Sunday, September 8, 2024
Homeರಾಷ್ಟ್ರೀಯ | Nationalಮದುವೆ ನಿರಾಕರಿಸಿದ್ದಕ್ಕೆ ಇಡೀ ಕುಟುಂಬವನ್ನೇ ಕೊಂದು ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ

ಮದುವೆ ನಿರಾಕರಿಸಿದ್ದಕ್ಕೆ ಇಡೀ ಕುಟುಂಬವನ್ನೇ ಕೊಂದು ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ

ರಾಯ್ಪುರ್‌(ಛತ್ತೀಸ್‌‍ಗಢ)- ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬ ಓರ್ವ ಬಾಲಕ ಸೇರಿದಂತೆ ಒಂದೇ ಕುಟುಂಬದ ಐವರನ್ನು ಕೊಲೆ ಮಾಡಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತೀಸ್‌‍ಗಢದಲ್ಲಿ ನಡೆದಿದೆ. ಸಾರಂಗಢ-ಬಿಲೈಗಢ ಜಿಲ್ಲೆಯ ಥರಗಾಂವ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಮನೋಜ್‌ ಸಾಹು(30) ಕೊಲೆ ಆರೋಪಿಯಾಗಿದ್ದು, ವೃತ್ತಿಯಲ್ಲಿ ದರ್ಜಿ(ಟೈಲರ್‌) ಆಗಿದ್ದಾನೆ.

ಈತ ಹೇಮಲಾಲ್‌ ಸಾಹು (55), ಅವರ ಪತ್ನಿ ಜಗಮೋತಿ ಸಾಹು (50), ಅವರ ಪುತ್ರಿಯರಾದ ಮೀರಾ ಸಾಹು (30) ಮತ್ತು ಮಮತಾ ಸಾಹು (35) ಮತ್ತು ಮೀರಾ ಅವರ ಮಗ ಆಯುಷ್‌ (5) ಬಲಿಯಾಗಿದ್ದಾರೆ.

ಮೀರಾ ಸಾಹು ಅವರನ್ನು ಮದುವೆಯಾಗುವ ಆಸೆ ಹೊಂದಿದ್ದ ಈಗ ಆಕೆಯ ಬಳಿ ತನ್ನ ಮದುವೆಯಾಗುವಂತೆ ಪ್ರಸ್ತಾಪ ಮಾಡಿದ್ದ. ಇದನ್ನು ನಿರಾಕರಿಸಿದ್ದ ಕಾರಣಕ್ಕೆ ದ್ವೇಷ ಹೊಂದಿದ್ದ ಈತ ರಾತ್ರಿ ಆಕೆಯ ಮನೆ ನುಗ್ಗಿ ಅವಳ ಇಡೀ ಕುಟುಂಬವನ್ನೇ ಕೊಲೆ ಮಾಡಿದ್ದಾನೆ.

ಮೊದಲು ಹಾಲ್‌ನಲ್ಲಿ ಮಲಗಿದ್ದ ಹೇಮಲಾಲ್‌‍, ನಂತರ ಬೆಡ್‌ರೂಮ್‌ನಲ್ಲಿ ಮಲಗಿದ್ದ ಮಮತಾ ಮತ್ತು ಆಕೆಯ ಮಗ ಆಯುಷ್‌ ಜೊತೆ ಮಲಗಿದ್ದ ಮೀರಾ ಅವರನ್ನು ಕೊಂದು ಹಾಕಿದ್ದಾನೆ. ನಂತರ ಮತ್ತೊಂದು ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗ್ಗೆ ಸಂಬಂಧಿಕರು ಮೀರಾಳಿಗೆ ಕರೆ ಮಾಡಿದ್ದು, ಪ್ರತಿಕ್ರಿಯೆ ಬಾರದಿದ್ದಾಗ ಕುಟುಂಬದ ಇತರ ಸದಸ್ಯರಿಗೂ ಕರೆ ಮಾಡಿದ್ದಾರೆ. ಆಗಲೂ ಉತ್ತರ ಬರದಿದ್ದಾಗ ನೆರೆಹೊರೆಯವರಿಗೆ ವಿಷಯ ತಿಳಿಸಿ ಪರಿಶೀಲಿಸುವಂತೆ ಕೋರಿಕೊಂಡಿದ್ದಾರೆ. ಅಕ್ಕಪಕ್ಕದವರು ಸ್ಥಳಕ್ಕೆ ಬಂದು ನೋಡಿದಾಗ ಕೊಲೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.

ಮೀರಾ ತನ್ನ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದರಿಂದ ಮನೋಜ್‌ ಮೀರಾ ಮತ್ತು ಅವಳ ಸಹೋದರಿಯ ಮೇಲೆ ಹಲ್ಲೆ ನಡೆಸಿದ್ದನು. 2017ರಲ್ಲಿ ಈತನ ವಿರುದ್ಧ ಅತಿಕ್ರಮಣ ಮತ್ತು ಹಲ್ಲೆಗಾಗಿ ಮೀರಾಳಿಂದ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಪುಷ್ಕರ್‌ ಶರ್ಮಾ ತಿಳಿಸಿದ್ದಾರೆ.

RELATED ARTICLES

Latest News