Saturday, July 27, 2024
Homeಮನರಂಜನೆಜೂ.ಎನ್‌ಟಿಆರ್‌ ಚಿತ್ರ ನಿರ್ದೇಸಿಸಲಿದ್ದಾರೆ ಕೆಜಿಎಫ್‌ ಖ್ಯಾತಿಯ ಪ್ರಶಾಂತ್‌ ನೀಲ್‌

ಜೂ.ಎನ್‌ಟಿಆರ್‌ ಚಿತ್ರ ನಿರ್ದೇಸಿಸಲಿದ್ದಾರೆ ಕೆಜಿಎಫ್‌ ಖ್ಯಾತಿಯ ಪ್ರಶಾಂತ್‌ ನೀಲ್‌

ಮುಂಬೈ,ಮೇ.20- ಜೂನಿಯರ್‌ ಎನ್‌ಟಿಆರ್‌ ಅಭಿನಯದ ಎನ್‌ಟಿಆರ್‌ 31 ಚಿತ್ರದ ನಿರ್ದೇಶಕರಾಗಿ ಕೆಜಿಎಫ್‌ ಖ್ಯಾತಿಯ ಪ್ರಶಾಂತ್‌ ನೀಲ್‌ ಆಯ್ಕೆಯಾಗಿದ್ದಾರೆ.ಇಂದು ತಮ್ಮ 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಜೂನಿಯರ್‌ ಎನ್‌ಟಿಆರ್‌ ಅವರು ತಮ್ಮ X ಖಾತೆಯಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ.

ಬರುವ ಆಗಸ್ಟ್‌ನಿಂದ ಎನ್‌ಟಿಆರ್‌ 31 ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕೆಜಿಎಫ್‌ ಚಿತ್ರದ ಮೂಲಕ ಪ್ರವರ್ಧಮಾನಕ್ಕೆ ಬಂದಿರುವ ಕನ್ನಡಿಗ ಪ್ರಶಾಂತ್‌ ನೀಲ್‌ ಈಗಾಗಲೇ ತೆಲುಗಿನಲ್ಲಿ ಪ್ರಭಾಸ್‌‍ ನಟನೆಯ ಸಲಾರ್‌ ಚಿತ್ರ ನಿರ್ದೇಶಿಸಿ ಗಮನ ಸೆಳೆದಿದ್ದಾರೆ. ಪ್ರಸ್ತುತ, ಜೂನಿಯರ್‌ ಎನ್ಟಿಆರ್‌ ತಮ್ಮ ಮುಂಬರುವ ಆಕ್ಷನ್‌ ಚಿತ್ರ ದೇವರ ಚಿತ್ರದ ಅಧ್ಯಾಯ 1 ಬಿಡುಗಡೆಗೆ ಸಜ್ಜಾಗಿದ್ದಾರೆ.

RELATED ARTICLES

Latest News