Friday, October 11, 2024
Homeರಾಷ್ಟ್ರೀಯ | Nationalಕಾಶ್ಮೀರಿ ಪಂಡಿತರಿಂದ ಶೇ.40 ರಷ್ಟು ಮತದಾನ

ಕಾಶ್ಮೀರಿ ಪಂಡಿತರಿಂದ ಶೇ.40 ರಷ್ಟು ಮತದಾನ

ಜಮ್ಮು , ಸೆ 26 (ಪಿಟಿಐ) ಜಮು ಮತ್ತು ಕಾಶೀರದಲ್ಲಿ ನಿನ್ನೆ ನಡೆದ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಜಮುವಿನಲ್ಲಿ ಸುಮಾರು 40 ಪ್ರತಿಶತ ವಲಸಿಗ ಕಾಶೀರಿ ಪಂಡಿತರು ಮತ ಚಲಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು, ದೆಹಲಿ ಮತ್ತು ಉಧಂಪುರದಲ್ಲಿ ಸ್ಥಾಪಿಸಲಾದ 24 ಕೇಂದ್ರಗಳಲ್ಲಿ ಮತದಾನ ನಡೆಯಿತು. ಜಮ್ಮುವಿನ 19 ಮತಗಟ್ಟೆಗಳಲ್ಲಿ ಸುಮಾರು 40 ಪ್ರತಿಶತದಷ್ಟು ಮತದಾನವಾಗಿದೆ, ನಂತರ ಉಧಮ್‌ಪುರದಲ್ಲಿ ಶೇಕಡಾ 37 ಮತ್ತು ದೆಹಲಿಯಲ್ಲಿ ಶೇ. 43 ರಷ್ಟು ಮತದಾನವಾಗಿದೆ ಎಂದು ಪರಿಹಾರ ಮತ್ತು ಪುನರ್ವಸತಿ ಆಯುಕ್ತ ಅರವಿಂದ್‌ ಕರ್ವಾನಿ ಪಿಟಿಐಗೆ ತಿಳಿಸಿದ್ದಾರೆ. ಅಧಿಕತ ಅಂಕಿ ಅಂಶಗಳ ಪ್ರಕಾರ, 3,514 ಪುರುಷರು ಮತ್ತು 2,736 ಮಹಿಳೆಯರು ಸೇರಿದಂತೆ ಒಟ್ಟು 6,250 ಮತದಾರರು ಮತ ಚಲಾಯಿಸಿದ್ದಾರೆ.

ಒಂದು ಕಾಲದಲ್ಲಿ ಕಾಶ್ಮೀರಿ ಪಂಡಿತರ ಭದ್ರಕೋಟೆಯಾಗಿದ್ದ ಹಬಕದಲ್‌ ಕ್ಷೇತ್ರದಲ್ಲಿ ಅತಿ ಹೆಚ್ಚು 2,796 ಮತಗಳು ಚಲಾವಣೆಯಾಗಿವೆ, ನಂತರ ಲಾಲ್‌ ಚೌಕ್‌ನಲ್ಲಿ 909 ಮತ್ತು ಝಾದಿಬಾಲ್‌ನಲ್ಲಿ 417 ಮತಗಳು ಚಲಾವಣೆಯಾದವು. ಮೊದಲ ಹಂತದ ಮತದಾನದಲ್ಲಿ ಜಮ್ಮು ವಿನ 19 ಮತಗಟ್ಟೆಗಳಲ್ಲಿ ಸ್ಥಳಾಂತರಗೊಂಡ ಕಾಶೀರಿ ಪಂಡಿತರಲ್ಲಿ ಶೇ.27ರಷ್ಟು ಮತದಾನವಾಗಿದ್ದರೆ, ಉಧಂಪುರದ ಒಂದು ಮತಗಟ್ಟೆಯಲ್ಲಿ ಶೇ.31.39ರಷ್ಟು ಮತದಾನವಾಗಿದೆ.

ಸೆಪ್ಟೆಂಬರ್‌ 18 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಜಮುವಿನ ದಕ್ಷಿಣ ಕಾಶ್ಮೀರಿ ಸ್ಥಾನಗಳಿಗೆ 34,000 ರಲ್ಲಿ 9,218 ಕಾಶ್ಮೀರಿ ಪಂಡಿತರು ತಮ್ಮ ಹಕ್ಕು ಚಲಾಯಿಸಿದರೆ, 15,500 ಕ್ಕೂ ಹೆಚ್ಚು ಮತದಾರರಲ್ಲಿ 6,250 ಮತದಾರರು ಬುಧವಾರ ಎರಡನೇ ಹಂತದಲ್ಲಿ ಸೆಂಟ್ರಲ್‌ ಕಾಶೀರ ಸ್ಥಾನಕ್ಕೆ ಮತ ಚಲಾಯಿಸಿದ್ದಾರೆ.

ಬಿಗಿ ಭದ್ರತೆಯಲ್ಲಿ ಕಾಶೀರದ 15 ಕ್ಷೇತ್ರಗಳು ಸೇರಿದಂತೆ 26 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಯಿತು. ಎರಡನೇ ಹಂತದ ವಿಧಾನಸಭಾ ಚುನಾವಣೆಯು ಆರು ಜಿಲ್ಲೆಗಳನ್ನು ಒಳಗೊಂಡಿದೆ . ಈ ಹಂತದಲ್ಲಿ ಶ್ರೀನಗರ ಜಿಲ್ಲೆಯಲ್ಲಿ 93 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಬುದ್ಗಾಮ್‌ನಲ್ಲಿ 46, ರಾಜೌರಿಯಲ್ಲಿ 34, ಪೂಂಚ್‌ನಲ್ಲಿ 25, ಗಂದರ್‌ಬಲ್‌ನಲ್ಲಿ 21 ಮತ್ತು ರಿಯಾಸಿಯಲ್ಲಿ 20 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

RELATED ARTICLES

Latest News