Friday, October 25, 2024
Homeಇದೀಗ ಬಂದ ಸುದ್ದಿಮುಂದಿನ ಸಿಜೆಐ ಆಗಿ ಸಂಜೀವ್‌ ಖನ್ನಾ ಅವರನ್ನು ನೇಮಕ ಮಾಡಿದ ರಾಷ್ಟ್ರಪತಿಗಳು

ಮುಂದಿನ ಸಿಜೆಐ ಆಗಿ ಸಂಜೀವ್‌ ಖನ್ನಾ ಅವರನ್ನು ನೇಮಕ ಮಾಡಿದ ರಾಷ್ಟ್ರಪತಿಗಳು

Justice Sanjiv Khanna appointed as Chief Justice of India

ನವದೆಹಲಿ,ಅ.25- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನೇಮಕ ಮಾಡಿದ್ದಾರೆ. ನ್ಯಾಯಮೂರ್ತಿ ಖನ್ನಾ ಅವರು ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಅಧಿಕಾರವಧಿ ಮೇ 13, 2025ರವರೆಗೆ ಸುಮಾರು ಏಳು ತಿಂಗಳ ಅವಧಿಯವರೆಗೆ ಇರುತ್ತದೆ.

ಪ್ರಸ್ತುತ ಸುಪ್ರೀಂಕೋರ್ಟ್‌ನಲ್ಲಿ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಖನ್ನಾ ಅವರು ಪ್ರಸ್ತುತ ಸಿಜೆಐ ಡಿ.ವೈ.ಚಂದ್ರಚೂಡ್‌ ಅವರ ನಂತರ 2024ರ ನವೆಂಬರ್‌ 11ರಂದು ಅಧಿಕಾರ ಸ್ವೀಕರಿಸಲಿದ್ದಾರೆ.ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಮುಖ್ಯ ನ್ಯಾಯಮೂರ್ತಿಗೆ ರಾಷ್ಟಪತಿಯವರು ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ.

ಹುದ್ದೆಯಿಂದ ನಿವೃತ್ತರಾಗಲಿರುವ ಡಿ.ವೈ. ಚಂದ್ರಚೂಡ್‌ ಅವರು ಮಾಡಿದ ಶಿಫಾರಸನ್ನು ಕೊಲಿಜಿಯಂ ಸಮತಿಸಿದೆ. ನ್ಯಾಯಮೂರ್ತಿ ಚಂದ್ರಚೂಡ್‌ ಅವರು ನವೆಂಬರ್‌ 8, 2022ರಂದು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ನವೆಂಬರ್‌ 11, 2024 ರಿಂದ ಜಾರಿಗೆ ಬರುವಂತೆಭಾರತದ ಸಂವಿಧಾನವು ನೀಡಿರುವ ಅಧಿಕಾರವನ್ನು ಚಲಾಯಿಸಿ, ಗೌರವಾನ್ವಿತ ರಾಷ್ಟ್ರಪತಿಗಳು, ಭಾರತದ ಗೌರವಾನ್ವಿತ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿದ ನಂತರ, ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಜಸ್ಟೀಸ್‌‍ ಸಂಜೀವ್‌ ಖನ್ನಾ ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಸಂತೋಷವಾಗಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಹೇಳಿದ್ದಾರೆ.

ಸಂಜೀವ್‌ ಖನ್ನಾ ಯಾರು?:
ಜಸ್ಟಿಸ್‌‍ ಖನ್ನಾ ಅವರು ದೆಹಲಿ ಹೈಕೋರ್ಟ್‌ನಿಂದ ಜನವರಿ 18, 2019ರಂದು ಸುಪ್ರೀಂಕೋರ್ಟ್‌ಗೆ ನೇಮಕಗೊಂಡರು. ಅವರು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ, ಅವರು ಹಲವಾರು ರಾಜಕೀಯವಾಗಿ ಸೂಕ್ಷ್ಮ ಪ್ರಕರಣಗಳ ಪೀಠಗಳ ನೇತೃತ್ವ ವಹಿಸಿದ್ದರು.ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ವಿಶೇಷವಾಗಿ ಆಮ್‌ ಆದಿ ಪಕ್ಷದ (ಎಎಪಿ) ನಾಯಕ ಅರವಿಂದ್‌ ಕೇಜ್ರೀವಾಲ್‌ ಮನೀಶ್‌ ಸಿಸೋಡಿಯಾ ಮತ್ತು ಸಂಜಯ್‌ ಸಿಂಗ್‌. ಅರ್ಜಿಗಳಿಗೆ ಸಂಬಂಧಿಸಿದಂತೆ ಆದೇಶ ನೀಡಿದ್ದರು.

ಮೇ ತಿಂಗಳಲ್ಲಿ ನ್ಯಾಯಮೂರ್ತಿ ಖನ್ನಾ ಅವರ ಪೀಠವು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ನಿರ್ದಿಷ್ಟವಾಗಿ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ನೀಡಿತ್ತು.

ನಂತರ, ಜುಲೈನಲ್ಲಿ, ಪೀಠವು ಮತ್ತೆ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿತು ಮತ್ತು ಕಾನೂನಿನ ದುರುಪಯೋಗವನ್ನು ತಡೆಗಟ್ಟಲು ಮನಿ ಲಾಂಡರಿಂಗ್‌ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಬಂಧಿಸಲು ಹೆಚ್ಚುವರಿ ಆಧಾರಗಳ ಅಗತ್ಯವನ್ನು ಅನ್ವೇಷಿಸಲು ಪ್ರಕರಣವನ್ನು ವಿಸ್ತತ ಪೀಠಕ್ಕೆ ವರ್ಗಾಯಿಸಿತ್ತು.

ನ್ಯಾಯಮೂರ್ತಿ ಖನ್ನಾ ಅವರ ಪೀಠವು ವಿದ್ಯುನಾನ ಮತಯಂತ್ರಗಳು (ಇವಿಎಂಗಳು) ಮತ್ತು ಮತದಾರರ ದೃಢೀಕೃತ ಪೇಪರ್‌ ಆಡಿಟ್‌ ಟ್ರೇಲ್ಸ್ (ವಿವಿಪಿಎಟಿ) ಗಳಿಗೆ ಸಂಬಂಧಿಸಿದ ತೀರ್ಪು ನೀಡಿತ್ತು. ಶೇ100 ಪ್ರತಿಶತ ವಿವಿಪ್ಯಾಟ್‌ ಪರಿಶೀಲನೆಯ ಮನವಿಯನ್ನು ಅದು ತಿರಸ್ಕರಿಸಿದರೆ, ತೀರ್ಪು ಹೆಚ್ಚುವರಿ ಸುರಕ್ಷತೆಗಳನ್ನು ಜಾರಿಗೆ ತರಲು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸೂಚನೆ ನೀಡಿತ್ತು.

ಇದಲ್ಲದೆ, 370ನೇ ವಿಧಿ ಮತ್ತು ಎಲೆಕ್ಟೋರಲ್‌ ಬಾಂಡ್‌ಗಳ ಪ್ರಕರಣಕ್ಕೆ ಸಂಬಂಧಿಸಿದವುಗಳನ್ನು ಒಳಗೊಂಡಂತೆ ಸಂವಿಧಾನ ಪೀಠದ ನಿರ್ಧಾರಗಳಿಗೆ ನ್ಯಾಯಮೂರ್ತಿ ಖನ್ನಾ ತೀರ್ಪು ನೀಡಿದ್ದರು.

ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರು 2025, ಮೇ 13ರಂದು ನಿವೃತ್ತರಾಗಲಿದ್ದು, ಆರು ತಿಂಗಳಿಗಿಂತಲೂ ಕಡಿಮೆ ಅವಧಿಗೆ ಸಿಜೆಐ ಹುದ್ದೆ ಅಲಂಕರಿಸಲಿದ್ದಾರೆ. ಇನ್ನು ವಕೀಲರಾಗಿ 1983ರಲ್ಲಿ ತೊಡಗಿಕೊಂಡ ಅವರು ತೆರಿಗೆ, ಮಧ್ಯಸ್ಥಿಕೆ, ವಾಣಿಜ್ಯ ಮತ್ತು ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಾಕ್ಟೀಸ್‌‍ ಮಾಡಿದ್ದಾರೆ.

2005ರಲ್ಲಿ ದೆಹಲಿ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಸಂಜೀವ್‌ ಖನ್ನಾ ಅವರನ್ನು ಒಂದು ವರ್ಷದ ಬಳಿಕ ಖಾಯಂ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ಬಳಿಕ ಅವರು 2019, ಜನವರಿ 18ರಂದು ಸುಪ್ರೀಂಕೋರ್ಟ್‌ಗೆ ಪದೋನ್ನತಿ ಪಡೆದಿದ್ದರು.

RELATED ARTICLES

Latest News