ ಅರಳಲಿದೆ: ಮೈಲಾರ ಲಿಂಗೇಶ್ವರ ಭವಿಷ್ಯ..

ಮಳೆ, ಬೆಳೆ ಜೊತೆ ಕಮಲ ಅರಳಲಿದೆ: ಮೈಲಾರ ಲಿಂಗೇಶ್ವರ ಭವಿಷ್ಯ..

ಕಡೂರು,ಫೆ.26- ಉತ್ತಮ ಮಳೆ,ಬೆಳೆಯಾಗಲಿದ್ದು ಕಮಲ ಅರಳಲಿದೆ ಎಂಬಾರ್ಥದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಾರ್ಣಿಕ ನುಡಿದಿದೆ. ಕಡೂರು ತಾಲೂಕಿನ ಜಿಗಣೆಹಳ್ಳಿ ಐತಿಹಾಸಿಕ ಮೈಲಾರಲಿಂಗೇಶ್ವರ ಸ್ವಾಮಿಯು ಹುಟ್ಟಿದ ಕಮಲ ಆಕಾಶ ಮೆಟ್ಟಿತು, ಮಳೆ ಬೆಳೆ ಸಂಪಾಯಿತಲೇ ಪರಾಕ್ ಎಂದು ಕಾರ್ಣಿಕ ನುಡಿಗೆ ಭಕ್ತರು ಖುಷಿಪಟ್ಟಿದ್ದಾರೆ.

ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ ಎನ್ನುವಾಗಲೇ, ಮತ್ತೆ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರ ಹಿಡಿಯಲಿದೆ ಎಂಬರ್ಥದಲ್ಲಿ ಜತೆಗೆ, ಮಳೆ-ಬೆಳೆ ಚೆನ್ನಾಗಿ ಆಗಲಿದೆ ಎಂಬ ಆಶಾವಾದದ ನುಡಿ ಎಂದು ವುಖ್ಯಾನಿಸಲಾಗಿದೆ.

ವೀರಪ್ಪನ್ ಪುತ್ರಿಯ ವಿದ್ಯಾಭ್ಯಾಸಕ್ಕೆ ಸಹಕರಿಸಿತ್ತು ಆರ್‌ಎಸ್‌ಎಸ್

ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ ಭವಿಷ್ಯ ಸಾಕಷ್ಡು ಭರಿ ನಿಜವಾಗಿದೆ. ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾಗಿದ್ದಾರೆ ದೇವರ ದರ್ಶನ ಪಡೆದು ಸತೋಷಪಟ್ಟಿದ್ದಾರೆ.

RELATED ARTICLES

Latest News