Thursday, May 2, 2024
Homeರಾಷ್ಟ್ರೀಯಕೊಯಮತ್ತೂರಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆಯಿಂದ 1,000 ಕೋಟಿ ರೂ. ಖರ್ಚು : ಅಣ್ಣಾಮಲೈ

ಕೊಯಮತ್ತೂರಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆಯಿಂದ 1,000 ಕೋಟಿ ರೂ. ಖರ್ಚು : ಅಣ್ಣಾಮಲೈ

ಚೆನ್ನೈ,ಏ.19- ಮತದಾರರ ಮೇಲೆ ಪ್ರಭಾವ ಬೀರಲು ಡಿಎಂಕೆ ಮತ್ತು ಎಐಎಡಿಎಂಕೆ ಕೊಯಮತ್ತೂರಿನಲ್ಲಿ 1,000 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಮತ್ತು ಕೊಯಮತ್ತೂರು ಅಭ್ಯರ್ಥಿ ಕೆ.ಅಣ್ಣಾಮಲೈ ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಕರೂರಿನ ಉತ್ತುಪಟ್ಟಿಯಲ್ಲಿನ ಮತಗಟ್ಟೆಯಲ್ಲಿ ವೋಟ್ ಮಾಡಿದ ನಂತರ ಮಾತನಾಡಿದ ಅವರು, ಬಿಜೆಪಿಯ ವ್ಯಕ್ತಿಯೊಬ್ಬರು ತಮ್ಮ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುವ ಯಾವುದೇ ವ್ಯಕ್ತಿಯನ್ನು ವಿರೋಧ ಪಕ್ಷಗಳು ಕರೆತರಲು ಸಾಧ್ಯವಾದರೆ, ಅವರು ಆ ದಿನವೇ ರಾಜಕೀಯವನ್ನು ತೊರೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಇಂದು ತಮಿಳುನಾಡಿನ ಎಲ್ಲಾ 39 ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ. ಕೊಯಮತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಡಿಎಂಕೆ ನಾಯಕ ಗಣಪತಿ ಪಿ.ರಾಜ್‍ಕುಮಾರ್ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಎಐಎಡಿಎಂಕೆಯ ಸಿಂಗೈ ರಾಮಚಂದ್ರನ್ ಸ್ರ್ಪಸಿದ್ದಾರೆ.

ಕೊಯಮತ್ತೂರಿನಲ್ಲಿ ಡಿಎಂಕೆ, ಎಐಎಡಿಎಂಕೆ ನಾಯಕರು ಏನು ಮಾಡುತ್ತಿದ್ದಾರೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ. ಕೊಯಮತ್ತೂರಿನಲ್ಲಿ 1,000 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿವೆ. ಆದರೆ, ಬಿಜೆಪಿಯವರು ತಮ್ಮ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾರಾದರೂ ಒಬ್ಬ ಮತದಾರನನ್ನು ಮಾಧ್ಯಮದ ಮುಂದೆ ಕರೆತಂದು ಹೇಳಿಸಿದರೆ, ನಾನು ಅದೇ ದಿನ ರಾಜಕೀಯ ತೊರೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.

ನಾನು ಈ ಚುನಾವಣೆಯಲ್ಲಿ ನಿಯಮದ ಪ್ರಕಾರ ಸ್ಪರ್ಧೆ ಮಾಡಿದ್ದೇನೆ. ಹಣದಿಂದ ಜನರನ್ನು ಖರೀದಿಸಬಹುದು ಎಂದು ಡಿಎಂಕೆ ಭಾವಿಸುತ್ತದೆ. ಎಐಎಡಿಎಂಕೆ ಕೂಡ ಅದೇ ದೋಣಿಯಲ್ಲಿ ಸಾಗಿದೆ ಎಂದು ದೂರಿದ್ದಾರೆ. ಕೊಯಮತ್ತೂರಿನಲ್ಲಿ ಕಳೆದ 2-3 ದಿನಗಳಿಂದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ನಮ್ಮ ಜನರು ಪದೇ ಪದೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

RELATED ARTICLES

Latest News