Thursday, September 19, 2024
Homeಬೆಂಗಳೂರುಹಿರಿಯ ಪತ್ರಕರ್ತ ರಮೇಶ್‌ ಪಾಳ್ಯ ಅವರಿಗೆ ಮಾತೃವಿಯೋಗ

ಹಿರಿಯ ಪತ್ರಕರ್ತ ರಮೇಶ್‌ ಪಾಳ್ಯ ಅವರಿಗೆ ಮಾತೃವಿಯೋಗ

ಬೆಂಗಳೂರು,ಜೂ.26– ಈ ಸಂಜೆ ಪತ್ರಿಕೆಯ ಹಿರಿಯ ವರದಿಗಾರ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಪಾಳ್ಯ ಅವರ ತಾಯಿ ಜಯಮ್ಮ(69) ಇಂದು ನಿಧನರಾಗಿದ್ದಾರೆ.

ಮೃತರು ಪತಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಕಾಮಾಕ್ಷಿಪಾಳ್ಯದ ಸ್ವಗೃಹದಲ್ಲಿ ಕೆಲಕಾಲ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ನಂತರ ಮೃತ ದೇಹವನ್ನು ಮಾಗಡಿ ತಾಲ್ಲೂಕಿನ ಸೋಲೂರು ಬಳಿಯ ವೀರಾಪುರಕ್ಕೆ ಕೊಂಡೊಯ್ದು ಅವರ ಜಮೀನಿನಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಹೃದಯಾಘಾತಕ್ಕೆ ಒಳಗಾಗಿದ್ದ ಅವರು ಕಳೆದೊಂದು ವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದರು. ಚಿಕಿತ್ಸೆ ಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

RELATED ARTICLES

Latest News